ಸಂಕೇಶ್ವರ : ನೆರೇಗಾ ಯೋಜನೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ಯೋಜನೆಯಡಿ ನಿರ್ಮಾಣಗೊಂಡ ಸಮೀಪದ ಅಂಕಲಿ ಗ್ರಾಮದಲ್ಲಿನ ನಂ 447ರ ನೂತನ ಅಂಗನವಾಡಿ ಕಟ್ಟಡವನ್ನು ಶಾಸಕರಾದ ನಿಖಿಲ್ ಕತ್ತಿ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ನೂತನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಸೂಕ್ತವಾದ ವಿದ್ಯಾಭ್ಯಾಸದ ಜೊತೆಗೆ ಸ್ವಚ್ಛತೆ ಹಾಗೂ ಒಳ್ಳೆಯ ಪೌಷ್ಟಿಕ ಆಹಾರ ಮತ್ತು ಮಕ್ಕಳ ವಯಕ್ತಿಕ ಕಾಳಜಿ ವಹಿಸಬೇಕು ಎಂದು ಸೂಚನೆ ನೀಡಿದರು.
ನರೇಗಾ ಯೋಜನೆ ಮತ್ತು ಶಶಿ ಅಭಿವೃದ್ಧಿ ಇಲಾಖೆ ಹಾಗೂ ತಾಲೂಕು ಪಂಚಾಯತಿ ಅನುದಾನದಡಿಯಲ್ಲಿ ಒಟ್ಟು ಸೇರಿ ₹13 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿಗ್ರಾಮ ಪಂಚಾಯತಿ ಅಧ್ಯಕ್ಷೆ ಅನಿತಾ ಜರೇಕರ್, ಉಪಾಧ್ಯಕ್ಷೆ ಸುಜಾತ ಗಸ್ತಿ , ಪಿಕೆಪಿಎಸ್ ಅಧ್ಯಕ್ಷ ಜಿ ಆರ್.ಪಾಟೀಲ, ಗ್ರಾ.ಪ ಮಾಜಿ ಅಧ್ಯಕ್ಷ ಭರತ್ ಪುಂಡೆ, ವಿಶ್ವನಾಥ್ ಪಾಟೀಲ್, ಈಶ್ವರ್ ಕೊನಕೇರಿ,ಲಲಿತಾ ಸುತಾರ್,ಗಂಗವ್ವ ಖಾತೆದಾರ್, ಪಿಡಿಓ ಕಲ್ಲಪ್ಪಾ ಕುರಣಿ, ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ, ಹರಿಪ್ರಸಾದ ಸಿ. ಅಧಿಕಾರಿಗಳಾದ ಎನ್.ಕೆ. ಗರವ್ , ಎಪಿಎಮ್ ಸಿ ಮಾಜಿ ಅಧ್ಯಕ್ಷ ಪ್ರಶಾಂತ್ ಪಾಟೀಲ್, ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಸಂತೋಷ ಪುಂಡೆ, ಗುತ್ತಿಗೆದಾರರು ಬಾಳಗೌಡಾ ಪಾಟೀಲ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಗ್ರಾಮದ ಸಾರ್ವಜನಿಕರು ಹಾಜರಿದ್ದರು.