ಬಳ್ಳಾರಿ ಜುಲೈ 11. ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ಮತ್ತು ನಂದಿ ಸಿಟಿ ಪದವಿ ಪೂರ್ವ ಕಾಲೇಜು ಒಟ್ಟುಗೂಡಿ ಜುಲೈ 11 2025 ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ನಂದಿ ಸಿಟಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪೋಸ್ಟರ್ ಡ್ರಾಯಿಂಗ್ ಮತ್ತು ಅರಿವು ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು .
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟಿ.ಜಿ. ವಿಠ್ಠಲ್ ಅದ್ಯಕ್ಷರು ಬಳ್ಳಾರಿ ಶಾಖೆ ಇವರು ನೆರದಂಥ ವಿದ್ಯಾರ್ಥಿಗಳಿಗೆ ಜನಸಂಖ್ಯಾ ಭಾರತಕ್ಕೆ ವರವೋ ಶಾಪವೋ ಎಂದು ಪ್ರಶ್ನೆ ಮಾಡುತ್ತಾ, ಯುವಜನರು ಹೇಗೆ ವ್ಯತ್ಯಾಸವನ್ನು ತರಬಹುದು ಅಂದರೆ ಶಿಕ್ಷಣವನ್ನು ಕಲಿಯಬೇಕು ಇತರರಿಗೂ ಕಲಿಸಬೇಕು ಮುಖ್ಯವಾಗಿ ಸಂತಾನೋತ್ಪತ್ತಿ ಆರೋಗ್ಯ, ಲಿಂಗ ಸಮಾನತೆ , ಸುಸ್ಥಿರ ಜೀವನ ಹಾಗೂ ಜನಸಂಖ್ಯಾ ಚಲನ ಶಾಸ್ತ್ರ ದ ಬಗ್ಗೆ ತಿಳಿದುಕೊಳ್ಳಿ ಹಾಗೂ ತಿಳಿಸಿ ಹಾಗಿದ್ದಾಗ ಮಾತ್ರ ಪ್ರತಿಯೊಬ್ಬ ಯುವಕರು ನ್ಯಾಯಯುತ ಮತ್ತು ಭರವಸೆಯ ಜಗತ್ತಿನಲ್ಲಿ ಅವರು ಬಯಸಿದ ಕುಟುಂಬವನ್ನು ನಿರ್ಮಿಸಬಹುದಾದ ಜಗತ್ತನ್ನು ಸೃಷ್ಟಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮತಿ ಅನಿತಾ ಪ್ರಾಂಶುಪಾಲರು ಎನ್ಸಿಪಿಯು ಇವರು ಯುವಕರೇ ಗಣ್ಯರು ಹೇಳಿದ ಮಾತುಗಳನ್ನು ಅಳವಡಿಸಿಕೊಂಡು ಬದುಕಿ ಹಾಗೂ ಕೇವಲ ಪುಸ್ತಕದ ಜ್ಞಾನಕ್ಕೆ ಮೀಸಲಾಗದೆ ಸಮಾಜದ ಅಭಿವೃದ್ಧಿ ಚಟುವಟಿಕೆಗಳ ಕಡೆ ಗಮನಹರಿಸಿ ಆಗಿದ್ದಾಗ ಮಾತ್ರ ನೀವು ನಿಮ್ಮ ಕುಟುಂಬ ಮತ್ತು ನಿಮ್ಮ ಕಮ್ಯೂನಿಟಿ ಕೂಡ ಅಭಿವೃದ್ಧಿಯಾಗುತ್ತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಶಾಖಾ ವ್ಯವಸ್ಥಾಪಕರು ಎಫ್ಪಿಎಐ ಇವರು ಪ್ರಾಸ್ತಾವಿಕ ನುಡಿಗಳನ್ನು ನುಡಿಯುತ್ತ ವಿಶ್ವ ಜನಸಂಖ್ಯಾ ದಿನಾಚರಣೆ ಕೇವಲ ಆಚರಣೆ ಆಗಬಾರದು ಈ ವರ್ಷದ ಜನಸಂಖ್ಯಾ ದಿನಾಚರಣೆ ಗೋಷಣೆ ಅನ್ವಯ ಯುವಕರೇ ನೀವು ಕೇವಲ ಸಂಖ್ಯೆಗಳಲ್ಲ ನೀವು ಬದಲಾವಣೆ ತರುವ ಚಿಂತಕರು ಹಾಗೂ ನವೀನಕಾರರು ಮತ್ತು ನಾಳಿನ ನಾಯಕರು ನೀವೇ ಆದರೆ ನಿಮ್ಮ ಶಕ್ತಿಯೊಂದಿಗೆ ಜವಾಬ್ದಾರಿಯು ಮುಖ್ಯ. ಎಂದು ಹೇಳಿದರು.
ಪೋಸ್ಟರ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ಒಟ್ಟಾರೆ 23 ವಿದ್ಯಾರ್ಥಿಗಳು ಭಾಗವಹಿಸಿದ್ದು ಈ ಪೈಕಿ ಎಂವಿ ಗಾಯತ್ರಿ, ಮೊದಲನೇ ಸ್ಥಾನ, ತನಿಶ್ ಕೆಪಿ ಎರಡನೇ ಸ್ಥಾನ, ಸಂತೋಷ್ ಬಾಬು ಮೂರನೇ ಸ್ಥಾನ ಪಡೆದರು, ವಿಜೇತರಿಗೆ ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ವಿತರಿಸಲಾಯಿತು ಹಾಗೂ ಎಲ್ಲ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.