ರಾಮಾಂಜನೇಯ ಮತ್ತು ಹೊನ್ನೂರ್ ಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಿ : ವಕೀಲ್ ಬಾದಾಮಿ

Ravi Talawar
ರಾಮಾಂಜನೇಯ ಮತ್ತು ಹೊನ್ನೂರ್ ಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಿ : ವಕೀಲ್ ಬಾದಾಮಿ
WhatsApp Group Join Now
Telegram Group Join Now
ಜಿಂದಾಲ್ ಬೂದಿದಿಬ್ಬದಲ್ಲಿ ಅಸು ನಿಗಿದ ರಾಮಾಂಜನೇಯ ಮತ್ತು ಹೊನ್ನೂರ್ ಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಿ : ವಕೀಲ್ ಬಾದಾಮಿ, ಶಿವಲಿಂಗ ನಾಯಕ ಒತ್ತಾಯ
 ಬಳ್ಳಾರಿ ಜುಲೈ 03  ಜಿಂದಾಲ್ ಕಾರ್ಖಾನೆ ತುಮಟಿ ಪ್ರದೇಶದಲ್ಲಿ ತನ್ನ ತನ್ನ ವೆಸ್ಟ್ ಸಂಗ್ರಹಿಸಲು ಡಂಪಿಂಗ್ ಯಾರ್ಡನ್ನು  ನಿರ್ಮಿಸಿದೆ, ಈ ಡಂಪಿಂಗ್ ಯಾರ್ಡಿನಲ್ಲಿ ಕಬ್ಬಿಣದ ತುಂಡುಗಳನ್ನು ಆಯಲು ಹೋಗಿ ರಾಮಾಂಜನೇಯ ಮತ್ತು ಹೊನ್ನೂರು ಸ್ವಾಮಿ ಎಂಬ ದಲಿತರು ಸಾವನ್ನಪ್ಪಿರುತ್ತಾರೆ.  ಇವರು ಸಾವನ್ನಪ್ಪಿ ಎರಡೂವರೆ ವರ್ಷ ಕಳೆದರೂ ಸಹ ಇಂದಿಗೂ ಗುತ್ತಿಗೆದಾರರಾಗಲಿ ಅಥವಾ ಜಿಂದಾಲ್ ಕಂಪನಿಯಿಂದ ಆಗಲಿ ಯಾವುದೇ ಪರಿಹಾರವನ್ನು ನೀಡಿರುವುದಿಲ್ಲ, ಇದರಿಂದ ಈ ಎರಡು ಕುಟುಂಬಗಳು ಅಕ್ಷರ ಸಹ ಬೀದಿಪಾಲಾಗಿದ್ದು ಇವರಿಗೆ ಸರ್ಕಾರದಿಂದಾಗಲಿ ಅಥವಾ ಕಂಪನಿಯಿಂದಾಗಲಿ ಕೂಡಲೇ ಪುನರ್ವಸತಿಯನ್ನು ಕಲ್ಪಿಸಬೇಕು ಈ ಕುಟುಂಬಕ್ಕೆ ಒಂದು ಮನೆಯನ್ನು ನಿರ್ಮಿಸಿ ಕೊಡಬೇಕು ಮತ್ತು ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕೆಂದು ಇಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ದಲಿತ ಹಕ್ಕುಗಳ ಸಮಿತಿಯ ವತಿಯಿಂದ  ಪ್ರತಿಭಟನಾ ಧರಣಿಯನ್ನು ನಡೆಸಲಾಯಿತು.
 ಈ ಸಂದರ್ಭದಲ್ಲಿ ವಕೀಲರಾದ ಬಾದಾಮಿ ಸಿಲಿಂಗ ನಾಯಕ ಮಾತನಾಡಿ ಘಟನೆ ನಡೆದು ಸುಮಾರು ಮೂರು ವರ್ಷ ಕಳೆದರೂ ಕಂಪನಿ ಆಗಲಿ ಅಥವಾ ಗುತ್ತಿಗೆದಾರರಾಗಲಿ , ಸಂತ್ರಸ್ತ ಕುಟುಂಬಗಳನ್ನು ಸಂಪರ್ಕಿಸಿ ಇರುವುದಿಲ್ಲ ಮತ್ತು ಆ ಕುಟುಂಬಗಳಿಗೆ ಯಾವುದೇ ಪರಿಹಾರವನ್ನು ಸಹ ನೀಡಿರುವುದಿಲ್ಲ  ಕೂಡಲೇ ಈ ಎರಡು ಸಂತ್ರಸ್ತ ಕುಟುಂಬಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದಾಗಲಿ ಅಥವಾ ಕಾರ್ಖಾನೆಯಿಂದಾಗಲಿ ಮತ್ತು ಜಿಲ್ಲಾಡಳಿತದಿಂದಾಗಲಿ ಕೂಡಲೇ ಪುನರ್ವಸ್ವತಿಯನ್ನು ಕಲ್ಪಿಸಿ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕೆಂದು  ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ, ಆಗ್ರಹಿಸಿದರು.
 ಪ್ರತಿಭಟನೆಕ್ಕೆ ತಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪ್ರತಿಭಟನಾ ಧರಣಿ ನಿರತರ ಬೇಡಿಕೆಯನ್ನು ಶೀಘ್ರದಲ್ಲೇ ಈಡೇರಿಸುವುದಾಗಿ ಭರವಸೆ ನೀಡಿದರು.
 ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಪ್ರಾಂತ ಸಂಘದ ವಿ.ಎಸ್ ಶಿವಶಂಕರ್ , ಎರಗುಡಿ ಮುದಿಮಲ್ಲಯ್ಯ, ರಂಗನ ಕಲ್ಲು ವಿಜಯ್ ಕುಮಾರ್ ಜಂಬಯ್ಯ ನಾಯಕ, ಏಕೆ ಗಂಗಾಧರ  ಎಸ್ ದುರ್ಗಮ್ಮ ಸೇರಿದಂತೆ ಹಲವಾರು ಜನ ಇದ್ದರು.
WhatsApp Group Join Now
Telegram Group Join Now
Share This Article