ಸಣ್ಣ ಮಾರುಕಟ್ಟೆಯ ಮರು ನಿರ್ಮಾಣ ಶೀಘ್ರ ಆರಂಭ: ಶಾಸಕ ನಾರಾ ಭರತ್ ರೆಡ್ಡಿ

Ravi Talawar
ಸಣ್ಣ ಮಾರುಕಟ್ಟೆಯ ಮರು ನಿರ್ಮಾಣ ಶೀಘ್ರ ಆರಂಭ: ಶಾಸಕ ನಾರಾ ಭರತ್ ರೆಡ್ಡಿ
WhatsApp Group Join Now
Telegram Group Join Now
ಬಳ್ಳಾರಿ, ಜು.03: ನಗರದ 11ನೇ ವಾರ್ಡಿನ ವ್ಯಾಪ್ತಿಯ ಸಣ್ಣ ಮಾರುಕಟ್ಟೆಯ ಮರು ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದೆಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಗುರುವಾರ ಮಧ್ಯಾಹ್ನ ಸಲಾಂ ಬಳ್ಳಾರಿ ಅಭಿಯಾನದ ಅಂಗವಾಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದರು.
ಅಂದಾಜು 2 ಕೋಟಿ ರೂ.ಗಳ ವೆಚ್ಚದಲ್ಲಿ ಸಣ್ಣ ಮಾರುಕಟ್ಟೆಯ ಕಟ್ಟಡದ ಮರು ನಿರ್ಮಾಣವನ್ನು ಅತ್ಯಾಧುನಿಕ ಮಾದರಿಯಲ್ಲಿ ಮಾಡಲಾಗುವುದು ಎಂದರು.
ಇಡೀ ದಿನ 11ನೇ ವಾರ್ಡಿನ ವಿವಿಧ ಪ್ರದೇಶಗಳಿಗೆ ಸಂಚರಿಸಿದ ಅವರು ಸ್ಥಳೀಯರಿಂದ ಸಮಸ್ಯೆಗಳನ್ನು ಆಲಿಸಿದರು. ಮುಖ್ಯವಾಗಿ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ಮಾಡಿದರು.
ಈ ಸಂದರ್ಭ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಸೀನಾ, ಎಂ.ಪ್ರಭಂಜನಕುಮಾರ್, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ಬಿಆರೆಲ್ ಸೀನಾ, ಹಗರಿ ಗೋವಿಂದ, ಹೊನ್ನಪ್ಪ, ಎಸ್.ವಾಸುದೇವ ರೆಡ್ಡಿ, ಚಂಪಾ ಚವ್ಹಾಣ್, ಕವಿತಾ, ಥಿಯೇಟರ್ ಶಿವು, ಸ್ಥಳೀಯ ಮುಖಂಡರಾದ ರಾಜ, ಪೆಟ್ರೋಲ್ ವಲಿ, ಶಿವಸ್ವಾಮಿ, ಗೋಪಿ, ಮಾಸ್ ಬಸವ, ಸುಧೀರ್,  ಲೋಕೇಶ್, ಕೆ.ಎಂ.ಗುರು ಸಿದ್ಧೇಶ್, ಇಸ್ಮಾಯಿಲ್, ನೂರ್ ಸೇರಿದಂತೆ ಹಲವರು ಹಾಜರಿದ್ದರು.
WhatsApp Group Join Now
Telegram Group Join Now
Share This Article