ಧಾರವಾಡ: ಬೆಂಗಳೂರಿನ ಗಾಂಧಿ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ., ಹಾಗೂ ಕೊರಮ ಕೊರಚ ಜನಾಂಗದ ಮಹಿಳಾ ಅಧ್ಯಕ್ಷೆ ಪ್ರಭಾವತಿ ಅವರ ಹಲ್ಲೆ ಎಸಗಲಾಗಿದೆ ಎಂದು ಆರೋಪಿಸಿ ಕೊರಮ, ಕೊರಚ ಸಮಾಜದ ಹಿತಾಭಿವೃದ್ಧಿ ಸಂಘದವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜುಲೈ 5ರಂದು ಒಳಮೀಸಲಾತಿ ವಿಚಾರಕ್ಕಾಗಿ 51 ಪರಿಶಿಷ್ಟ ಜಾತಿಗಳಗಲ್ಲಿ 49 ಪರಿಶಿಷ್ಟ ಜಾತಿಗಳ ಅಭಿವೃದ್ಧಿ ನಿಗಮದ ಮುಖಂಡರ ಸಭೆಯನ್ನು ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಕರೆಯಲಾಗಿತ್ತು. ಈ ಸಭೆಗೆ ಕೊರಮ ಮತ್ತು ಕೊರಚ ಸಮಾಜದ ಮುಖಂಡರನ್ನು ಆಹ್ವಾನಿಸಿರಲಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಪಲ್ಲವಿ ಜಿ., ಕೊರಮ ಸಮಾಜದವರಾಗಿದ್ದು, ಇವರು ಪ್ರಭಾವತಿ ಅವರೊಂದಿಗೆ ತೆರಳಿ ಸಭೆಗೆ ನಮ್ಮನ್ನು ಯಾಕೆ ಆಹ್ವಾನಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅಲೆಮಾರಿ ಜನಾಂಗದ ಮುಖಂಡರಾದ ಲೋಹಿತಾಕ್ಷ, ವೀರೇಶ, ಶಿವು, ಬಸವರಾಜ, ಲೋಕೇಶ್, ಶಾಂತಕುಮಾರ, ಸುಭಾಷ್ ಮತ್ತಿತರರು ಪಲ್ಲವಿ ಮತ್ತು ಪ್ರಭಾವತಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಾರಾಯಣ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಬಾಬಾ ಭಜಂತ್ರಿ ಪಾಲ್ಗೊಂಡಿದ್ದರು.
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಕೊರಮ, ಕೊರಚ ಸಮಾಜದವರು ಪ್ರತಿಭಟನೆ ನಡೆಸಿದರು