ಗದಗ, ಜು. 14 : ಕಾಗದದ ಚೀಲಗಳು ಪರಿಸರ ಸ್ನೇಹಿಯಾಗಿದ್ದು, ಇವು ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಇವುಗಳನ್ನು ಮರುಬಳಕೆಯು ಸಹ ನಾವು ಮಾಡಬಹುದು. ಪ್ಲಾಸ್ಟಿಕ್ ಇಂದು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೀವ ಸಂಕುಲಕ್ಕೆ ಮಾರಕವಾದ ಪ್ಲಾಸ್ಟಿಕ್ನ್ನು ನಾವು ತ್ಯಜಿಸಬೇಕು ಎಂದು ಗದಗ ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜು ವೇರ್ಣೆಕರ ಹೇಳಿದರು.
ಅವರು ಶನಿವಾರ ಗದಗ ಬೆಟಗೇರಿ ಲಯನ್ಸ್ ಕ್ಲಬ್ದಿಂದ ಹಮ್ಮಿಕೊಂಡ ’ಕಾಗದದ ಚೀಲ ದಿನಾಚರಣೆ’ ನಿಮಿತ್ಯ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ಲಾಸ್ಟಿಕ್ ಉತ್ಪನ್ನಗಳು ಮಾನವನ ಹಾಗೂ ಪರಿಸರಕ್ಕೆ ಅಪಾಯಕಾರಿಯಾಗಿವೆ. ನಾವಿಂದು ನಮಗೆ ತಿಳಿದೋ ತಿಳಿಯದೋ ಪ್ಲಾಸ್ಟಿಕ್ನನ್ನು ಪ್ರತಿನಿತ್ಯ ಬಳಸುತ್ತಿದ್ದೇವೆ. ಇನ್ನು ಮುಂದಾದರೂ ಜಾಗೃತಿಗೊಂಡ ನಾವು ಅಪಾಯಕಾರಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಿ ಮರುಬಳಕೆ ಮಾಡುವ ಹಾಗೂ ಹಾನಿಕಾರಕ ಅಲ್ಲದ ವಸ್ತುಗಳಿಂದ ತಯಾರಿಸಿದ ಕಾಗದ ಅಥವಾ ಬಟ್ಟೆ ಬ್ಯಾಗುಗಳನ್ನು ಬಳಸಿ ಜೀವ ಸಂಕುಲ ಹಾಗೂ ಪರಿಸರವನ್ನು ಉಳಿಸುವ ಮಹತ್ತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಜಾಥಾವು ನಗರದ ಮಹೇಂದ್ರಕರ್ ಸರ್ಕಲ್, ಟಾಂಗಾಕೂಟ ಮಾರ್ಗವಾಗಿ ಗ್ರೇನ್ ಮಾರ್ಕೆಟ್, ಬ್ಯಾಂಕ್ ರೋಡ್ ಮುಂತಾದ ಕಡೆ ಸಂಚರಿಸಿ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಕಾಗದದ ಚೀಲದ ಉಪಯೋಗ ಹಾಗೂ ಪ್ಲಾಸ್ಟಿಕ್ ನಿಷೇಧದ ಕುರಿತು ಜನಜಾಗೃತಿ ಮೂಡಿಸಲಾಯಿತು. ಕ್ಲಬ್ನ ಮಾಜಿ ಅಧ್ಯಕ್ಷ ರಮೇಶ ಶಿಗ್ಲಿ ಕಾಗದ ಚೀಲದ ಪ್ರಾಮುಖ್ಯತೆ ಕುರಿತು ಜಾಥಾದಲ್ಲಿ ತಿಳುವಳಿಕೆ ನೀಡಿದರು.
ಕ್ಲಬ್ನ ಕಾರ್ಯದರ್ಶಿ ರಾಜಣ್ಣ ಮಲ್ಲಾಡದ ಮಾತನಾಡಿ ಪ್ಲಾಸ್ಟಿಕ್ ತ್ಯಾಜ್ಯವು ಪರಿಸರದಲ್ಲಿನ ಜೀವ ಸಂಕುಲಕ್ಕೆ ಅಪಾಯಕಾರಿ ಆಗಿದೆ. ಮನುಷ್ಯ ಪ್ಲಾಸ್ಟಿಕ್ಗೆ ಹೊಂದಿಕೊಂಡು ಬಿಟ್ಟಿದ್ದಾನೆ. ಇವುಗಳನ್ನು ಆದಷ್ಟು ದೂರವಿಟ್ಟು ಪರಿಸರ ಸ್ನೇಹಿಗಳಾದ ಕಾಗದ ಹಾಗೂ ಬಟ್ಟೆಗಳಿಂದ ರಚನೆಗೊಂಡ ಚೀಲಗಳು ಅಪಾಯಕಾರಿ ಅಲ್ಲ. ಅದಕ್ಕಾಗಿ ಎಲ್ಲರೂ ಕಾಗದದ ಚೀಲ ಬಳಸಿ ಪ್ಲಾಸ್ಟಿಕ್ ಆದಷ್ಷು ನಿರ್ಮೂಲನೆ ಮಾಡಿ ಪರಿಸರ ಉಳಿಸೋಣ ಎಂದರು. ಕ್ಲಬ್ನ ಖಜಾಂಚಿ ರೇಣುಕಪ್ರಸಾದ ಹಿರೇಮಠ, ಪ್ರವೀಣ ವಾರಕರ, ಅರವಿಂದ ಪಟೇಲ, ರೇಣುಕಪ್ರಸಾಧ ಶಿಗ್ಲಿಮಠ, ಶಿವಪ್ರಭು ನೀಲಗುಂದ, ಕಾರ್ತಿಕ ಪಾಲನಕರ, ಯಶಸ್ಸ ಶಿಗ್ಲಿ ಮುಂತಾದವರು ಉಪಸ್ಥಿತರಿದ್ದರು.