ಧಾರವಾಡ: ಮನುಷ್ಯ ಸನ್ಮಾರ್ಗದ ಕಾಯಕದಿಂದ ಗಳಿಕೆ ಮಾಡಿ, ಅದರಲ್ಲಿನ ತುಸು ಭಾಗವನ್ನು ದಾನ- ಧರ್ಮ, ಪರೋಪಕಾರ ಕಾರ್ಯ ಗಳಿಗೆ ವಿನಿಯೋಗ ಮಾಡಿದಾಗ ಜನ್ಮ ಸಾರ್ಥಕವಾಗುತ್ತದೆ. ತವನಪ್ಪ ಅಷ್ಟಗಿ ಇದಕ್ಕೆ ಉತ್ತಮ ನಿದರ್ಶನ ಎಂದು ಉಪ್ಪಿನಬೆಟ ಗೇರಿ ಜಗದ್ಗುರು ವಿರೂಪಾಕ್ಷೇಶ್ವರ ಮೂರು ಸಾವಿರ ವಿರಕ್ತ ಮಠದ ಮನಿಪ್ರ ಕುಮಾರ ವಿರೂಪಾಕ್ಷ ಸ್ವಾಮೀಜಿ ಶ್ಲಾಘಿಸಿದರು.
ಅವರು, ಕರ್ನಾಟಕ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿಯವರ 63 ಜನ್ಮದಿನಾಚರಣೆಯ ಅಭಿನಂದನಾ ಸಮಾರಂಭದ ನಿಮಿತ್ತ ಅವರ ಅಭಿಮಾನಿ ಬಳಗ ಮತ್ತು ಗೆಳೆಯರ ಬಳಗ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಧಾರವಾಡ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಶಿಕ್ಷಕ-ಸಾನ್ನಿಧ್ಯ ವಹಿಸಿ ಮಾತನಾಡಿದರು.
ತವನಪ್ಪ ಅಷ್ಟಗಿ ಧಾರವಾಡ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಜನಾನುರಾಗಿ ನಾಯಕರಾಗಿ ಹೆಸರು ಮಾಡಿದ್ದಾರೆ ಎಂದು ಬಣ್ಣಿಸಿದರು
ಧಾರವಾಡ ಮುರುಘಾ ಮಠದ ಮನಿಪ್ರ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ತವನಪ್ಪ ಅಷ್ಟಗಿ ರೈತರು,ಬಡವರ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡು ಉದ್ಯಮದ ಜತೆಗೆ ಅವರ ಸಮಾಜಮುಖಿ ಕಾರ್ಯಗಳು ಮಾದರಿಯಾಗಿವೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ದೀಪಕ ಚಿಂಚೋರೆ, ಅಷ್ಟಗಿ ಅವರು ಬಡವ ಬಲ್ಲಿದ ಎನ್ನದೇ ಜಾತಿ, ಬೇಧ ಮಾಡದೇ ಎಲ್ಲರನ್ನೂ ಪ್ರೀತಿ, ವಿಶ್ವಾಸಗಳೊಂದಿಗೆ ಸ್ಪಂದಿಸುವ
ಅಪರೂಪದ ನಾಯಕ ಎಂದರು.
ಪರಮೇಶ್ವರ ದಂಡಿನ ಪ್ರಾಸ್ತಾವಿಕ
ಮಾತನಾಡಿದರು. ಧಾರವಾಡ ಅಂಜುಮನ್ ಇಸ್ಲಾಂ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಪಾಟೀಲ, ಹನುಮಂತ ಕೊಟಬಾಗಿ, ರಾಬರ್ಟ್ ದದ್ದಾಪುರಿ ಸೇರಿದಂತೆ ಹಲವು ನಾಯಕರು ಶುಭಕೋರಿಮಾತನಾಡಿದರು.
ತವನಪ್ಪ ಅಷ್ಟಗಿ ಮಾತನಾಡಿ, ನಮ್ಮ ಕುಟುಂಬಕ್ಕೆ ರಾಜಕೀಯ ಹಿನ್ನೆಲೆ ಇಲ್ಲದಿದ್ದರೂ ಬಡತನ ಕುಟುಂಬದಿಂದ ಬಂದ ನಮಗೆ ಜನರು ತೋರಿದ ಪ್ರೀತಿಗೆ ತಾವು ಸದಾ ಕೃತಜ್ಞರಾಗಿದ್ದು, ಜನ ಸೇವೆಗೆ ಸಿದ್ಧವಿರುವುದಾಗಿ ಹೇಳಿದರು.
ಇದರೊಟ್ಟಿಗೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತವನಪ್ಪ ಅಷ್ಟಗಿ ಅವರಿಗೆ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಸಿಹಿ ತಿನ್ನಿಸಿ, ಸನ್ಮಾನಿಸಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ತವನಪ್ಪ ಅಷ್ಟಗಿ ಅವರ ಜನ್ಮದಿನಾಚರಣೆಯ
ಅಭಿನಂದನಾ ಕಾರ್ಯಕ್ರಮದಲ್ಲಿ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಉಪ್ಪಿನ ಬೆಟಗೇರಿಯ ಕುಮಾರ ವಿರುಪಾಕ್ಷ ಸ್ವಾಮೀಜಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ, ದತ್ತಾ ಡೋರ್ಲೆ, ಪ್ರಶಾಂತ ಕೆಕರೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.