ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಅನ್ಯಾಯಕ್ಕೆ ಸೂಕ್ತವಾದ ನ್ಯಾಯ ಮತ್ತು ಪರಿಹಾರಕ್ಕೆ ಆಗ್ರಹ

Ravi Talawar
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಅನ್ಯಾಯಕ್ಕೆ ಸೂಕ್ತವಾದ ನ್ಯಾಯ ಮತ್ತು ಪರಿಹಾರಕ್ಕೆ ಆಗ್ರಹ
WhatsApp Group Join Now
Telegram Group Join Now
ಬಳ್ಳಾರಿ:ಜು,02; ಕಳೆದ ಏಪ್ರಿಲ್ 22, 2022 ರಂದು ಸುಲ್ತಾನಾಪುರ ಗ್ರಾಮದ ಜಿಂದಾಲ್ ಕೈಗಾರಿಕಾ ಬೂದಿ ಕಿಟ್ಸ್ (ವೇಸ್ಟ್ ಡಂಪಿ)ನಲ್ಲಿ ಭೂಮಿ ದಿಬ್ಬ ಕುಸಿದು ಅವಘಾತದಲ್ಲಿ ಮೃತಪಟ್ಟ ರಾಜಾಪುರ ಗ್ರಾಮದ ನಿವಾಸಿಯಾದ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಕನಾದ ಹೊನ್ನರುಸ್ವಾಮಿ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ತುಮಟಿ ಗ್ರಾಮದ ನಿವಾಸಿಯಾದ ರಾಮಾಂಜನೇಯ ಸಾವನ್ನಪ್ಪಿರುವರು. ಅತ್ಯಂತ ದಮನೀಯ ಸ್ಥಿತಿಯಲ್ಲಿರುವ ಸಂತ್ರಸ್ತ ಕುಟುಂಬಗಳಿಗೆ ಮೂರು ವರ್ಷವಾದರೂ ಪರಿಹಾರವನ್ನು ಇಲ್ಲಿಯವರೆಗೆ ಘೋಷಿಸಿಲ್ಲ.ಕಂಪನಿಯಾಗಲಿ ಅಥವಾ ಸರಕಾರದಿಂದಾಗಲಿ ಪರಿಹಾರವು ದೊರೆತ್ತಿರುವುದಿಲ್ಲ. ಕನಿಷ್ಠ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯದ ಪ್ರತಿಭಂದಕ ಕಾಯಿದೆ ಅಡಿಯಲ್ಲಿ ಸಹ ಪರಿಹಾರವು ದೊರೆತಿಲ್ಲ. ಈ ಬಡ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ ಮೇ 24, 2022 ರಂದು ತುಮಟಿ ಗ್ರಾಮದಿಂದ ಕಾಲ್ನಡಿಗೆ ಜಾಧದ ಮುಖಾಂತರ ಜಿಲ್ಲಾಧಿಕಾರಿ ಬಳ್ಳಾರಿ ಕಚೇರಿವರಿಗೂ ಬೃಹತ್ತ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಬಳ್ಳಾರಿ ಜಿಲ್ಲಾಡಳಿತದ ಗಮನಕ್ಕೂ ತರಲಾಗಿತ್ತೂ ಈ ನಾವಿಗಳಿಗೆ ಕಾರಣರಾದ ಗುತ್ತಿಗೆದಾರರನ್ನು ಹಾಗೂ ಕೈಗಾರಿಕೆಯ ಅಧಿಕಾರಿಗಳನ್ನು ಬಂಧಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಒತ್ತಾಯಿಸಲಾಗಿತ್ತೂ. ಆದರೆ, ಪ್ರಭಾವಿ ರಾಜಕಾರಿಣಿಗಳ ಹಿಂಬಾಲಕರಾದ ಗುತ್ತಿಗೆದಾರರನ್ನು ಶಿಕ್ಷೆಯಿಂದ ತಪ್ಪಿಸುವ ಎಲ್ಲಾ ಪ್ರಯತ್ನಗಳು ನಡೆದವು ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದಂತ ಜನಪ್ರತಿನಿಧಿಗಳು ಸಂತ್ರಸ್ತರ ರಕ್ಷಣೆಗೆ ಬಾರದಿರುವುದು ಅತಿ ದೊಡ್ಡ ದುರಂತ ದುಡಿಮೆ, ಹಣಗಳಿಸುವ ಲೆಕ್ಕಾಚಾರವು ಮಾನವೀಯತೆಯನ್ನು ಮರೆಸಿದೆ ಜಿಂದಾಲ್ ಕೈಗಾರಿಕೆಯ ಆಡಳಿತ ಮಂಡಳಿಯ ನಿರ್ಲಕ್ಷತೆಯಿಂದ ಕೈಗಾರಿಕೆಗಳಲ್ಲಿ ಅವಘಾತಗಳು ಸಂಭವಿಸುತ್ತಿವೆ ಅಪಘಾತಗಳು ಬೆಳಕಿಗೆ ಬಾರದೆ ಮುಚ್ಚು ಹೋಗುತ್ತಿವೆ. ಮೇ 9, 2024 ರಂದು ಮೂರು ಜನ ಯುವ ಇಂಜಿನಿಯರ್ ಗಳು ಅಪಘಾತದ ಸಾವುನಿಂದ ನೋವಿನಲ್ಲಿರುವ
ಕುಟುಂಬಗಳು ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ದಾವೆಹೂಡಿ ಕೈಗಾರಿಕೆಯ ಅಕ್ರಮಗಳು, ಸುರಕ್ಷತೆಯಲ್ಲಿನ ದೋಷಗಳು, ಪರವಾನಿಗೆಯಿಲ್ಲದೆ ನಡೆಯುವ ಅಪಾಯಕಾರಿ ಕೈಗಾರಿಕೆಗಳು, ಇದೆಲ್ಲದರ ಭೀಕರತೆಯನ್ನು ಹೊರ ಹಾಕಿದೆ. ಕೈಗಾರಿಕಾ ಅಪಘಾತಗಳ ಬಗ್ಗೆ ಇಲ್ಲಿನ ಆಡಳಿತ ವ್ಯವಸ್ಥೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಸಂಡೂರು ವಲಯದ ರಸ್ತೆ ಅಪಘಾತಗಳು ಜನರನ್ನು ಭಯಭೀತಗೊಳಿಸುತ್ತಿದೆ. 2022 ರಲ್ಲಿ ನಡೆದ 113 ರಸ್ತೆ ಅಪಘಾತಗಳಲ್ಲಿ 49 ಜನರು ಸಾವನ್ನಪ್ಪಿದ್ದು 103 ಜನ ಗಾಯಗೊಂಡಿದ್ದಾರೆ. 2023 ರಲ್ಲಿ 124 ಅಪಘಾತಗಳು ಸಂಭವಿಸಿದ್ದು, 50 ಜನ ಸಾವನ್ನಪ್ಪಿದ್ದು, 143 ಜನರಿಗೆ ಗಂಭೀರ ಗಾಯ ಗಳಾಗಿವೆ. 2024 ಡಿಸೆಂಬರ್ ವೇಳೆಗೆ 76 ಅಪಘಾತಗಳಾಗಿದ್ದು 29 ಜನರು ಸಾವನ್ನಪ್ಪಿದ್ದಾರೆ. 64 ಜನರು ಗಂಭೀರ ಗಾಯ ಮಾಡಿಕೊಂಡಿದ್ದಾರೆ. ಗಾಯಾಳುಗಳ ಪೈಕಿ ಹಲವರು ಶಾಶ್ವತ ವಿಶೇಷ ಚೇತನರಾಗಿ ಬದುಕು ಸವೆಸುತ್ತಿದ್ದಾರೆ. ದುಡಿಯುವ ಜನರ ಬದುಕಿಗೆ, ಜೀವಕ್ಕೆ ಬೆಲೆ ಇಲ್ಲದ ವಾತಾವರಣ ನಿರ್ಮಾಣವಾಗಿದೆ ಗಣಿನಾಡಿನಲ್ಲಿ 31 ಎ ಕ್ಯಾಟಗರಿ ಗಣಿಗಳಿಂದ ವಾರ್ಷಿಕ 35 ಮೆಟ್ರಿಕ್ ಮಿಲಿಯನ್ ಟನ್ ಅದಿರನ್ನು ಬೃಹತ್ ಗಾತ್ರದ 4500 ಲಾರಿಗಳು ಮೂಲಕ ಸಾಗಿಸಲಾಗುತ್ತದೆ. ಪ್ರತಿ 30 ಸೆಕೆಂಡ್ ಗೆ ಒಂದರಂತೆ ಲಾರಿಗಳು ರಸ್ತೆ ಮೂಲಕ ಸಂಚರಿಸುತ್ತವೆ. ಅದಿರು ಸಾಗಾಣಿಕೆಯ ಲಾರಿಗಳ ನಿರ್ಬಂಧನೆಯ ಸರ್ವೋಚ್ಚ ನ್ಯಾಯಾಲಯದ ಆದೇಶನವನ್ನು ಸಹ ಉಲ್ಲಂಘಿಸಲಾಗುತ್ತದೆ.
