ಬಳ್ಳಾರಿ,ಜು.14: ನಗರದ ಕೌಲ್ ಬಜಾರ್ ಭಾಗದಲ್ಲಿ ಮಹಾನಗರ ಪಾಲಿಕೆಯ ಉಪ ಮೇಯರ್ ಡಿ.ಸುಕುಂ ರಿಯಾಜ್ ಅವರು ಇಂದು ಬೆಳ್ಳಂ ಬೆಳಿಗ್ಗೆ ವಾರ್ಡಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಿದರು. ಬೇಟಿ ನೀಡಿದ ಸಂದರ್ಭದಲ್ಲಿ ಎಲ್ಲಾ ವಾರ್ಡುಗಳಲ್ಲಿ ಕಸ ರಾಶಿಯನ್ನು ಕಂಡು ಪಾಲಿಕೆಯ ಆರೋಗ್ಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಕರೆಸಿ ಪೌರಕಾರ್ಮಿಕರಿಗೆ ಆದಷ್ಟು ಬೇಗನೆ ಸ್ವಚ್ಛತೆ ಮಾಡಬೇಕು ಎಂದು ತಿಳಿಸಿದರು.
ವಾರ್ಡಿನಲ್ಲಿ ಬೇಟಿ ನೀಡಿದ ಸಮಯದಲ್ಲಿ ಸಾರ್ವಜನಿಕರು ಸ್ವಚ್ಛತೆಯ ಬಗ್ಗೆ ಕ್ರಮಕೆಳ್ಳಬೇಕು ಎಂದಾಗ ಉಪ ಮೇಯರ್ ಅವರು ಪೌರಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 5ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಂಡಿದ್ದ ಕಾರಣ ಈ ರೀತಿ ಸಮಸ್ಯೆ ಎದುರಾಗಿದೆ ಆದಷ್ಟು ಬೇಗನೆ ಸ್ವಚ್ಛತೆ ಮಾಡುತ್ತಾರೆ ಎಂದು ಜನರಿಗೆ ಹೇಳಿದರು.
ನಂತರ ಎಲ್ಲ ವಾರ್ಡುಗಳನ್ನು ವೀಕ್ಷಣೆ ಮಾಡಿ ಕೆಲವು ಸಮಸ್ಯೆಗಳನ್ನು ಆಲಿಸಿದರು. ಕೆಲವು ವಾರ್ಡಿನಲ್ಲಿ ಸಾರ್ವಜನಿಕರು ಚರಂಡಿಯ ತುಂಬಾ ಊಳು ತುಂಬಿದೆ, ಅಲ್ಲದೆ ತುಂಬಾ ವಾಸನೆ ಬರುತ್ತಿದ್ದು, ಸ್ವಚ್ಛತೆ ಮಾಡಿ ಬೀಚಿಂಗ್ ಪೌಡರ್ ಸಿಂಪಡಿಸಬೇಕೆಂದರು. ಅಜಾದ್ ನಗರ ನಿವಾಸಿ ಉಪ ಮೇಯರ್ ಸುಕುಮ್ ರಿಯಾಜ್ ಅವರಿಗೆ ಮನೆಯ ಪಕ್ಕದಲ್ಲಿ ಕಸವನ್ನು ರಾತ್ರಿ ವೇಳೆ ತಂದು ಹಾಕುತ್ತಾರೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದಾಗ ಉಪ ಮೇಯರ್ ಅವರು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ ಕಸ ಹಾಕುವ ಸಂದರ್ಭದಲ್ಲಿ ಜನರೇ ಆಗಿರಲಿ, ಟೂ ವೀಲರ್ ಆಗಿರಲಿ ನಿಗದಿತ ಜಾಗದಲ್ಲಿ ಹಾಕದೆ ಇದ್ದಾರೆ, ಅವರ ಫೋಟೋವನ್ನು ತೆಗೆದು ನಮಗೆ ಹಾಕಿದರೆ ಅವರಿಗೆ ದಂಡ ವಿಧಿಸುವ ಕೆಲಸ ಮಾಡುತ್ತವೆ ಎಂದು ಉಪ ಮೇಯರ್ ಮತ್ತು ಪಾಲಿಕೆ ಅಧಿಕಾರಿಗಳು ತಿಳಿಸಿದರು.
