ಮಾಸ್-ಕ್ಲಾಸ್‌ ಜೂನಿಯರ್‌ ಟೀಸರ್‌ ಕಿರೀಟಿ  ಭರ್ಜರಿ ಎಂಟ್ರಿ 

Ravi Talawar
ಮಾಸ್-ಕ್ಲಾಸ್‌ ಜೂನಿಯರ್‌ ಟೀಸರ್‌ ಕಿರೀಟಿ  ಭರ್ಜರಿ ಎಂಟ್ರಿ 
WhatsApp Group Join Now
Telegram Group Join Now
      ಜನಾರ್ಧನಾ ರೆಡ್ಡಿ ಪುತ್ರ ಕಿರೀಟಿ ನಟಿಸಿರುವ ಮೊದಲ ಸಿನಿಮಾ ‘ಜೂನಿಯರ್’ ಬಿಡುಗಡೆಗೆ ಸಜ್ಜಾಗಿದೆ. ಸುಮಾರು ಎರಡೂವರೆ ಮೂರು ವರ್ಷಗಳಿಂದ ನಿರ್ಮಾಣ ಆಗುತ್ತಿದ್ದ ಈ ಸಿನಿಮಾ ಪ್ರಚಾರವನ್ನು ಚಿತ್ರತಂಡ   ಆರಂಭ ಮಾಡಿದೆ.
      ಪ್ರಚಾರದ  ಮೊದಲ ಹೆಜ್ಜೆಯಾಗಿ  ಹಾಡನ್ನು ರಿಲೀಸ್ ಮಾಡಿದ್ದ ಚಿತ್ರತಂಡವೀಗ ಟೀಸರ್‌ ನ ವಾರಾಹಿ ಚಲನ ಚಿತ್ರಂ ಯೂಟ್ಯೂಬ್‌ನಲ್ಲಿ  ಬಿಡುಗಡೆಮಾಡಿದೆ. ಮಾಸ್‌ ಜೊತೆಗೆ ಕ್ಲಾಸ್‌ ಅಂಶಗಳನ್ನು ಮಿಕ್ಸ್‌ ಮಾಡಿ ಟೀಸರ್‌ ಕಟ್‌ ಮಾಡಲಾಗಿದೆ. ಎಮೋಷನ್‌ ಫ್ಲಸ್‌ ಲವ್‌, ಆಕ್ಷನ್‌ ಎಲ್ಲವೂ ಟೀಸರ್ ನಲ್ಲಿದೆ. ಕಿರೀಟಿ ಡ್ಯಾನ್ಸ್‌, ಫೈಟ್‌, ಭರ್ಜರಿ ಡೈಲಾಗ್‌ ಹೇಳುತ್ತಾ ರಾಯಲ್‌ ಎಂಟ್ರಿ ಕೊಟ್ಟಿದ್ದಾರೆ. ಕಿರೀಟಿ ನಟನೆ ನೋಡುತ್ತಿದ್ದರಂ ಚೊಚ್ಚಲ ಸಿನಿಮಾ ಎನಿಸುವುದಿಲ್ಲ.
     ಈ ಸಿನಿಮಾದಲ್ಲಿ ಕಿರೀಟಿ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ ‘ಮಾಯಾಬಜಾರ್’ ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಬಾಹುಬಲಿ, ಆರ್‌ಆರ್‌ಆರ್ ಅಂತಹ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿರುವ ಕೆ.ಕೆ ಸೆಂಥಿಲ್ ಕುಮಾರ್ ಕೆಲಸ ಮಾಡಿದ್ದಾರೆ.
ಖ್ಯಾತ ಆಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಆಕ್ಷನ್ ನೀಡಿದ್ದಾರೆ. ದಕ್ಷಿಣ ಚಿತ್ರರಂಗದ ರಾಕ್‌ ಸ್ಟಾರ್‌ ದೇವಿಶ್ರೀ ಪ್ರಸಾದ್‌ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪ್ರಾರಂಭವಾದಾಗ ನಿರ್ದೇಶಕ ರಾಜಮೌಳಿ ಮುಹೂರ್ತಕ್ಕೆ ಆಗಮಿಸಿ ಶುಭಾಶಯ ತಿಳಿಸಿದ್ದರು. ಜುಲೈ 18ಕ್ಕೆ ‘ಜೂನಿಯರ್‌’ ಸಿನಿಮಾ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
WhatsApp Group Join Now
Telegram Group Join Now
Share This Article