ಸಾಮರಸ್ಯ ಕಾವ್ಯಗಳು ರಚನೆಯಾಗಲಿ: ಕಾ.ತ.ಚಿಕ್ಕಣ್ಣ

Ravi Talawar
ಸಾಮರಸ್ಯ ಕಾವ್ಯಗಳು ರಚನೆಯಾಗಲಿ: ಕಾ.ತ.ಚಿಕ್ಕಣ್ಣ
WhatsApp Group Join Now
Telegram Group Join Now
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಎರಡು ದಿನಗಳ ವಿಚಾರ ಸಂಕಿರಣ

ಬಳ್ಳಾರಿ,ಜು.04
ಪ್ರಸ್ತುತ ಸಮಾಜದಲ್ಲಿ ಕೂಡಿ ಬಾಳುವ ಸಂದೇಶ ನೀಡುವ ಕಾವ್ಯಗಳು ರಚನೆಯಾಗಬೇಕು ಎಂದು ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಕಾ. ತ. ಚಿಕ್ಕಣ್ಣ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರ, ಬೆಂಗಳೂರು ಹಾಗೂ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ವಿಭಾಗದ ಸಂಯುಕ್ತ ಆಶ್ರಯದಲ್ಲಿ ‘ಕನ್ನಡ ಕಾವ್ಯ ಪರಂಪರೆ ಮತ್ತು ಕನಕದಾಸ’ ಎರಡು ದಿನಗಳ ವಿಚಾರ ಸಂಕಿರಣವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಕಾವ್ಯ ಪರಂಪರೆಯಲ್ಲಿ ಕನಕದಾಸರನ್ನು ಉನ್ನತ ಸ್ಥಾನದಲ್ಲಿರಿಸಿದ್ದೇವೆ. 15ನೇ ಶತಮಾನದಲ್ಲಿನ ಕನಕದಾಸರ ಕಾವ್ಯ ಹಾಗೂ ತತ್ವಪದಗಳು ಮಾನವಿ ಮೌಲ್ಯಗಳಿಂದ ಇಂದಿಗೂ ಪ್ರಸ್ತುತವಾಗಿವೆ. ಸಮಾಜದ ಸಂಕಿರ್ಣ ವ್ಯವಸ್ತೆಯನ್ನು ಬೀಡಿಸಿ ಹೇಳುತ್ತವೆ. ಸಮಾಜದ ಒಳಿತಿಗಾಗಿ ಹಲವಾರು ಕವಿಗಳು ದಾರ್ಶನಿಕರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ಮುನಿರಾಜು ಮಾತನಾಡಿ, ಕನಕದಾಸರ ಕೀರ್ತನೆಗಳಲ್ಲಿ ಜನರ ಸಾಮಾಜಿಕ ಬದುಕಿನ ವಾಸ್ತವಾಂಶಗಳನ್ನು ಗುರುತಿಸಿದ್ದಾರೆ. ಸಾಮಾಜಿಕ ಬದುಕನ್ನು ತಿದ್ದುತ್ತಾ ಅಂತರAಗದ ಅರಿವಿನ ಬೆಳಕನ್ನು ಹೊತ್ತಿಸಿದರು. ಕನಕದಾಸರು ತಮ್ಮ ಕಾಲದಲ್ಲಿನ ಸಂಕೀರ್ಣ ವ್ಯವಸ್ಥೆಯನ್ನು ಕಾವ್ಯಗಳ ಮುಖಾಂತರ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ವಿವಿಯಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಜಿ.ಕೆ. ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿದ ರಾಜ್ಯಗಳಿಂದ ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ನಂತರದಲ್ಲಿ ವಿಚಾರಗೋಷ್ಠಿಗಳು ಜರುಗಿದವು.
ಈ ಸಂದರ್ಭದಲ್ಲಿ ವಿವಿಯ ಪ್ರಭಾರಿ ಕುಲಸಚಿವ ಪ್ರೊ.ಜಿ.ಪಿ.ದಿನೇಶ್, ಕಲಾ ನಿಕಾಯದ ಡೀನರಾದ ಪ್ರೊ.ರಾಬರ್ಟ್ ಜೋಸ್,  ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯರಾದ ದಸ್ತಗಿರ ದಿನ್ನಿ, ಡಾ.ಅನುಪಮ.ಎಚ್.ಎಸ್., ಡಾ.ಎಚ್.ಶಶಿಕಲಾ ವೇದಿಕೆ ಮೇಲೆೆ ಉಪಸ್ಥಿತರಿದ್ದರು.
ವಿವಿಯ ಕನ್ನಡ ಅಧ್ಯಯನ ವಿಭಾಗದ ಉಪನ್ಯಾಸಕ ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ. ಶಿವಪ್ರಕಾಶ ಕೆ. ಎಸ್. ನಿರೂಪಿಸಿದರು. ಡಾ. ಶಕೀಲಾ ಕೆ ವಂದಿಸಿದರು. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸರ್ವ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
WhatsApp Group Join Now
Telegram Group Join Now
Share This Article