ವೀಕ್ಷಣೆ ಮಾಡುವ ಸಂದರ್ಭದಲ್ಲಿ ಕಸದ ವಿಲೆವಾರಿ ವಾಹನ ಘಟಕಕ್ಕೆ ನೇರವಾಗಿ ತೆರಳಿ ಅಲ್ಲಿ ಉಸ್ತುವಾರಿ ವಹಿಸಿಕೊಂಡ ಸೀನ ಅವರನ್ನು ವಿಚಾರಿಸಿ ಕೆಲವೊಂದು ಭಾಗದಲ್ಲಿ ವಾಹನಗಳು ಬರುತ್ತಿಲ್ಲ, ಲೇಬರ್ಗಳು ಬರುತ್ತಿಲ್ಲ ಏಕೆ ಎಂದು ಪ್ರಶ್ನಿಸಿ, ಅಲ್ಲಿರುವ ವಾಹನಗಳನ್ನು ಕಂಡು ಇಸ್ಟೊಂದು ವಾಹನಗಳನ್ನು ಇಟ್ಟುಕೊಂಡು ಸರಿಯಾದ ರೀತಿಯಲ್ಲಿ ಕೆಲಸ ಮಾಡದೆ ಸಂಬಳ ತೆಗೆದುಕೊಳ್ಳುವುದು ಎಷ್ಟು ಸರಿ ಎಂದರು, ಇದರ ಬಗ್ಗೆ ಕ್ರಮ ಕೈಗೊಂಡು ನಮಗೆ ವಾಹನ ಮತ್ತು ಲೇಬರ್ಗಳನ್ನು ಕಳುಹಿಸಬೇಕು ಏಕೆಂದರೆ ಮುಖ್ಯ ರಸ್ತೆಯಲಿ ಇಸ್ಟೊಂದು ಕಸದ ರಾಶಿ ಬಿದ್ದಿದೆ ಬಳ್ಳಾರಿ ಸ್ವಚ್ಛತೆ ಆಗಬೇಕೆಂದರೆ ಹೇಗೆ ಆಗುತ್ತದೆ ಎಂದು ಕಸದ ವಿಲೆವಾರಿ ವಾಹನ ಘಟಕದ ಉಸ್ತುವಾರಿಯನ್ನು ತರಾಟೆಗೆ ತೆಗೆದುಕೊಂಡು ಮುಂದೆ ಈರೀತಿ ಆಗದಂತೆ ಎಚ್ಚರಿಕೆ ವಹಿಸಿ ಎಂದು ತಿಳಿಸಿ ಪಾಲಿಕೆ ಸಂಭಂದ ಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿ ದೂರು ನೀಡಿದರು.
ನಂತರ ಟೀ ಅಂಗಡಿಗಳಿಗೆ ಭೇಟಿ ನೀಡಿದಾಗ ಎರಡು ಮೂರು ಟೀ ಕಪ್ಪು ಗಳನ್ನು ಮತ್ತು ಪ್ಲಾಸ್ಟಿಕ್ ಕವರ್ ಗಳನ್ನು ಕಂಡು ಅಂಗಡಿ ಮಾಲೀಕರಿಗೆ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸ್ವಚ್ಛತೆಗೆ ಆದ್ಯತೆ ನೀಡುವಲ್ಲಿ ನಿಮ್ಮ ಪಾತ್ರವಿರಲಿ ಎಂದರು. ಮುಂದೆ ಪ್ಲ್ಯಾಸ್ಟಿಕ್ ಬ್ಯಾನ್ ಮಾಡಲು ಅಧಿಕಾರಿಗೆ ತಿಳಿಸಿದರು.
ಏಕೆಂದರೆ ನಮ್ಮ ಭಾಗದ ಮಾಜಿ ಸಚಿವರು ಹಾಗೂ ಗ್ರಾಮಾಂತರ ಶಾಸಕರಾದ ಬಿ.ನಾಗೇಂದ್ರಣ್ಣನವರು ನಾನು ಇರಲಿ ಬಿಡಲಿ ಸ್ವಚ್ಛತೆಗೆ ಮತ್ತು ಅಭಿವೃದ್ಧಿಗೆ ನೀವು ಕೆಲಸ ಮಾಡಬೇಕು ಎಂದು ಆದೇಶದ ಕೊಟ್ಟಿದ್ದಾರೆ. ಅದಕ್ಕಾಗಿ ಬಳ್ಳಾರಿ ಪ್ರತಿಯೊಂದು ವಾರ್ಡ್ ಗಳಿಗೆ ಭೇಟಿ ನೀಡುವ ಮೂಲಕ ಸಮಸ್ಯೆಗಳನ್ನು ಆಲಿಸಿ ಬಳ್ಳಾರಿ ಮಹಾನಗರ ಪಾಲಿಕೆಯಿಂದ ಮತ್ತು ಮಾಜಿ ಸಚಿವ ಹಾಗೂ ಈ ಭಾಗದ ಶಾಸಕರಾದ ನಾಗೇಂದ್ರ ಅಣ್ಣನವರಿಗೆ ತಿಳಿಸಿ ಪರಿಹಾರ ಮಾಡುವ ಮೂಲಕ ಜನರಿಗೆ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂದು ಬಳ್ಳಾರಿ ಮಹಾನಗರ ಪಾಲಿಕೆ ಉಪ ಮೇಯರ್ ಡಿ.ಸುಕುಮ್ ರಿಯಾಜ್ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಮೇಯರ್ ಡಿ.ಸುಕುಮ್ ರಿಯಾಜ್, ಕಾಂಗ್ರೆಸ್ ಯುವ ಮುಖಂಡ ರಿಯಾಜ್, ಆಸಿಫ್, ಪಾಲಿಕೆ ಆರೋಗ್ಯ ಅಧಿಕಾರಿ ಬಸವರಾಜ್ ತಂಬಾಕಿ, ಸೂಪರ್ವೈಸರ್ ಯಲ್ಲಪ್ಪ, ಸುನಿಲ್ ಸೇರಿದಂತೆ ಇತರರು ಇದ್ದರು.