ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಾಲೇಜು ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ವತಿಯಿಂದ ನಗರದ ಭರತೇಶ ಪದವಿ ಮಹಾವಿದ್ಯಾಲಯದಲ್ಲಿ ” ಅಂತರಾಷ್ಟ್ರೀಯ ರಾಜಕೀಯದಲ್ಲಿ ತಂತ್ರಜ್ಞಾನದ ಉಪಯೋಗ” ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಸಚಿವರಾದ ಪ್ರೊ. ಎಸ್. ಎಸ್. ಪಟಗುಂದಿ ಅವರು ಮಾತನಾಡಿ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವಿದೇಶಾಂಗ ವ್ಯವಹಾರದಲ್ಲಿ ಇಂದು ಸಾಂಪ್ರದಾಯಿಕ ವಿಧಾನಗಳಿಗಿಂತ ತಾಂತ್ರಿಕ ವಿಧಾನಗಳಿಗೆ ಹೆಚ್ಚು ಒತ್ತು ಮತ್ತು ಮಹತ್ವ ಬಂದಿದೆ. ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿ ತಂತ್ರಜ್ಞಾನ ತನ್ನ ಪ್ರಭಾವವನ್ನು ಬೀರಿದ್ದು ಅದನ್ನು ಸರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬೋಧಿಸಿ ಸಮರ್ಥ ಪ್ರಜೆಗಳನ್ನಾಗಿ ನಿರ್ಮಿಸುವ ಜವಾಬ್ದಾರಿ ಉಪನ್ಯಾಸಕರ ಮೇಲಿದೆ. ತಂತ್ರಜ್ಞಾನವು ಯುದ್ಧ, ಪರಸ್ಪರ ಸಂಬಂಧಗಳು ಮತ್ತು ಅಭಿವೃದ್ಧಿಗೆ ರಾಷ್ಟ್ರದ ಅಭಿವೃದ್ಧಿಗೆ ಪೂರಕ ವಾತಾವರಣವನ್ನು ನಿರ್ಮಿಸಿ ಅವುಗಳ ಏಳಿಗೆಗೆ ಸಹಕರಿಸುತ್ತಿದೆ ಇಂದು ಪ್ರತಿಯೊಂದು ರಾಷ್ಟ್ರ ತಂತ್ರಜ್ಞಾನದ ವಿಷಯದಲ್ಲಿ ಪರಾವಲಂಬಿಯಾಗಿದೆ. ಆದ್ದರಿಂದ ನಾವೆಲ್ಲರೂ ಅದಕ್ಕೆ ಹೊಂದಿಕೊಂಡು ಸಾಮಾಜಿಕ ಸಮತೋಲನ ಕಾಪಾಡಿಕೊಂಡು ಮೌಲ್ಯಗಳನ್ನು ಉಳಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಗಾರದಲ್ಲಿ ರಾಜ್ಯಶಾಸ್ತ್ರ ವಿಷಯದ ನಿವೃತ್ತಿ ಹೊಂದಿದ ಪ್ರಾಧ್ಯಾಪಕರುಗಳಾದ ಡಾ. ವಿ.ಬಿ. ಪಾಟೀಲ ಹಾಗೂ ಪ್ರೊ. ಬಿ.ಜಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು ಅಲ್ಲದೆ, ಪಿಎಚ್.ಡಿ. ನೆಟ್ ಹಾಗೂ ಸೆಟ್ ಪಾಸಾದ ರಾಜ್ಯಶಾಸ್ತ್ರ ಉಪನ್ಯಾಸಕರುಗಳಿಗೆ ಸನ್ಮಾನಿಸಲಾಯಿತು
ಸಮಾರಂಭವನ್ನು ಸಂಘದ ಅಧ್ಯಕ್ಷರಾದ ಡಾ. ವಿ. ಬಿ. ಪಾಟೀಲ ಸ್ವಾಗತಿಸಿ, ಖಜಾಂಚಿಗಳಾದ ಡಾ. ಎಸ್. ಪಿ. ತಳವಾರ ವಂದಿಸಿದರು. ಬಿ. ಓ. ಇ. ಚೇರ್ಮನ್ನರಾದ ಡಾ. ಬಿ ಜಿ ಪಾಟೀಲ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಪೂರ್ಣಿಮಾ ಕಾಟೆ ಪ್ರಾರ್ಥಿಸಿದರು. ಡಾ. ಮಲ್ಲೇಶ ದೊಡ್ಡಲಕ್ಕಣ್ಣವರ ನಿರೂಪಿಸಿದರು.
ಕಾರ್ಯಗಾರದಲ್ಲಿ ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ ರಾಜ್ಯಶಾಸ್ತ್ರ ಪ್ರಾಧ್ಯಾಪಕರುಗಳು ಹಾಜರಿದ್ದರು.