,
ಅಥಣಿ: ಗ್ರಾಮ ಪಂಚಾಯತಿ ಸದಸ್ಯೆ ಒಬ್ಬರು ಭಾರತದ ಸಂವಿಧಾನದ ಪೀಠಿಕೆಯನ್ನು ಅಕ್ಕಿಕಾಳಿನ ಮೇಲೆ ಬರೆದು ಅಚ್ಚರಿ ಮೂಡಿಸಿದ್ದಾರೆ
ಕುಂದಾನಗರಿ ಬೆಳಗಾವಿ ಜಿಲ್ಲೆಯ
ಅಥಣಿ ತಾಲೂಕಿನ ನದಿ ಇಂಗಳಗಾಂವ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯೆ ತಿರುಮಲಾ ವಿಲಾಸ ಕಾಂಬಳೆ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನ ಪೀಠಿಕೆಯನ್ನು ಅಕ್ಕಿ ಕಾಳಿನಿಂದ ಬರೆದು ಹೆಮ್ಮೆ ವ್ಯಕ್ತ ಪಡಿಸಿದ್ದಾರೆ.ಇತ್ತೀಚೆಗಷ್ಟೆ ಸಂವಿಧಾನ ಓದು ಅನ್ನುವ ವಿಶಿಷ್ಟ ಕಾರ್ಯಕ್ರಮ ರಾಜ್ಯದ ಹಲವು ಕಡೆ ನಡೆಯುತ್ತಿದ್ದು ಚರ್ಚೆಗಳು ನಡೆಯುತ್ತಿರುವಾಗಲೇ ಗ್ರಾಮ ಪಂಚಾಯತಿ ಸದಸ್ಯೆಯ ಈ ಕಲೆ ಜನರ ಮನಸ್ಸನ್ನು ಮುದಗೊಳಿಸುತ್ತಿದೆ.
ಸಾಕಷ್ಟು ಸಂಯಮದಿಂದ ನಿಖರವಾಗಿ ಮತ್ತು ಸ್ಪಷ್ಟವಾಗಿ ಸಂವಿಧಾನದ ಪೀಠಿಕೆಯನ್ನು ಅಕ್ಕಿ ಕಾಳಿನ ಮೇಲೆ ಅಕ್ಷರದ ರೂಪದಲ್ಲಿ ಒಡಮೂಡಿಸಲಾಗಿದ್ದು ಸದ್ಯ ನೋಡುಗರ ಕಣ್ಮಣ ಸೆಳೆಯುತ್ತಿದೆ ಅವರ ಕಲಾಕೃತಿ
ಇನ್ನೂ ಭಾರತೀಯ ಸಂವಿಧಾನವು ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ತತ್ವಗಳನ್ನು ಆಧರಿಸಿದ್ದು ಇದು ಎಲ್ಲರಿಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯವನ್ನು ದೋರಕಿಸಿ ಕೊಟ್ಟಿದೆ ಸಂವಿಧಾನದ ಅಡಿಯಲ್ಲಿ ಸರ್ಕಾರವು ಜನರ ಇಚ್ಛೆಯಂತೆ ಆಳ್ವಿಕೆ ನಡೆಸಬೇಕು ಮತ್ತು
ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಂಡು, ಅದರಂತೆ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಸಂವಿಧಾನವು ನಮಗೆ ನೀಡಿರುವ ಹಕ್ಕುಗಳನ್ನು ಚಲಾಯಿಸುವುದರ ಜೊತೆಗೆ, ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಬೇಕಾಗಿದೆ ಅದರಂತೆ ಭಾರತೀಯ ಸಂವಿಧಾನದ ಪೀಠಿಕೆಯನ್ನು ಗ್ರಾಮ ಪಂಚಾಯತಿ ಸದಸ್ಯೆ ತಿರುಮಲಾ ಕಾಂಬಳೆ ರಚಸಿರುವ ಕಲಾಕೃತಿ ನಮ್ಮಲ್ಲಿ ಹೆಮ್ಮೆಯನ್ನು ಮೂಡಿಸುತ್ತಿದೆ ಅನ್ನುತ್ತಾರೆ ಗ್ರಾಮಸ್ಥರು
ಒಟ್ಟಾರೆ ಆಗಿ ಸಂವಿಧಾನದ ಆಶಯವೇ ನಾವೆಲ್ಲ ಭಾರತೀಯರು ಪರಸ್ಪರ ಸಹಬಾಳೆ ಮತ್ತು ಶಾಂತಿಯಿಂದ ಬದುಕು ನಡೆಸುವ ಬಹುತ್ವದ ಭಾರತದ ಅಡಿಪಾಯವಾಗಿದ್ದು ಗ್ರಾಮ ಪಂಚಾಯತಿ ಸದಸ್ಯೆಯ ಕಲಾಕೃತಿ ಸದ್ಯ ಮತ್ತಷ್ಟು ಜನರಿಗೆ ಪ್ರೇರಣೆ ನೀಡುವಂತಾಗಿದೆ ಅನ್ನುವದರಲ್ಲಿ ಎರಡು ಮಾತಿಲ್ಲ…