ಕಾಂಕ್ರೀಟ್ ಕಾಮಗಾರಿಗೆ ಮೃಣಾಲ್‌ ಹೆಬ್ಬಾಳಕರ್ ಪೂಜೆ

Ravi Talawar
ಕಾಂಕ್ರೀಟ್ ಕಾಮಗಾರಿಗೆ ಮೃಣಾಲ್‌ ಹೆಬ್ಬಾಳಕರ್ ಪೂಜೆ
WhatsApp Group Join Now
Telegram Group Join Now
ಬೆಳಗಾವಿ:ಹಿಂಡಲಗಾ ಗ್ರಾಮದ ಪೈಪ್ ಲೈನ್ ರಸ್ತೆಯ ವಿಜಯನಗರ ಎಂ.ಇ.ಎಸ್ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಗಣೇಶ ಮಂದಿರ ಕಟ್ಟಡದ ಮೇಲ್ಚಾವಣಿಗೆ ಕಾಂಕ್ರೀಟ್ (ಸ್ಲ್ಯಾಬ್) ಹಾಕುವ ಕಾಮಗಾರಿಗೆ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್‌ ಹೆಬ್ಬಾಳಕರ್ ಸೇರಿ ಪೂಜೆಯನ್ನು ನೆರವೇರಿಸಿ, ಚಾಲನೆ ನೀಡಿದರು.
ಸುಮಾರು 1.25 ಕೋಟಿ ರೂ,ಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳಲಿದೆ. ಈಗಾಗಲೇ ಗುಣಮಟ್ಟದ ವಸ್ತುಗಳನ್ನು ಉಪಯೋಗಿಸಿ, ಸುಸಜ್ಜಿತ ರೈತ ಸಮುದಾಯ ಭವನ ನಿರ್ಮಾಣ‌ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಮೃಣಾಲ್‌ ಹೆಬ್ಬಾಳಕರ್ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ವಿಠ್ಠಲ ದೇಸಾಯಿ, ರಾಹುಲ್ ಉರನಕರ್, ಪ್ರವೀಣ ಪಾಟೀಲ, ಗಜಾನನ ಬಾಂದೇಕರ್, ಅಶೋಕ್ ಕಾಂಬಳೆ, ಸೀಮಾ ದೇವಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ಮಿತಾ ಚಂದರಗಿ, ಇತರ ಪಂಚಾಯತ್ ಸಿಬ್ಬಂದಿ ಸಂತೋಷ್ ನಾಯ್ಕ್, ದೇವಪ್ಪ ಜತ್ತಾಪ್, ಸ್ಥಳೀಯರಾದ ಅಶೋಕ ಗಾಡಗೆ, ಸಂಜಯ ಗವಳಿ ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article