ಏಪ್ರಿಲ್ 12, 2022 ರಂದು ಸುಲ್ತಾನಾಪುರ ಗ್ರಾಮದ ಜಿಂದಾಲ್ ಕೈಗಾರಿಕಾ ಬೂದಿ ಕಿಟ್ಸ್ (ವೇಸ್ಟ್ ಡಂಪಿ)ನಲ್ಲಿ ದಿಬ್ಬ/ದಿನ್ನೆ ಕುಸಿದು ಅಪಘಾತದಲ್ಲಿ ಮೃತಪಟ್ಟಿರುವ ಆದಿ ಕರ್ನಾಟಕ ಪರಿಶಿಷ್ಟ ಜಾತಿಯ ರಾಮಾಂಜನೇಯ ತಂದೆ ಈರಣ್ಣ ಇವರ ಗುನ್ನೆ ನಂಬರ್ $2/2022 ಕಲಂ 304 ಅಡಿಯಲ್ಲಿ ದಿನಾಂಕ 13.04.2022 ರಂದು ಹಾಗೂ ಪರಿಶಿಷ್ಟ ಪಂಗಡದ ವಾಲ್ಮೀಕಿ ಜನಾಂಗದ ರಾಜಾಪುರದ ಹೊನ್ನೂರುಸ್ವಾಮಿ ಇವರ ಸಾವಿಗಳಿಗೆ ಕಾರಣರಾದವರ ಕುರಿತು ಬಳ್ಳಾರಿ ತಾಲೂಕಿನ ಕುಡಿತಿನಿ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಬಾರಿ ಬೆಂಕಿಯನ್ನು ಹೊಂದಿರುವ ಬಿಸಿ ಬಿಸಿ ಬೂದಿ ದಿಬ್ಬದಲ್ಲಿ ಕಬ್ಬಿಣದ ತುಂಡುಗಳನ್ನು ಆಯಾಲು ನಿಯುಕ್ತಿ ಗೊಳಿಸಿದ ಗುತ್ತಿಗೆದಾರರು ಅಪಾಯದ ಸ್ಥಳದಲ್ಲಿ ಯಾವುದೇ ರಕ್ಷಣೆ ಭದ್ರತೆಗಳಿಲ್ಲದೆ ಗುತ್ತಿಗೆದಾರರ ಮೂಲಕ ಕೆಲಸವನ್ನು ನಿರ್ವಹಿಸಲು ಅವಕಾಶವನ್ನು ನೀಡಿದ ಜಿಂದಾಲ್ ಕಂಪನಿಯ ಆಡಳಿತ ಮಂಡಳಿಯ ವಿರುದ್ಧವಾಗಿ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳದಿರುವುದು, ಹಾಗೂ ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಡಳಿತದವು ನೀಡಿದ ಸಹಾಯ ಭರವಸೆಗಳನ್ನು ಈಡೇರಸದೇ ಇರುವುದನ್ನು ಪ್ರತಿಭಟಿಸಿ ಪ್ರತಿಪಟನಾ ಧರಣಿಯ ಮೂಲಕ ಖಂಡಿಸುತ್ತೇವೆ ಕೂಡಲೇ ಗೌರವಾನ್ವಿತ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರವು ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಎಲ್ಲಾ ನೆರವುಗಳನ್ನು ನೀಡಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರತಿಭಂದಕ ಕಾಯ್ದೆಯಡಿ ಪರಿಹಾರ ನೀಡಬೇಕು. ಸಾವಿಗೆ ಕಾರಣರಾದವರನ್ನು ಕೂಡಲೇ ಬಂದಿಸಿ ಅವರ ಮೇಲೆ ಕಠಿಣ ಕಾನೂನಿನ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಬೇಕು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಂತ್ರಸ್ತರಿಗೆ ಸೂಕ್ತವಾದ ಪರಿಹಾರ ಮತ್ತು ನ್ಯಾಯವನ್ನು ಒದಗಿಸಿ ಕೊಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳು ಬಳ್ಳಾರಿ ಇವರ ಮೂಲಕ ಒತ್ತಾಯಿಸುತ್ತೇವೆ.
ಈ ಸಂದರ್ಭದಲ್ಲಿ ಶಿವಶಂಕರ್, ಶಿವಲಿಂಗ ನಾಯ್ಕ್, ಎನ್ ಮುಡಿ ಮಲ್ಲಯ್ಯ ಎ ಸ್ವಾಮಿ ಚನ್ನಬಸಯ್ಯ ನಾರಾಯಣಸ್ವಾಮಿ ಗಂಗಾಧರ ದುರುಗಮ್ಮ ಖಲುಬ ಪಂಪನಗೌಡ ವಿಜಯ್ ಕುಮಾರ್ ಎನ್ ಶಂಕಣ್ಣ ಪ್ರತಿಭಟನೆಯಲ್ಲಿ ಭಾಗವಹಿಸಿದರು
WhatsApp Group Join Now
Telegram Group Join Now
Share This Article