ಬಳ್ಳಾರಿ ಜುಲೈ 03. ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ 77ನೇ ಸಂಸ್ಥಾಪನ ದಿನದ ಅಂಗವಾಗಿ ದಿನಾಂಕ 1-7-2025 ರಂದು ಬಳ್ಳಾರಿ ಶಾಖೆಯು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ಇದರ ಭಾಗವಾಗಿ ಸಿಎ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಂಸ್ಥೆಯ ಸದಸ್ಯರು ವಿತರಿಸಿದರು. ನರ ಶಸ್ತ್ರ ಚಿಕಿತ್ಸೆಕರಾದ ಡಾಕ್ಟರ್ ಕಮಲ್ ಕುಮಾರ್ ಜೈನ್ ಅವರು ನಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಯನ್ನು ಹೇಗೆ ನಿಭಾಯಿಸಬೇಕು ಎಂದು ಸಂಸ್ಥೆಯ ಸದಸ್ಯರಿಗೆ ಮಾರ್ಗದರ್ಶನ ಮಾಡಿದರು.
ಬೇವಿನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಸಂಸ್ಥೆಯ ಸದಸ್ಯರು ಈ ಕಾರ್ಯಕ್ರಮದ ಪ್ರಯುಕ್ತ ವಿತರಿಸಿದರು. ಸಂಸ್ಥೆಯ ಹಿರಿಯ ಸದಸ್ಯರಾದ ಸಿರುಗುಪ್ಪದ ಸಿಎ ನಾಗನಗೌಡ ಕೆ ಅವರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಸದಸ್ಯರು ರಕ್ತದಾನವನ್ನು ಸಹ ಮಾಡಿದರು. ಸಂಸ್ಥಾಪನ ದಿನದ ಅಂಗವಾಗಿ ಸಂಸ್ಥೆಯ ಸದಸ್ಯರು ಗಿಡ ನೆಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದರು ಮತ್ತು ಬಳ್ಳಾರಿ ಶಾಖೆಯ ಎದುರುಗಡೆ ಇರುವ ಉದ್ಯಾನವನವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವ ನಡೆಯಿತು.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿಎ ಗಜರಾಜ್.ಡಿ , ಉಪಾಧ್ಯಕ್ಷರಾದ ಸಿಎ ಪುರುಷೋತ್ತಮರೆಡ್ಡಿ, ಕಾರ್ಯದರ್ಶಿಗಳಾದ ಸಿಎ ವಿಶ್ವನಾಥ್ ಆಚಾರಿ ಖಜಂಚಿ ಸಿಎ ಸ್ವಪ್ನ ಪ್ರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಿಎ ಶರಣ್ ಪಾಟೀಲ್ ಸದಸ್ಯರಾದ ಸಿಎ ಹನುಮಂತರೆಡ್ಡಿ ಸಿಎ ವೆಂಕಟೇಶ್ ಗುಂಡ ಮತ್ತು ಸಿಎ ಜಿತೇಂದ್ರ ಭಾಗವಹಿಸಿದ್ದರು.