ಬಳ್ಳಾರಿ ಜುಲೈ 08. ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠಕ್ಕೆ ಹಿಂದಿನ ಸರ್ಕಾರದಲ್ಲಿ ಅಭಿವೃದ್ಧಿ
ಕಾರ್ಯಗಳನ್ನು ಕೈಗೊಳ್ಳಲು 3.5 ಕೋಟಿ ಹಣ ಮಂಜೂರು ಮಾಡಲಾಗಿತ್ತು. ಇದರಲ್ಲಿ ಈಗಾಗಲೇ
ಮಠದ ಕಾಮಗಾರಿಗಳಿಗೆ 2.5ಕೋಟಿ ವೆಚ್ಚವಾಗಿ ಅನುದಾನ ಬಿಡುಗಡೆ ಮಾಡಲಾಗಿತ್ತು ಸರ್ಕಾರವು
ಬದಲಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತರುವಾಯ ಬಾಕಿ ಕೆ1.5 ಕೋಟಿ ಹಣವನ್ನು ಬಿಡುಗಡೆ
ಮಾಡಿರಲಿಲ್ಲ. ಮಠದ ಸ್ವಾಮಿಗಳು ಬಾಕಿ ಬರಬೇಕಾದ ಹಣವನ್ನು ಬಿಡುಗಡೆ ಮಾಡಲು ಸಚಿವ
ಶಿವರಾಜ್ ತಂಗಡಿಯವರಿಗೆ ಮನವಿ ಮಾಡಿ ಕ್ರಮ ಕೈಗೊಳ್ಳದೆ ಹೋದ ಸಂದರ್ಭದಲ್ಲಿ ಅನಿವಾರ್ಯವಾಗಿ ನ್ಯಾಯಾಲದ ಮೊರೆ ಹೋಗಿ ಅನುದಾನವನ್ನು ಪಡಿಯಬೇಕಿದೆ ಇಲ್ಲವೇ ಲಂಚವನ್ನು ನೀಡಿ ಅನುದಾನ ಪಡೆಯಬೇಕಾಗಿದೆ, ಇದು ಕಾಂಗ್ರೆಸ್ ಸರ್ಕಾರದ ಹೀನಾಯ ಆರ್ಥಿಕ ಪರಿಸ್ಥಿತಿಯನ್ನು ತೋರಿಸುತ್ತದೆ, ಸ್ವ ಪಕ್ಷಿಯ ಶಾಸಕರು ಮತ್ತು ಸಚಿವರು ಗ್ಯಾರಂಟಿಗಳನ್ನು ನಿಲ್ಲಿಸಿ ಅಭಿವೃದ್ಧಿ ಕೆಲಸಕ್ಕೆ ಹಣ ಕೊಡಿ ಎಂದು ಹೇಳುತ್ತಿದ್ದಾರೆ ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲಿಸಬಾರದು ಅದರ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕ್ರಮ ಕೈಗೊಳ್ಳಬೇಕು ಮತ್ತು ಹಣವನ್ನು ಸಹ ಮಂಜೂರು ಮಾಡಬೇಕೆಂದು ಭಾರತೀಯ ಜನತಾ ಪಕ್ಷದ ಬಳ್ಳಾರಿ ಜಿಲ್ಲಾ ಘಟಕ ಅಧ್ಯಕ್ಷ ಅನಿಲ್ ನಾಯ್ಡು ಒತ್ತಾಯಿಸಿದರು.
ಅವರು ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿ,
ರಾಜ್ಯ ಸರ್ಕಾರವು ಮಠಮಾನ್ಯಕ್ಕೆ ನೀಡಬೇಕಾದ ಹಣಕ್ಕೂ ಕಮೀಷನ್ ನೀಡಲು ಒತ್ತಾಯಿಸಿರುವುದು ನಾಚಿಕೆಗೇಡಿನ ಸಂಗತಿ
ಸರ್ಕಾರದಲ್ಲಿ ಮಠವಾಗಲಿ, ಮಂದಿರವಾಗಲಿ ಅಥವಾ ವ್ಯಕ್ತಿಯಾಗಲಿ ಲಂಚ ಕೊಟ್ಟರೇ ಮಾತ್ರ ಹಣ
ಬಿಡುಗಡೆ ಮಾಡುವುದು ಎಂದಿರುವುದು ಎಲ್ಲ ಹಂತದಲ್ಲಿಯೂ ಹರಡಿರುವ ಭ್ರಷ್ಟಾಚಾರಕ್ಕೆ ಕನ್ನಡಿ
ಹಿಡಿದಿದೆ.
ರಾಜ್ಯದ ವಿವಿಧ ಮಠ ಮತ್ತು ಸಂಘ ಸಂಸ್ಥೆಗಳಿಗೆ ಬಿಡುಗಡೆ ಮಾಡಬೇಕಾದ ಹಣಕ್ಕೂ ಸಚಿವರಿಗೆ
ಕಪ್ಪ ನೀಡಿ ಪಡೆಯಬೇಕಾದ ದುರವಸ್ಥೆ ಸ್ಥಿತಿಯು ಅತ್ಯಂತ ಖಂಡನೀಯ ಎಂದರು.
ಅನುದಾನ ಬಿಡುಗಡೆಗಾಗಿ ಮಠಾಧೀಶರ ಹತ್ತಿರ ಕಮಿಷನ್ ಕೇಳಿರುವ
ಹಿಂದುಳಿದ ವರ್ಗದ ಸಚಿವ ಶಿವರಾಜ್ ತಂಗಡಿಯವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸುತ್ತೇವೆ.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಎಂಎಲ್ಸಿ ಸತೀಶ್ ರೆಡ್ಡಿ, ಕೆ ಎಸ್ ದಿವಾಕರ್ ಸೇರಿದಂತೆ ಹಲವಾರು ಇದ್ದರು.