ಅಥಣಿ: ಅಥಣಿ ಮತಕ್ಷೇತ್ರದಲ್ಲಿ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನದಿಂದ ಶೆ.೯೬ ರಷ್ಟು ನೀರಾವರಿಯಾಗಿದೆ. ಕೊಟ್ಟಲಗಿ-ಅಮ್ಮಾಜೇಶ್ವರಿ ಏತನೀರಾವರಿ ಕಾಮಗಾರಿಯನ್ನು ೨೬ ಜನೆವರಿ ೨೦೨೬ಕ್ಕೆ ಪ್ರಾಯೋಗಿಕ ಪ್ರಾರಂಭಿಸಲಾಗುವದು, ಸಿ ಎಂ ಸಿದ್ದರಾಮಯ್ಯನವರು ಕ್ಷೇತ್ರದ ಅಭಿವೃದ್ದಿಗೆ ಹಣಕಾಸಿನ ತೊಡಕಾಗದಂತೆ ಸಹಕರಿಸಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಯಲ್ಲಮ್ಮವಾಡಿ ಕರೆಯ ಮೂಲಕ ೮ ಕೆರೆಗಳಿಗೆ ನೀರು ತುಂಬಿಸುವ ೯೫ ಕೋಟಿ ಅಂದಾಜು ವೆಚ್ಚದ ಯೋಜನೆಗೆ ಪ್ರಾಯೋಗಿಕ ಚಾಲನೆಯನ್ನು ಗುರುವಾರ ನೀಡಿ ಮಾತನಾಡಿದ ಅವರು ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ಅನುಷ್ಠಾನ ಗೊಳಿಸಬೇಕು. ಕಾಂಗ್ರೆಸ್ ಪಕ್ಷದವರಿಂದ ವಾಗ್ದಾನ ಪಡೆದುಕೊಂಡು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದೆ ಹೀಗಾಗಿ ಸಿ.ಎಮ್.ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಹಕಾರದಿಂದ ತಾಲೂಕಿನಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿ ಈಗಾಗಲೇ ಶೇ.೭೦ ರಷ್ಟು ಮುಗಿದಿದ್ದು, ಜನೇವರಿ ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಅಮ್ಮಾಜೇಶ್ಚರಿ ಏತ ನೀರಾವರಿ ಹಾಗೂ ಕೆರೆ ತುಂಬುವ ಯೋಜನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅಥಣಿಗೆ ಆಗಮಿಸಿ ಈ ಎರಡೂ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಎರಡೂ ಯೋಜನೆಗಳಿಗೆ ಮುಖ್ಯಮಂತ್ರಿಗಳು ಉದ್ಘಾಟಿಸುವ ಸಂದರ್ಭದಲ್ಲಿಯೇ ಕೃಷಿ ಮಹಾವಿದ್ಯಾಲಯದ ಕಾಮಗಾರಿಗೂ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಕರಿ ಮಸೂತಿ ನೀರಾವರಿ ಯೋಜನೆಯಿಂದ ಹೊರಗುಳಿದ ೧೨ ಸಾವೀರ ಎಕರೆ ಸೇರಿದಂತೆ ೭೫ ಸಾವೀರ ಎಕರೆ ಭೂಮಿ ಯೋಜನೆಗಳಿಂದ ನೀರಾವರಿಗೆ ಒಳಪಡುತ್ತದೆ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ, ಗುಣಮಟ್ಟದ ವಿದ್ಯುತ್, ನೀರು, ರೈತ ಬೆಳೆದ ಕೃಷಿ ಉತ್ಪನ್ನಗಳನ್ನು