ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಲ್ಲಿನ ಅನೇಕ ಆಸ್ತಿ ಮಾಲೀಕರು ಪಾಲಿಕೆಯ ಸ್ವಯಂ ಮೌಲ್ಯಮಾಪನ ಯೋಜನೆಯನ್ನು (ಎಸ್‌ಎಎಸ್) ದುರುಪಯೋಗಪಡಿಸಿಕೊಂಡಿದ್ದು, ನಿಜವಾದ ತೆರಿಗೆ ಪಾವತಿಸುವುದನ್ನು ತಪ್ಪಿಸಿರುವ ಆಸ್ತಿಗಳ ಮಾಲೀಕರಿಗೆ ನೋಟಿಸ್ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಡ್ರೋನ್ ಸಮೀಕ್ಷೆಗಳು, ಅಧಿಕಾರಿಗಳ ಭೇಟಿ ಮತ್ತು ಇತರ ವಿಧಾನಗಳ ಮೂಲಕ ಸುಮಾರು 5 ಲಕ್ಷ ಆಸ್ತಿಗಳಲ್ಲಿ ಕಾನೂನು ಉಲ್ಲಂಘನೆಗಳನ್ನು ಪಾಲಿಕೆ ಪತ್ತೆಹಚ್ಚಿದೆ.
ಬಿಬಿಎಂಪಿ ಮಾಲೀಕರಿಗೆ ನಿಜವಾದ ಹಣ ಪಾವತಿಸಲು ನೋಟಿಸ್ ನೀಡಲು ನಿರ್ಧರಿಸಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ದೃಢಪಡಿಸಿದ್ದಾರೆ. ಹಿರಿಯ ಅಧಿಕಾರಿಗಳ ಪ್ರಕಾರ, ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿಗಳನ್ನು ‘ಕಡಿಮೆ ಮೌಲ್ಯಮಾಪನ’ ಮಾಡಿದ್ದಕ್ಕಾಗಿ ನೋಟಿಸ್ ನೀಡಸಾಗುತ್ತಿದೆ. ಇಂತದ ಪದ್ಧತಿಗಳನ್ನು ಪುನರಾವರ್ತಿಸದಂತೆ ಮಾಲೀಕರಿಗೆ ಎಚ್ಚರಿಕೆ ನೀಡಲು ನೊಟೀಸ್ ಕೊಡಲಾಗುತ್ತಿದೆ ಎಂದಿದ್ದಾರೆ.
ಕಂದಾಯ ಇಲಾಖೆಯು ಡ್ರೋನ್ ಸಮೀಕ್ಷೆಯನ್ನು ಸಹ ಬಳಸಿಕೊಂಡು ಮಾಲೀಕರ ಮನೆ ವಿಳಾಸ, ಜಿಪಿಎಸ್, ಫೋಟೋ, ನೋಂದಣಿ ವಿವರಗಳು, ಮತ್ತು ವಾಸಸ್ಥಳ ಪ್ರಮಾಣಪತ್ರವನ್ನು ಆಧರಿಸಿ ಸಮೀಕ್ಷೆ ನಡೆಸಿದೆ. ಅವರಲ್ಲಿ ಸುಮಾರು 5 ಲಕ್ಷ ಜನರು ನಿಜವಾದ ಡೇಟಾ ಮರೆಮಾಡಿದ್ದಾರೆ, ಭಾಗಶಃ ವಿವರಗಳನ್ನು ಮಾತ್ರ ಘೋಷಿಸಿ ಕಡಿಮೆ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಕಂಡುಬಂದಿದೆ ಎಂದು ಬಿಬಿಎಂಪಿ ಕಂದಾಯ ಇಲಾಖೆಯ ಹಿರಿಯ ಲೆಕ್ಕಪತ್ರಾಧಿಕಾರಿಯೊಬ್ಬರು ತಿಳಿಸಿದ್ದಾರೆ.