ಜು.1 ರಿಂದ ಅಕ್ಟೋಬರ 7 ರವರೆಗೆ ನ್ಯಾಯಾಲಯಗಳಲ್ಲಿ ವಿಶೇಷ ಆಂದೋಲನ: ಜಗದೀಶ ಬಿಸೇರೊಟ್ಟಿ

Ravi Talawar
ಜು.1 ರಿಂದ ಅಕ್ಟೋಬರ 7 ರವರೆಗೆ ನ್ಯಾಯಾಲಯಗಳಲ್ಲಿ ವಿಶೇಷ ಆಂದೋಲನ: ಜಗದೀಶ ಬಿಸೇರೊಟ್ಟಿ
WhatsApp Group Join Now
Telegram Group Join Now
ರಾಯಬಾಗ:  ನ್ಯಾಯಾಲಯದಲ್ಲಿ ಇರುವ ಪಕ್ಷಗಾರರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಜು.1 ರಿಂದ ಅಕ್ಟೋಬರ 7 ರವರೆಗೆ ದೇಶಕ್ಕಾಗಿ ಮಧ್ಯಸ್ಥಿಕೆ ಎಂಬ ವಿಶೇಷ ಆಂದೋಲನ ಹಮ್ಮಿಕೊಂಡಿದ್ದು ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.
ಶುಕ್ರವಾರ ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಆದೇಶದ ಮೇರೆಗೆ ನ್ಯಾಯಾಲಯಗಳಲ್ಲಿ 90 ದಿನಗಳವರೆಗೆ ಈ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪಕ್ಷಗಾರರು ಮತ್ತು ವಕೀಲರು ತಮ್ಮ ಪ್ರಕರಣಗಳನ್ನು ಮಧ್ಯಸ್ಥಗಾರರ ಮೂಲಕ ಬಗೆ ಹರಿಸಿಕೊಳ್ಳಲು ಇದೊಂದು ಒಳ್ಳೆಯ ಅವಕಾಶವಿದ್ದು, ಇದರಿಂದ ಪ್ರಕರಣಗಳು ಶೀಘ್ರ ವಿಲೇವಾರಿ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಪಿ.ಎಮ್.ದರೂರ, ಕಾರ್ಯದರ್ಶಿ ಎಸ್.ಬಿ.ಬಿರಾದಾರಪಾಟೀಲ, ಸಹಕಾರ್ಯದರ್ಶಿ ಬಿ.ಕೆ.ಶಿಂಗಾಡೆ, ಮಧ್ಯಸ್ಥಗಾರರಾದ ವಿ.ಜಿ.ಖವಟಕೊಪ್ಪ, ಎನ್.ಎಮ್.ಯಡವನ್ನವ್ವರ, ಎಮ್.ಕೆ.ಖೊಂಬಾರೆ, ವಿ.ಎ.ಮೊರೆ ಹಾಗೂ ವಕೀಲರಾದ ಕೆ.ಎಸ್.ಫುಂಡಿಪಲ್ಲೆ, ಎಸ್.ಎಸ್.ನಾಯಿಕ, ಎ.ಬಿ.ಪಡೋಲಕರ, ಎನ್.ಎಸ್.ಒಡೆಯರ, ಎಸ್.ಎಮ್.ಕಳ್ಳೆ, ಆರ್.ಎಸ್.ಹೊಳೆಪ್ಪಗೋಳ, ಪಿ.ಆರ್.ಕಡಟ್ಟಿ, ಎಮ್.ಎಮ್.ಕೋಟಿವಾಲೆ, ಕೆ.ಎಲ್.ಕೆರೂರೆ ಸೇರಿ ಅನೇಕರು ಇದ್ದರು.
WhatsApp Group Join Now
Telegram Group Join Now
Share This Article