ನೇಸರಗಿ. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಸಂದರ್ಭದಲ್ಲಿ ಶಿಸ್ತು, ತಾಳ್ಮೆ, ಕ್ರೀಡೆ, ಬುದ್ದಿವಂತಿಕೆ ಇವುಗಳನ್ನು ಬಳಸಿಕೊಂಡು ಆಟ, ಪಾಠದ ಜೊತೆಗೆ ಶಾಲಾ ಮಂತ್ರಿಮಂಡಲದಲ್ಲಿ ಭಾಗವಹಿಸಿ ಜೀವನದಲ್ಲಿ ವಿದ್ಯಾರ್ಥಿಗಳು ಆಯಾ ವಿಭಾಗಗಳ ಅನುಭವ ಪಡೆಯಬೇಕೆಂದು ವಿದ್ಯಾ ಮಂದಿರ ಪ್ರೌಢ ಶಾಲೆಯ ಸಂಚಾಲಕರಾದ ಫಾದರ್ ಮಿನಿನೋ ಗುಣಸಾಲ್ವಿಸ ಹೇಳಿದರು.
ಅವರು ಮಂಗಳವಾರದಂದು
2025- 26 ನೇ ಸಾಲಿನ ವಿದ್ಯಾ ಮಂದಿರ ಪ್ರೌಢಶಾಲೆ ನೇಸರಗಿ ಶಾಲಾ ಸಂಸತ್ತಿನ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಮಂಜುನಾಥ ಹುಲಮನಿ ಮಾತನಾಡಿ ಶಾಲೆಯ ಸಂಸತ್ತು ಎಲ್ಲ ವಿಭಾಗ ಹೊಂದಿರುತ್ತೆ, ಆಟ, ಪಾಠ,ಕಲರ ಗುಂಪು, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ, ಅರೋಗ್ಯ, ಸ್ವಚ್ಛತೆ ಚಟುವಟಿಕೆಗೆ ಮಂತ್ರಿ ಮಂಡಳ ರಚಿಸಿ ಬಾಲ್ಯದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ವಿಶೇಷ ಆದ್ಯತೆ ವಿದ್ಯಾರ್ಥಿಗಳು ನೀಡಬೇಕೆಂದರು.
ಶಾಲೆಯ ಮುಕ್ಯೋಪಾಧ್ಯಾಯರಾದ ಫಾದರ್ ಹ್ಯಾರಿ ವಿಕ್ಟರ ಮಾತನಾಡಿ ಶಾಲಾ ಸಂಸತ್ತಿನ ಪದಗ್ರಹನದಲ್ಲಿ ವಿದ್ಯಾರ್ಥಿಗಳು ಲವಲವಿಕೆಯಿಂದ ಭಾಗವಹಿಸಿದ್ದು ಅವರ ಶಿಸ್ತು ಮತ್ತು ಮುಂದಿನ ಜೀವನದ ಬೆಳವಣಿಗೆ ಸಹಕಾರಿ ಆಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ ಬಿ ಬೆಟಗೇರಿ, ಸ್ವಾಗತ ಬಿ ಆರ್ ಪಾಟೀಲ ನಡೆಸಿಕೊಟ್ಟರು, ನಿರೂಪಣೆಯನ್ನು ಶ್ರೀಮತಿ ಜೆ ಎಮ್ ಪಟ್ಟಣಶೆಟ್ಟಿ, ವಂದನೆಯನ್ನು ಕು. ಪ್ರೀತಿ ಜ್ಯೋತಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕರು, ಎಲ್ಲ ವಿಭಾಗಗಳ ಮಂತ್ರಿ ಮಂಡಲದ ಅಧ್ಯಕ್ಷರು, ಭೋಧಕ್ಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.