ನವದೆಹಲಿ.ಬೆಳಗಾವಿಯಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ ರೈಲಿನ ಕಾರ್ಯಾಚರಣೆಯ ದಿನಾಂಕವನ್ನು ನಿಗದಿಪಡಿಸುವ ಬಗ್ಗೆ ಮತ್ತು ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳಿಗೆ ರೈಲು ಮಾರ್ಗಗಳ ಹಂಚಿಕೆ ಬಗ್ಗೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ ಅವರು ಮನವಿ ಮಾಡಿದರು.
ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ ರೈಲನ್ನು ವಿಸ್ತರಿಸುವ ಪ್ರಸ್ತಾಪವಿದ್ದು, ಮತ್ತು ಅದಕ್ಕೆ ಅನುಗುಣವಾಗಿ ಪ್ರಸ್ತಾವನೆಯ ಪ್ರಕಾರ ಬೆಳಗಾವಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲಿನ ವಿಸ್ತರಣೆಯನ್ನು ಘೋಷಿಸಿದ್ದೀರಿ ಆದ್ದರಿಂದ, ಬೆಳಗಾವಿಯ ಜನರು ಈ ರೈಲಿನಲ್ಲಿ ಪ್ರಯಾಣಿಸಲು ಕಾತುರದಿಂದ ಕಾಯುತ್ತಿದ್ದಾರೆ, ಈ ರೈಲು ಸೇವೆಯನ್ನು ಪ್ರಾರಂಭಿಸುವ ದಿನಾಂಕವನ್ನು ಸಾಧ್ಯವಾದಷ್ಟು ಬೇಗ ನಿಗದಿಪಡಿಸುವಂತೆ.
ಮತ್ತು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಸವದತ್ತಿ ತಾಲೂಕಿಗೆ ರೈಲು ಮಾರ್ಗಗಳನ್ನು ಹಂಚಿಕೆ ಮಾಡುವಂತೆ ಸಚಿವರನ್ನು ಭೇಟಿಯಾಗಿ ಇದು ಈ ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿರುವುದರಿಂದ, ಸಾಧ್ಯವಾದಷ್ಟು ಬೇಗ ಅದನ್ನು ಪರಿಹರಿಸುವಂತೆ ವಿನಂತಿಸಿಕೊಂಡರು ಈ ವೇಳೆ ಸ್ಪಂದಿಸಿದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರುವ ಭರವಸೆ ನೀಡಿದರು.