ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ನೇತೃತ್ವದಲ್ಲಿ ಬಾಗಿನ ಅರ್ಪಣೆ

Ravi Talawar
ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ನೇತೃತ್ವದಲ್ಲಿ ಬಾಗಿನ ಅರ್ಪಣೆ
WhatsApp Group Join Now
Telegram Group Join Now
ಬಳ್ಳಾರಿ ಜುಲೈ 10. ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಕೆಂಚನಗುಡ್ಡ ಗ್ರಾಮದಿಂದ ಹಾದು ಹೋಗುವ ತುಂಗಭದ್ರ ನದಿ ಗೆ (ವಿಜಯನಗರ ಅಣೆಕಟ್ಟು) ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ  ಅವರ ನೇತೃತ್ವದಲ್ಲಿ ಹಾಗೂ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ “ಬಾಗಿನ ಅರ್ಪಿಸಲಾಯಿತು”.
ಈ ಭಾಗದ ರೈತರಿಗೆ ಸಕಾಲದಲ್ಲಿ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಮಾಜಿ ಶಾಸಕರು ಸೋಮಲಿಂಗಪ್ಪ  ಅವರು ದೇವರಲ್ಲಿ ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಇಬ್ರಾಹಂಪುರ ವೀರನಗೌಡ, ಜಿಲ್ಲೆ ಯುವ ಮೋರ್ಚಾ ಅಧ್ಯಕ್ಷರಾದ ಎಂಎಸ್ ಸಿದ್ದಪ್ಪ, ಹಿರಿಯರಾದ ವೀರಭದ್ರಗೌಡ ಚಿರಂಜೀವಿ ರೆಡ್ಡಿ, ನಾಗೇಶಪ್ಪ,  ನಗರ ಸಭೆಯ ಸದಸ್ಯರಾದ ಮೋಹನ್ ರೆಡ್ಡಿ ,ಮೇಕೆಲ್ ವೀರೇಶ್ ,ಮಹದೇವ, ನಟರಾಜ್ ಮತ್ತು ಊರಿನ ಮುಖಂಡರಾದ ಹೊನ್ನಪ್ಪ, ರಾಮರಾಜ ,ಗಂಗಣ್ಣ,ಯುವ ಮೋರ್ಚಾ ಅಧ್ಯಕ್ಷರಾದ ಶೇಖರಗೌಡ ,ರವಿ ಗೌಡ, ಮಂಜು, ಶರಣಬಸನಗೌಡ, ಸಿರಿಗೆರೆ ವಿರುಪಾಕ್ಷಪ್ಪ, ಹೆಚ್ಚ ಸೇಕಪ್ಪ, ಶಂಕ್ರಪ್ಪ, ಬೆಳಗಲ್ ಶಿವಪ್ಪ, ಮಾರೇಶ ,ಸೋಮಯ್ಯ ,ಫಿಡ್ಡಯ್ಯ, ಹನುಮಂತಪ್ಪ, ಮುಕ್ಕಣ್ಣ ,ಬಸವರಾಜ, ಫಕ್ಕೀರಯ್ಯ, ಹುಲುಗಪ್ಪ ,ಬಕಾಟೆ ಈರಯ್ಯ, ಕೋಮಾರಪ್ಪ, ಶಿವರೆಡ್ಡಿ, ಗೌಡ ,ರುದ್ರಮನಿ ಗೌಡ, ಶ್ರೀನಿವಾಸ ,ಮುದುಕಪ್ಪ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು.
WhatsApp Group Join Now
Telegram Group Join Now
Share This Article