ಹುಬ್ಬಳ್ಳಿ: ಸಾಹಿತಿ ಪ್ರೊ ಎಸ್.ಎಂ.ಸಾತ್ಮಾರ ಅವರು ಸಿಂಗಾಪುರ ಹಾಗೂ ಮಲೇಶಿಯ ರಾಷ್ಟ್ರಗಳಿಗೆ ವಿದೇಶಿ ಪ್ರವಾಸ ಕೈಗೊಂಡು, ಯಶಸ್ವಿಯಾಗಿ ಪೂರ್ಣಗೊಳಿಸಿ, ಸುರಕ್ಷಿತವಾಗಿ ನಗರಕ್ಕೆ ಆಗಮಿಸಿದ ಶುಭ ಸಂದರ್ಭದಲ್ಲಿ ಡಾ. ಫ. ಗು. ಹಳಕಟ್ಟಿ ಅವರ ಜಯಂತಿ ಅಂಗವಾಗಿ ದಾನೇಶ್ವರಿ ಸಂಗೀತ ವಿದ್ಯಾಲಯದಲ್ಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು, ಆತ್ಮೀಯರು, ಮಾರ್ಗದರ್ಶಕರು, ಹಿತೈಸಿಗಳು, ಸಮಾಜಮುಖಿ ಚಿಂತಕರು, ನಮ್ಮೇಲ್ಲರ ಕಾರ್ಯಕ್ರಮಗಳಿಗೆ ಸಹಾಯ-ಸಹಕಾರ ನೀಡಿ ಪ್ರೋತಾಹಿಸುತ್ತಿರುವ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ, ಇಂಗ್ಲೀಷ ವಿಷಯದ ಪ್ರಾಧ್ಯಾಪಕರು, ನಿವೃತ್ ಪ್ರಾಚಾರ್ಯ ೭೧ ವರ್ಷದ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ ಪ್ರೊ ಎಸ್.ಎಂ.ಸಾತ್ಮಾರ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಗ್ರಂಥ ನೀಡಿ, ಮಾಲಾರ್ಪಣೆ ಮಾಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ನಮನ, ಪ್ರಣಾಮಗಳನ್ನು ಸಲ್ಲಿಸಿ, ಗೌರವಿಸಿದರು, ಆಶೀರ್ವಾದ ಪಡೆದರು. ಶುಭ ಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ದಾನೇಶ್ವರಿ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕಿ, ಕನ್ನಡ ಪ್ರಾಧ್ಯಾಪಕಿ ಪ್ರೊ ಶೋಭಾ ಜಾಬಿನ, ಪ್ರೊ ಉಮಾ ಕೇರಿ, ಕವಿತಾ ಎಂ.ಯು, ಆವನಿ, ಶ್ರೇಯಾ, ಮಾನ್ಯ, ಹರ್ಷಿಕಾ, ಅನ್ವಿಕಾ, ತಾನ್ವಿ, ಅನ್ವಿತಾ, ವೀಣಾ, ಸ್ನೇಹಾ, ವೇದಾ, ಆರೋಹಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಉಮಾ
ಪ್ರೊ ಎಸ್.ಎಂ.ಸಾತ್ಮಾರ ಅವರ ಸಿಂಗಾಪುರ ಹಾಗೂ ಮಲೇಶಿಯ ರಾಷ್ಟ್ರಗಳ ಯಶಸ್ವಿ ಪ್ರವಾಸ
