ಬಳ್ಳಾರಿ ಜುಲೈ 14 : ಕಲೆ ಒಂದು ತಪಸ್ಸು. ಆದಿಯಿಂದ ಅಂತ್ಯದವರೆಗೂ ಕಲೆಯಲ್ಲಿ ಕಲಿಯುವುದು ಬಹಳಷ್ಟು ಇರುತ್ತದೆ ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಒಂದು ಹಬ್ಬವನ್ನೇ ಮಾಡುತ್ತಿದ್ದರು ಪಾತ್ರಧಾರಿಗಳು ತಾವೇ ದುಡ್ಡನ್ನು ಹಾಕಿಕೊಂಡು ನಟಿಯರನ್ನು ಕರೆಸಿ ಅಲ್ಪಸ್ವಲ್ಪ ಹಣವನ್ನು ಕೊಟ್ಟು ವಿದ್ಯುತ್ ಇಲ್ಲದ ಸಂದರ್ಭದಲ್ಲಿ ವಾಹನ ಸೌಕರ್ಯ ಇಲ್ಲದಿದ್ದಾಗ ಪೌರಾಣಿಕ ನಾಟಕಗಳನ್ನು ಆಡುತ್ತಿದ್ದರು ನಟಿಯರು ತಮ್ಮ ಊರಿನಿಂದ ಎತ್ತಿನ ಬಂಡಿಯಲ್ಲಿ ಬಂದು ಎಲ್ಲೋ ದೇವಸ್ಥಾನಗಳಲ್ಲಿ ಮಲಗಿಕೊಂಡು ಇಡೀ ರಾತ್ರಿ ನಿದ್ದೆಗಟ್ಟು ಪ್ರದರ್ಶನ ಮಾಡಿ ಹೋಗುತ್ತಿದ್ದರು ಇಂಥ ಕಲಾವಿದರಿಂದಲೇ ಇಂದು ಕಲೆ ಉಳಿದುಕೊಂಡಿದೆ ಎಂದು ಇತಿಹಾಸ ಅಕಾಡೆಮಿ ಅಧ್ಯಕ್ಷ ಟಿ ಹೆಚ್ ಎಂ ಬಸವರಾಜ್ ಅಭಿಪ್ರಾಯ ಪಟ್ಟರು.
ಅವರು ನಗರದ ಡಾ. ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅಭಿನಯ ಕಲಾಕೇಂದ್ರ ಬಳ್ಳಾರಿ ವತಿಯಿಂದ ಹಮ್ಮಿಕೊಂಡ ‘ಅಗಲಿದ ರಂಗಭೂಮಿ ಕಲಾವಿದರಿಗೆ ರಂಗ ನಮನ’, ‘ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ’ ಹಾಗೂ ‘ಮಗ ಹೋದರು ಮಾಂಗಲ್ಯ ಬೇಕು’ ಎಂಬ ಸಾಮಾಜಿಕ ನಾಟಕ ಪ್ರದರ್ಶನವನ್ನು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಹೆಚ್.ಎಮ್. ಬಸವರಾಜ
ಅಗಲಿದ ಕಲಾವಿದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆ ದಿನಗಳಲ್ಲಿ ಬೈಲಾಟ ಅಥವಾ ನಾಟಕದದಿನದಂದು ಹಳ್ಳಿಯಲ್ಲಿ ಎಲ್ಲರ ಮನೆಗಳು ತಳಿರು ತೋರಣಗಳಿಂದ ಸಿಂಗರಿಸುತ್ತಿದ್ದರು ನಟ ನಟಿಯರಿಗೆ ಬಂಧುಗಳು ಬಂದು ತಮ್ಮ ಕಾಣಿಕೆಯನ್ನು ನೀಡಿ ಗೌರವಿಸುತ್ತಿದ್ದರು ಸುತ್ತಮುತ್ತಲಿನ ಹಳ್ಳಿಗಳ ಜನ ಸಹಿತ ಬರುತ್ತಿದ್ದರು. ಏಕೆಂದರೆ ಆ ದಿನಗಳಲ್ಲಿ ಟಿವಿ ಮೊಬೈಲು ಯಾವು ಇರಲಿಲ್ಲ . ಇಡೀ ರಾತ್ರಿ ಸಾವಿರಾರು ಜನ ನಾಟಕವನ್ನು ವೀಕ್ಷಿಸುತ್ತಿದ್ದರು. ಭಕ್ತಿ ಭಾವ ನೀತಿದಾಯಕ ಒಳ್ಳೆಯ ಸಂಸ್ಕೃತಿಯುಳ್ಳ ನಾಟಕ ಗಳನ್ನು ಆಡುತ್ತಿದ್ದರು. ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ ಎಂಬ ಮಾತು ಸತ್ಯವಾದರೂ ಬದುಕನ್ನೇ ಬದಲಿಸುವ ಶಕ್ತಿ ನಾಟಕಗಳಿವೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ದಾನ ಚಿಂತಾಮಣಿ ಮಸೀದಿಪುರ ಸಿದ್ದರಾಮನಗೌಡರಿಗೆ ಅಭಿನಯ ಕಲಾ ಕೇಂದ್ರದಿಂದ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸಿದ್ದರಾಮ ಗೌಡರು ಮಾತನಾಡಿ, ಇಂಥ ನಾಟಕಗಳಿಗೆ ದಾನಿಗಳು ಮುಂದೆ ಬರಬೇಕೆಂದು ವಿನಂತಿಸಿದರು.
ಇತ್ತೀಚೆಗೆ ಅಗಲಿದ ಗಂಗಣ್ಣ ಶ್ರೀರಾಮುಲು ಮತ್ತು ವೆಂಕೋಬಾಚಾರ್ ಅವರ ಬಗ್ಗೆ ಸಾಹಿತಿ ರಂಗ ನಿರ್ದೇಶಕ ಕೆ ಜಗದೀಶ್ ಅವರು ಪ್ರಾಸ್ತಾವಿಕ ಮಾತನಾಡಿ ರಂಗನಮನ ಸಲ್ಲಿಸಿದರು ಯಲ್ಲೇಶ್ ಯಾಳಗಿ ಕೃತ ಮಗ ಹೋದರೂ ಮಾಂಗಲ್ಯ ಬೇಕು ಎಂಬ ನಾಟಕವನ್ನು ವಿಕಾಸ ಕಲಾತಂಡ ಕೊಳ ಗಲ್ ಇವರು ಎಚ್ ಎಂ ಜಗದೀಶಯ ಸ್ವಾಮಿಯವರ ನಿರ್ದೇಶನದಲ್ಲಿ ಶ್ರೀ ಗುರು ಪಂಚಾಕ್ಷರಿ ವಾದ್ಯ ವೃಂದ ಬಸಾಪಟ್ಟಣ ಇವರ ಸಂಗೀತ ನಿರ್ದೇಶನದಲ್ಲಿ ಪ್ರದರ್ಶನವಾಯಿತು.
ಎಲ್ಲಾ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು. ಎ ಎಂ ಪಿ ವೀರೇಶ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಗಾಯಕ ಕುಡಿತಿನಿ ಪ್ರಕಾಶ್ ರವರು ಪ್ರಾರ್ಥಿಸಿ ವಂದಿಸಿದರು. ನಾಟಕ ವೀಕ್ಷಿಸಲು ಅಪಾರ ಪ್ರಮಾಣದ ಪ್ರೇಕ್ಷಕರು ಸೇರಿದ್ದು ವಿಶೇಷವಾಗಿತ್ತು.
ಮಸೀದಿಪುರ ಸಿದ್ದರಾಮ ಗೌಡರು ಮಾತನಾಡಿ ಇಂಥ ನಾಟಕಗಳಿಗೆ ದಾನಿಗಳು ಮುಂದೆ ಬರಬೇಕೆಂದು ವಿನಂತಿಸಿದರು.