ಸಾಗಿಸಲು ಸುಸಜ್ಜಿತ ರಸ್ತೆ ಬೇಕು ಈ ನಿಟ್ಟಿನಲ್ಲಿ ನಾನು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ, ಅಲ್ಲದೆ ಕೆರೆ ತುಂಬುವ ಯೋಜನೆ ಪೂರ್ಣಗೊಳ್ಳಲು ಸಣ್ಣ ನೀರಾವರಿ ಯೋಜನೆಯ ನಿವೃತ್ತ ಸಹಾಯಕ ಅಭಿಯಂತರ ಶ್ರೀಕಾಂತ ಮಾಕಾಣಿ ಹಾಗೂ ಸದ್ಯದ ಅಭಿಯಂತರ ಪ್ರವೀಣ ಪಾಟೀಲ ಇವರ ಪರಿಶ್ರಮವೇ ಕಾರಣ. ಗುತ್ತಿಗೆದಾರ ಸಂತೋಷ ಗಾಣಿಗೇರ ಕೂಡ ಉತ್ತಮವಾಗಿ ಕಾಮಗಾರಿ ನಿರ್ವಹಿಸಿದ್ದ ಪರಿಣಾಮ ಯೋಜನೆ ಪೂರ್ಣಗೊಂಡಿದೆ ಎಂದು ಶಾಸಕ ಲಕ್ಷö್ಮಣ ಸವದಿ ಹೇಳಿದರು
ಅತಿಥಿಗಳಾಗಿ ಆಗಮಿಸಿದ್ದ ಸಿದರಾಯ ಯಲ್ಲಡಗಿ, ಶೇಖರ ನೇಮಗೌಡ, ಚಿಕ್ಕ ನೀರಾವರಿ ಇಲಾಖೆಯ ಗುರುಬಸವರಾಜ, ಮಾತನಾಡಿದರು. ಈ ವೇಳೆ ಪುರಸಭಾ ಸದಸ್ಯರಾದ ದತ್ತಾ ವಾಸ್ಟರ್, ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ಮುಖಂಡರಾದ ಬಸವರಾಜ ಸಿಂಧನೂರ, ರಮೇಶ ಪವಾರ, ಶಿವಾನಂದ ದಿವಾನಮಳ, ರಾಮ ಧರಿಗೌಡ, ಗುರು ದಾಸ್ಯಾಳ, ಶೇಖರಗೌಡ ನೆಮಗೌಡ, ಶಿದ್ರಾಯ್ ಯಲ್ಲಡಗಿ, ಅಮೋಘಸಿದ್ದ ಕೊಬ್ರಿ, ಅರ್ಜುನ್ ಪೂಜಾರಿ, ಬಸವರಾಜ್ ಸಿಂಧೂರ, ನುರಅಹಮದ ಡೊಂಗರಗಾಂವ, ರಾಮನಗೌಡ ಪಾಟಿಲ, ಮಹಾಂತೇಶ ಬಾಡಗಿ, ಗ್ರಾಮ ಪಂಚಾಯತ ಅಧ್ಯಕ್ಷೆ ಶಾಲವ್ವ ಪೂಜಾರಿ, ಗುತ್ತಿಗೆದಾರ ಸಂತೋಷ ಗಾಣಿಗೇರ,ಮಹಾತೇಶ ಟಕ್ಕನ್ನವರ,ಮಲ್ಲು ಕುಳೋಳ್ಳಿ, ಪ್ಸೇರವೀಣ ಪಾಟೀಲ,ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

ಬಾಕ್ಷ: ವಿರೋಧ ಪಕ್ಷದ ಕೆಲ ನಾಯಕರು ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ವಿಫಲವಾಗಿದೆ ಎಂದು ಹೇಳಿಕೆ ಕೊಡುವ ಮೂಲಕ ರೈತರಲ್ಲಿ ಆತಂಕ ಮೂಡಿಸುತ್ತಿದ್ದು, ಈ ಯೋಜನೆ ಪೂರ್ಣಗೊಂಡ ನಂತರ ವಿಫಲ ಅಥವಾ ಸಫಲವಾಗುತ್ತದೆಯೋ ಎನ್ನುವದರ ಕುರಿತು ಚರ್ಚೆಯಾಗಬೇಕು. ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಪಂಚ ಗ್ಯಾರಂಟಿ ಅನುಷ್ಠಾನ ದಿಂದ ಆರ್ಥಿಕ ಅಡತಡೆ ಉಂಟಾಗಬಾರದೆನ್ನುವ ಕಾರಣದಿಂದ ನಾಬಾರ್ಡ ಯೋಜನೆಯಡಿ ಸೇರ್ಪಡೆಗೊಳಿಸಿದೆ.
ಲಕ್ಷö್ಮಣ ಸವದಿ, ಶಾಸಕರು ಅಥಣಿ
ಲಕ್ಷö್ಮಣ ಸವದಿ, ಶಾಸಕರು ಅಥಣಿ