ಕೆಇಎ ಶುಲ್ಕ ಹೇರಿಕೆ ಮತ್ತು ಸುಲಿಗೆಯ ಧೋರಣೆಗೆ ಎಐಡಿಎಸ್‌ಓ ಖಂಡನೆ

Ravi Talawar
ಕೆಇಎ ಶುಲ್ಕ ಹೇರಿಕೆ ಮತ್ತು ಸುಲಿಗೆಯ ಧೋರಣೆಗೆ ಎಐಡಿಎಸ್‌ಓ ಖಂಡನೆ
WhatsApp Group Join Now
Telegram Group Join Now
ಬಳ್ಳಾರಿ,ಜು.೦3: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿAಗ್, ನರ್ಸಿಂಗ್ ಮತ್ತು ಇತರ ವೃತ್ತಿಪರ ಕೋರ್ಸ್ಗಳ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಆಪ್ಷನ್ ಎಂಟ್ರಿ ಮಾಡಲು ಎಲ್ಲಾ ವಿದ್ಯಾರ್ಥಿಗಳಿಗೆ – ಅವರ ವರ್ಗವನ್ನು ಲೆಕ್ಕಿಸದೆಯೇ ೭೫೦ ರೂ. ಶುಲ್ಕವನ್ನು ವಿಧಿಸಿದೆ. ಈ ಅನಿರೀಕ್ಷಿತ ಮತ್ತು ನ್ಯಾಯಸಮ್ಮತವಲ್ಲದ ನಿರ್ಧಾರವು ತೀವ್ರ ಖಂಡನೀಯವಾಗಿದೆ ಎಂದು ಎಐಡಿಎಸ್‌ಓ ಬಳ್ಳಾರಿ ಜಿಲ್ಲಾ ಸಮಿತಿ ತಿಳಿಸಿದೆ.
ಪ್ರವೇಶ ಪ್ರಕ್ರಿಯೆಯ ಆರಂಭಿಕ ಹಂತಗಳಲ್ಲೇ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷಾ ಮತ್ತು ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ ಎಂಬುದನ್ನು ಗಮನಿಸಬೇಕು. ಆಪ್ಷನ್ ಎಂಟ್ರಿ ಹಂತದಲ್ಲಿ ಹೆಚ್ಚುವರಿ ರೂ. ೭೫೦ ವಿಧಿಸಿರುವುದು ಕೇವಲ ಹೇರಿಕೆ ಮಾತ್ರವಲ್ಲದೇ ಹಗಲು ದರೋಡೆ  ಧೋರಣೆಯನ್ನು ಸಹ ತೋರಿಸುತ್ತದೆ. ೪ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಿಂದ, ಈ ಕ್ರಮವು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ₹೩೦೦ ಕೋಟಿಗಿಂತ ಹೆಚ್ಚು  ಆದಾಯವನ್ನು ಗಳಿಸಿಕೊಡಲಿದೆ. ಈ ಶುಲ್ಕ ಹೇರಿಕೆಯು ನಿಜವಾದ ಆಡಳಿತಾತ್ಮಕ ಅಗತ್ಯವನ್ನು ಪೂರೈಸಲು ಉದ್ದೇಶಿಸಲಾಗಿದೆಯೋ, ಅಥವಾ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿAದ ಹಣವನ್ನು ಸುಲಿಗೆ ಮಾಡುವ ತಂತ್ರವೊ? ಇದರ ನೈಜ ಉದ್ದೇಶವೇನು ಎಂಬ ಪ್ರಶ್ನೆಯನ್ನು ನಾವು ಕೇಳುತ್ತೇವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು,  ಒಂದು ರಾಜ್ಯ ಸರ್ಕಾರಿ ಸಂಸ್ಥೆಯಾಗಿ, ಶಿಕ್ಷಣ ಪಡೆಯುವುದಕ್ಕೆ  ಅನುಕೂಲ ಮಾಡಿಕೊಡಬೇಕೇ ಹೊರತು, ಅದರಿಂದ ಲಾಭಗಳಿಸಬಾರದು. ಈಗಾಗಲೇ ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವ ಸಂದರ್ಭದಲ್ಲಿ ಇಂತಹ ನೀತಿಗಳು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತದೆ ಮತ್ತು ಮಹತ್ವಾಕಾಂಕ್ಷಿ ಯುವಕರ ಮೇಲಿನ ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತವೆ.
ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ ಬಳ್ಳಾರಿ ಜಿಲ್ಲಾ ಸಮಿತಿಯು ಈ ವಿದ್ಯಾರ್ಥಿ ವಿರೋಧಿ ಕ್ರಮವನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ₹೭೫೦ ರ ಆಪ್ಷನ್ ಎಂಟ್ರಿ ಶುಲ್ಕವನ್ನು ತಕ್ಷಣವೇ ಹಿಂಪಡೆಯಬೇಕೆAದು ಆಗ್ರಹಿಸುತ್ತದೆ. ಈ ಅನ್ಯಾಯದ ಹೇರಿಕೆಯ ವಿರುದ್ಧ ಧ್ವನಿ ಎತ್ತಲು ಮತ್ತು  ಕೈಗೆಟುಕುವ ಮತ್ತು ಸಮಾನ  ಶಿಕ್ಷಣ ಪಡೆಯುವ  ಹಕ್ಕನ್ನು ರಕ್ಷಿಸಲು ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಜನರ ಸಾಮಾನ್ಯರು ಒಗ್ಗಟ್ಟಾಗಿ ಹೋರಾಡಬೇಕೆಂದು  ಎಐಡಿಎಸ್‌ಓ  ಮನವಿ ಮಾಡಿದೆ ಎಂದು ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article