ರಾಯಭಾಗ : ನಾಡಿನ ಬಹು ಶ್ರೇಷ್ಠವಾದ ವಚನ ಸಾಹಿತ್ಯ ಸಂಪತ್ತು ನಮ್ಮ ಕೈ ಸೇರಿದ್ದು ಡಾ. ಫ. ಗು. ಹಳಕಟ್ಟಿ ಅವರ ಪರಿಶ್ರಮ ತ್ಯಾಗದಿಂದ ಎಂದು ಡಾ. ಬಿ .ಎಂ ಪಾಟೀಲ ಹೇಳಿದರು
ಅವರು ವಚನ ಪಿತಾಮಹ ಡಾ. ಫ. ಗು.ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ಅಡಿಯಲ್ಲಿ ಶರಣ ಚೇತನ ಬಳಗ ಹಮ್ಮಿಕೊಂಡ ತಿಂಗಳ ಅಧ್ಯಾತ್ಮ ಜ್ಞಾನದಾಸೋಹ ಕಾರ್ಯಕ್ರಮದಲ್ಲಿ ಡಾ. ಫ. ಗು.ಹಳಕಟ್ಟಿ ಜನ್ಮದಿನೋತ್ಸವ ಹಾಗೂ ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಡಾ. ಫ. ಗು.ಹಳಕಟ್ಟಿಯವರು ಸರಕಾರಿ ವಕೀಲರು, ಮುಂಬೈ ಸರ್ಕಾರದ ಶಾಸಕರು, ವಿಜಯಪುರ ನಗರಸಭೆ ಅಧ್ಯಕ್ಷರು, ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು, ಬ್ಯಾಂಕ್ ಸಂಸ್ಥಾಪಕರು ಹೀಗೆ ಹಲವಾರು ಉನ್ನತ ಹುದ್ದೆಗಳಲಿದ್ದವರು. ಸಾಕಷ್ಟು ಆಸ್ತಿ ಸಂಪತ್ತು ಗಳಿಸಿ ತಮ್ಮ ಇಡೀ ಜೀವನವನ್ನು ಸಿರಿವಂತಿಕೆಯ ವೈಭವದಿಂದ ಕಳೆಯುಬಹುದಾಗಿತ್ತು ಆದರೆ ಹಾಗೆ ಮಾಡಲಿಲ್ಲ ಅವರು ಬಸವಾದಿ ಶರಣರ ವಚನ ಸಾಹಿತ್ಯ ಚರಿತ್ರೆಗಳ ಶೋಧನೆ ಮತ್ತು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರು ನುಶಿ ಹೆಗ್ಗಣಗಳಿಗೆ ಆಹಾರವಾಗಬಹುದಾಗಿದ್ದ ವಚನ ಸಾಹಿತ್ಯದ ಕಡೆಗೆ ಯಾರು ಗಮನ ಹರಿಸಿರಲಿಲ್ಲ ಮೊಟ್ಟಮೊದಲ ವಚನಗಳನ್ನು ಕಂಡು ಅಭಿಮಾನ ಪಟ್ಟವರೇ ಡಾ. ಫ. ಗು.ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ ,ಪರಿಸ್ಕರಿಸಿ, ಪ್ರಕಟಿಸಿ ‘ವಚನಗುಮ್ಮಟ’ ಎಂಬ ಅಭಿಧಾನ ಹೊಂದಿದವರು ಎಂದು ವಿವರಿಸಿದರು.
ಜೀವವಿಮಾ ತಾಲೂಕ ಅಭಿವೃದ್ಧಿ ಅಧಿಕಾರಿ ತಾನಾಜಿ ಶಿರಗುಪ್ಪಿ ಅವರು ಡಾ. ಫ. ಗು.ಹಳಕಟ್ಟಿಅವರು ವಚನ ಸಾಹಿತ್ಯ ಸಂಗ್ರಹಿಸಲು ಪಟ್ಟ ಶ್ರಮ ಯುವಕರಿಗೆ ಸ್ಪೂರ್ತಿದಾಯಕ ವಾದದ್ದು ಎಂದು ಹೇಳಿದರು.
ನಿವೃತ್ತ ನೌಕರ ಸಂಘದ ಅಧ್ಯಕ್ಷ ಸಂಗಪ್ಪಾ ಮೀಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಚನ ಸಾಹಿತ್ಯ ಸಂಪತ್ತನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು.
ಪಿ .ಬಿ. ಮುನ್ಯಾಳ, ಅಶೋಕ ದೇಸಿಂಗೆ, ಎಸ್. ಎಸ್. ಕಾಂಬಳೆ ,ಸಾತಪ್ಪ ಚೌಗಲೆ, ಪಿ.ಬಿ.ಕುಲಕರ್ಣಿ,ಎ.ಎಸ್.ಮುಗಳಖೋಡ, ಶಿವಪುತ್ರ ಅಮರಶೆಟ್ಟಿ, ಶ್ರೀಧರ ಪಾಟೀಲ, ಸವಿತಾ ದಿಬ್ಬದಮನಿ, ಭಾರತಿ ಪಾಟೀಲ, ವಾಣಿಶ್ರೀ ಸಿರಗುಪ್ಪಿ , ಶಿಲ್ಪಶ್ರೀ ದೊಡವಾಡ, ಸವಿತಾ ಪಾಟೀಲ, ವಚನಾ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.
ಪಾವಣಿ ಮತ್ತು ಶಾಂಭವಿ ದೊಡವಾಡ ಪ್ರಾರ್ಥನೆ ಹಾಡಿದರು, ರಾಯಪ್ಪ ಗೊಂಡೆ, ಬೀರಪ್ಪ ಗೊಂಡೆ, ಮಂಗಳಗೀತೆ ಹಾಡಿದರು. ಮಲ್ಲೇಶ ದೊಡಮನಿ ಶರಣ ಸಮರ್ಪಣೆ ಹೇಳಿದರು.ಕಾಡೇಶ ಐಹೊಳೆ ನಿರೂಪಿಸಿದರು.