ಹಿಡಕಲ್ ಜಲಾಶಯ ಒಳಹರಿವು ಹೆಚ್ಚಳ  ನೀರು ಬಿಡುಗಡೆ

Ravi Talawar
ಹಿಡಕಲ್ ಜಲಾಶಯ ಒಳಹರಿವು ಹೆಚ್ಚಳ  ನೀರು ಬಿಡುಗಡೆ
WhatsApp Group Join Now
Telegram Group Join Now
ಹುಕ್ಕೇರಿ.ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಆಗುತ್ತಿರುವದರಿಂದ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ಒಳ ಹರಿವು ಹರಿದು ಬರುತ್ತಿರುವದರಿಂದ ಜಲಾಶಯ ಶೇಕಡ 85 ರಷ್ಟು ಭರ್ತಿಯಾಗಿದ್ದರಿಂದ ಬುಧುವಾರ ಸಾಯಂಕಾಲ 5 ಘಂಟೆಗೆ ಹುಕ್ಕೇರಿ ತಹಸಿಲ್ದಾರ ಶ್ರೀಮತಿ ಮಂಜುಳಾ ನಾಯಿಕ ಕ್ರಸ್ಟ್‌ ಗೇಟಗಳಿಗೆ ಪೂಜೆ ಸಲ್ಲಿಸಿ ಸುಮಾರು 5 ಸಾವಿರ ಕ್ಯೂಸೆಕ್ಸ ನೀರು ಹೋರ ಬಿಡಲಾಯಿತು .
ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೋರ ಬಿಡಲಾಗುತ್ತಿರುವದರಿಂದ ಹಿರಣ್ಯಕೇಶಿ ನದಿ ಪಾತ್ರದ ಎಲ್ಲ ಗ್ರಾಮಗಳ ಗ್ರಾಮಸ್ಥರು ಹಾಗೂ ತಮ್ಮ  ಜಾನುವಾರುಗಳ ಸಮೇತ ನದಿ ಪಾತ್ರದಿಂದ    ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ನೀರಾವರಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರು ಮತ್ತು  ಹುಕ್ಕೇರಿ ತಹಸಿಲ್ದಾರ ಮಂಜುಳಾ ನಾಯಿಕ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article