ಜನಪ್ರತಿನಿಧಿಗಳ ಕಾಳಜಿಗೆ ಸಾಕ್ಷಿಯಾದ ಕಮಲಾಪೂರದ ಸರಕಾರಿ ಮಾದರಿ ಕನ್ನಡ  ಪ್ರಾಥಮಿಕ

Ravi Talawar
ಜನಪ್ರತಿನಿಧಿಗಳ ಕಾಳಜಿಗೆ ಸಾಕ್ಷಿಯಾದ ಕಮಲಾಪೂರದ ಸರಕಾರಿ ಮಾದರಿ ಕನ್ನಡ  ಪ್ರಾಥಮಿಕ
WhatsApp Group Join Now
Telegram Group Join Now
ಮಾಜಿ ಮೇಯರ್ ಅಂಚಟಗೇರಿ ಅವರ ಜನಪರ ಕಾಳಜಿಗೆ ಸಾಕ್ಷಿಯಾದ ಸರಕಾರಿ ಮಾದರಿ ಶಾಲೆ
ಧಾರವಾಡ
ಸರ್ಕಾರಿ ಶಾಲೆಯನ್ನ ಖಾಸಗಿ ಶಾಲೆಯನ್ನು  ಮೀರಿಸುವಂತೆ ನಿರ್ಮಾಣ ಮಾಡಿ,  ಕೇಂದ್ರ ಸಚಿವರು ಪ್ರಲ್ಹಾದ ಜೋಶಿ ಅವರು, ಶಿಕ್ಷಣದ ಬಗ್ಗೆ ಇರುವ ಕಾಳಜಿಯನ್ನು ತೋರಿಸಿದ್ದಾರೆ. ಅವರ ಜನಪರ ಕಾಳಜಿಗೆ  ಕಮಲಾಪುರ ಜನತೆ ಪರವಾಗಿ, ಮಾಜಿ ಮೇಯರ್ ಈರೇಶ ಅಂಚಟಗೇರಿ ಅನಂತ ಅನಂತ ಧನ್ಯವಾದಗಳನ್ನು ತಿಳಿಸಿದ್ದಾರೆ.
ಧಾರವಾಡದ ಕಮಲಾಪೂರದ ಸರಕಾರಿ ಮಾದರಿ ಕನ್ನಡ  ಪ್ರಾಥಮಿಕ ಶಾಲೆ ನಂ.04ಇದಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಭಾರತ ಸರ್ಕಾರ ರವರ ಪ್ರಸ್ತಾವನೆ ಮೇರೆಗೆ ಕೋಲ್ ಇಂಡಿಯಾ ಲಿ. ನಿಂದ ಸಿ.ಆಎಸ್.ಆರ್ ಅನುದಾನ ರೂ. 1.62 ಕೋಟಿ ಮತ್ತು  ಈರೇಶ ಅಂಚಟಗೇರಿ ಮಾಜಿ ಮಹಾ ಪೌರರು, ಸದಸ್ಯರು ಹು.ಧಾ.ಮ.ಪಾಲಿಕೆರವರ .36  ಲಕ್ಷಗಳ ಅನುದಾನದಲ್ಲಿ ಮಾದರಿ ಶಾಲೆ ನಿರ್ಮಾಣಗೊಂಡಿದೆ.
 ಮಹಾನಗರ ಪಾಲಿಕೆ ಸದಸ್ಯರ ಅನುದಾನದಡಿ,  2024-25ರಲ್ಲಿ ಶಾಲಾ ಕಟ್ಟಡ ಪುನರ್ ನಿರ್ಮಿಸಲಾಗಿದ್ದು , ಅಂದಾಜು 2ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲೆ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.
ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ  , ಮಾಜಿ ಮಹಾಪೌರರು ವೀಕ್ಷಿಸಿ  ಅಚ್ಚುಕಟ್ಟಾಗಿ ಪಾಲಿಕೆ ಸಹಕಾರದೊಂದಿಗೆ ಶಾಲೆ ನಿರ್ಮಾಣವಾಗಿದ್ದು ಕೇಂದ್ರ ಸಚಿವರು ಪ್ರಲ್ಹಾದ ಜೋಶಿಯವರ ಈ ಕಾರ್ಯಕ್ಕೆ ಇಡಿ ಕಮಲಾಪುರ ಜನತೆ ಧಾರವಾಡ ಜಿಲ್ಲೆಯಲ್ಲಿ ಇಂತಹ ಮಾದರಿ‌ಶಾಲೆ ಎಲ್ಲಿಯೂ ನಿರ್ಮಾಣವಾಗಿಲ್ಲ .ಎನ್ನುವ ಮಾತನ್ನು ಜನರಿಂದ ಕೇಳಿ ಬರುತ್ತಿದ್ದು ಕೇಂದ್ರ ಸಚಿವರು ಹಾಗು ಪಾಲಿಕೆ ಸದಸ್ಯರಿಗೆ ಸ್ಥಳೀಯರು ಅಭಿನಂದಿಸಿದಾರೆ.
ಗುಣಮಟ್ಟದ ಕ್ಲಾಸರೂಮಗಳು, ಶೌಚಾಲಯಗಳನ್ನು ಇಲ್ಲಿ ಕಟ್ಟಲಾಗಿದೆ. 100 ವರ್ಷದ  ಈ ಸರಕಾರಿ ಶಾಲೆಯನ್ನ ಮಾದರಿ ಶಾಲೆಯನ್ನಾಗಿ ಮಾಡಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಂಪೂರ್ಣವಾಗಿ ಅನುದಾನ ಕೊಟ್ಟು ಬಡಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡುವ ಮೂಲಕ ಶಿಕ್ಷಣದ ಪ್ರೀತಿಯನ್ನ ತೋರಿಸಿದ್ದಾರೆ.
WhatsApp Group Join Now
Telegram Group Join Now
Share This Article