ಘಟಪ್ರಭಾ: ಇಲ್ಲಿಯ ಮಲ್ಲಾಪೂರ ರೋಡ ಹತ್ತಿರದಲ್ಲಿ ಶ್ರೀ ವಿಠೋಬಾ ದೇವಸ್ಥಾನ, ಹಾಗೂ ಕಂಪಾನಿಯೋ ಇವರ ಸಹಯೋಗದೊಂದಿಗೆ ಜುಲೈ 12ರಿಂದ 23ರವರೆಗೆ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವನ್ನು ಆಯೋಜಿಸಲಾಗಿದೆ.
30 ನಿಮಿಷಗಳಲ್ಲಿ ಟಿಇಎನ್ಎಸ್ ಮತ್ತು ಎಮ್ಇಎಸ್ ಥೆರಪಿಯಿಂದ ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿವಿಧ ಸರಳ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ಔಷಧಿ ರಹಿತವಾಗಿ ಅಡ್ಡ ಪರಿಣಾಮವಿಲ್ಲದೆ ನಿವಾರಿಸಬಹದು. ಈ ಕುರಿತಾಗಿ ಶಿಬಿರದಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಈಗಾಗಲೇ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ದೇಶಾಧ್ಯಂತ 350 ಶಾಖೆಗಳನ್ನು ಹೊಂದಿದ್ದು, 10 ಲಕ್ಷಕ್ಕಿಂತ ಹೆಚ್ಚಿನ ಜನರು ಶಿಬಿರ, ಮತ್ತು ಚಿಕಿತ್ಸೆಯ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ.
ಮಧುಮೇಹ ಅಧಿಕ ರಕ್ತದೊತ್ತಡ, ಸಂಧಿವಾತ , ವೆರಿಕೋಸ್ ವೇನ್ ಊತ , ಪಾರ್ಕಿನ್ಸನ್ ಫಿಸಯಾಟಿಕಾ ಸರ್ವಿಕಲ್ ಸ್ಪಾಂಡಿಲೈಟಿಸ್ , ಪಾರ್ಶ್ವವಾಯು , ಥೈರಾಯ್ಡ್ , ಬೆನ್ನು ನೋವು ಈ ಬೊಜ್ಜು ನಿವಾರಣೆ, ನಿದ್ರಾಹೀನತೆ ಸಂಬಂಧ ಉತ್ತಮ ಚಿಕಿತ್ಸೆ ನೀಡಲಾಗುತ್ತದೆ.
ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು, ಹೆಚ್ಚಿನ ಮಾಹಿತಿಗಾಗಿ 9740874944 / 7899609308 ಮ
ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬೇಕು ಎಂದು ಪ್ರಕರಣೆಯಲ್ಲಿ ತಿಳಿಸಲಾಗಿದೆ.