ರಾಯಬಾಗ ತಾಲೂಕಿನ ಬೆಂಡ್ವಾಡ ವಲಯದ ಮಾವಿನ ಹೋಂಡಾ ಕಾರ್ಯಕ್ಷೇತ್ರದ ನಂದಗೋಕುಲ ಜ್ಞಾನವಿಕಾಸ ಕೇಂದ್ರ ಸಭೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು, ಸಭೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಲಕ್ಷ್ಮಿ ಪಾಟೀಲ್ ಅವರು ಕಾರ್ಯಕ್ರಮವನ್ನು ದಿಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು, ಸಭೆಯಲ್ಲಿ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸುರೇಖಾ ಹೆಬ್ಬಳ್ಳಿ ಮೇಡಮ್ ಅವರು ವಾರ್ಷಿಕೋತ್ಸವ ಕಾರ್ಯಕ್ರಮದ ಬಗ್ಗೆ ಹಾಗೂ ಜ್ಞಾನವಿಕಾಸ ಕೇಂದ್ರದಲ್ಲಿ ಸಿಗುವ ಎಲ್ಲ ಉತ್ತಮ ಮಾಹಿತಿಯನ್ನು ಅಳವಡಿಸಿಕೊಳ್ಳಿ ಎಂದು ಮಾಹಿತಿ ನೀಡಿದರು, ಮಾವಿನಹೋಂಡ ಕನ್ನಡ ಶಾಲೆಯ ಶಿಕ್ಷಕರಾದ ಸಿದ್ದಪ್ಪ ಸರ್ ಅವರು ಧರ್ಮಸ್ಥಳದ ಪೂಜ್ಯ ಖಾವಂದರು ಹಾಗೂ ಮಾತ್ರ ಶ್ರೀ ಅಮ್ಮನವರು ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು, ಸಭೆಯಲ್ಲಿ ಒಕ್ಕೂಟ ಅಧ್ಯಕ್ಷರಾದ ಪ್ರೀತಿ ಜೋಕೆ ಅವರು ತಮ್ಮ ಅನಿಸಿಕೆಯ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಹಾಗೂ ಊರಿನ ಹಿರಿಯರಾದ ಅಪ್ಪಸಾಬ ನದಾಫ, ಜವಾಬ್ದಾರಿ ಸಂಘದ ಅಧ್ಯಕ್ಷರಾದ ಸುನಿತಾ ಪಾಟೀಲ್, ಕುಮಾರ್ ಸರ್, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು, ಸಭೆಯಲ್ಲಿ ಸೇವಾ ಪ್ರತಿನಿಧಿಯವರಾದ ಶ್ರೀಮತಿ ರೇಖಾ ಚೌಹಾನ್ , ಕೇಂದ್ರದ ಸದಸ್ಯರು,ಉಪಸ್ಥಿತರಿದ್ದರು.