ವಿಜಯಪುರ : ದಿನಾಂಕ : ೧೫-೦೭-೨೦೨೫ ಹಾಗೂ ೧೬-೦೭-೨೦೨೫ ರಂದು ವಿಜಯಪುರ ನಗರದ ಕನ್ನಾನ ಫಂಕ್ಷನ್ ಹಾಲ್, ಬೇಗಮ್ ತಾಲಾಬ ಹತ್ತಿರ ಎರಡು ದಿನಗಳ ವರೆಗೆ ಬಿಜಾಪುರ ಜಿಲ್ಲಾ ಮಂಟಪ, ಮೈಕ್, ಲೈಟ್ ಮತ್ತು ಫ್ಲಾವರ್ ಡೇಕೋರೇಟರ‍್ಸ್ ಮಾಲೀಕರ ಸಂಘ (ರಿ) ವಿಜಯಪುರ ಸಂಘಟನೆ ಹಾಗೂ ಕರ್ನಾಟಕ ರಾಜ್ಯಶಾಮಿಯಾನ ಡೇಕೋರೇಶನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘ ( ಗಂಗಾವತಿ) ಸಂಯುಕ್ತಾಶ್ರಯದಲ್ಲಿ ಸೂಫಿ ಸಂಥ ಶರಣ ನಾಡು ಗುಮ್ಮಟ ನಗರಿ ವೈಭವ ೨೮ ನೇ ವಾರ್ಷಿಕ ಸ್ನೇಹ ಸಮ್ಮೇಳನ -೨೦೨೫ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷರಾದ ಅಬ್ದುಲ್ ಅಜೀಜ ಎಚ್. ಡಾಲಾಯತ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಮಂಗಳವಾರ ದಿನಾಂಕ ೧೫ -೦೭-೨೦೨೫ರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬಸವನ ಬಾಗೇವಾಡಿ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ. ಶಿವಪ್ರಕಾಶ ಶಿವಾಚಾರ್ಯ ಮಹಾಸ್ವಾಮಿಗಳು, ಅಲ್ ಹಜ್ ಸಯ್ಯದ ಮೊಹಮ್ಮದ ತನ್ವೀರಪೀರಾ ಹಾಸ್ಮಿ ವಹಿಸಿಕೊಳ್ಳಲಿದ್ದಾರೆ.
ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಶಾಮಿಯಾನ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕರಾದ ಶ್ರೀ ಮೆಹಬೂಬ ಮುಲ್ಲಾ, ಕ.ರಾ.ಶಾ.ಡೇ.ದ್ವ.ಮತ್ತು ಬೆ. ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಗುಂಡಯ್ಯಸ್ವಾಮಿ ಹಿರೇಮಠ, ಉದ್ಘಾಟಕರಾಗಿ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಬ್ದುಲ ಹಮೀದ ಮುಶ್ರೀಫ್ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಬ್ದುಲ್ ಕರೀಮ ಅತ್ತಾರ, ಆರ್. ಲಕ್ಷ್ಮಣ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ರಫೀಕ ಎಸ್. ಪುಣೇಕರ, ಶ್ರೀ ಇಮ್ತಿಯಾಜ್ ಮುಲ್ಲಾ, ಅಲ್ ಹಜ್ ಏಜಾಜ ಅಹ್ಮದ ಗುಡಗೇರಿ, ಶಾಂತಯ್ಯ ಹಿರೇಮಠ, ಅಬ್ದುಲ್ ಅಜೀಜ ಎಚ್. ಢಾಲಾಯತ, ಡಾ. ಜ್ಞಾನೇಶ್ವರ ಎಚ್. ಪಂಡಿತ, ಹಾರುನರಶೀದ ಎಚ್. ಮಾಶ್ಯಾಳಕರ, ಶ್ರೀಕಾಂತ ಕುಂದನಗಾರ, ರಾಜು ಬಿಜ್ಜರಗಿ ಸೇರಿದಂತೆ ಗಣ್ಯಮಾನ್ಯರು ಆಗಮಿಸಲಿದ್ದಾರೆ.
ಬುಧವಾರ ದಿನಾಂಕ ೧೬ -೦೭-೨೦೨೫ರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಲಕೇರಿ ಮಹಾಸಂಸ್ಥಾನ ಜಾಲಹಳ್ಳಿಮಠದ ಷ.ಬ್ರ. ವಿದ್ಯಾಮಾನ್ಯ ಶಿವಾಭಿನವ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಸಜ್ಜಾದ ನಸೀನ ಆರ್ಕಟ ದರ್ಗಾ, ವಿಜಯಪುರದ ಡಾ. ಸಯ್ಯದ ತಕ್ಕಿ ಪೀರಾಂ ಹುಸೇನಿ
ವಹಿಸಿಕೊಳ್ಳಲಿದ್ದಾರೆ.
ಅಧ್ಯಕ್ಷತೆಯನ್ನು ಅಧ್ಯಕ್ಷರು ಕ.ರಾ.ಶಾ.ಡೇಧ್ವ ಮತ್ತು ಬೆ ಕ್ಷೇಮಾಭಿವೃದ್ಧಿ ಸಂಘದ ಗಂಗಾವತಿಯ ಅಬ್ದುಲ್ ಕರೀಮ ಅತ್ತಾರ, ಸಂಸ್ಥಾಪಕ ಕೋಶಾಧ್ಯಕ್ಷ ಕ.ರಾ. ಶಾ. ಡೇದ್ವ ಮತ್ತು ಬೆ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಕೋಶಾಧ್ಯಕ್ಷ ಮಂಜುನಾಥ ಎಸ್ ಕೋರಿ ವಹಿಸಿಕೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೆಹಬೂಬ ಮುಲ್ಲಾ, ಆರ್. ಲಕ್ಷಣ, ಎಂ. ರಾಜೇಸಾಬ ಕೆ.ಬಿ.ಎನ್. ಗಣ್ಯಮಾನ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.