ಮುದ್ರಣ ಮಾಧ್ಯಮದಲ್ಲಿ ಅತ್ಯಂತ  ಕರಾರುವಕ್ಕಾದ ಸುದ್ದಿ: ಬಿ ಶ್ರೀರಾಮುಲು 

Ravi Talawar
ಮುದ್ರಣ ಮಾಧ್ಯಮದಲ್ಲಿ ಅತ್ಯಂತ  ಕರಾರುವಕ್ಕಾದ ಸುದ್ದಿ:  ಬಿ ಶ್ರೀರಾಮುಲು 
WhatsApp Group Join Now
Telegram Group Join Now
 ಬಳ್ಳಾರಿ ಜುಲೈ ೦1 : ಇತ್ತೀಚೆಗೆ ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಮಾಧ್ಯಮಗಳು ಯಥೇಚ್ಛವಾಗಿ ಸಾರ್ವಜನಿಕರಿಗೆ ನೋಡಲು ಸಿಗುತ್ತವೆ ಆದರೆ ಅಷ್ಟೇ ಬೇಗ ಸಾರ್ವಜನಿಕರು ಆ ಸುದ್ದಿಗಳನ್ನು ಮರೆತು ಹೋಗುತ್ತಾರೆ, ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ಸುದ್ದಿಯು ನಮಗೆ ಯಾವಾಗಲೂ ನೋಡಲು ಸಿಗುತ್ತದೆ ಮತ್ತು ಅತ್ಯಂತ ಕರಾರುವಕ್ಕಾದ ಸುದ್ದಿಯನ್ನು ಮುದ್ರಣ ಮಾಧ್ಯಮದಲ್ಲಿ ಕಾಣಬಹುದು ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಅಭಿಪ್ರಾಯ ಪಟ್ಟರು.
 ಅವರು ಜುಲೈ 01 ರಂದು ನಗರದ ಪತ್ರಿಕಾ ಭವನದಲ್ಲಿ ಕಾನಿಪ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,  ಪತ್ರಕರ್ತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ ಅವುಗಳೆಲ್ಲವನ್ನು ಮೀರಿ  ಕೆಲಸ ಮಾಡುವ ಪತ್ರಕರ್ತ ಸಮಾಜದಲ್ಲಿ ಗುರುತಿಸಿ ಕೊಡುತ್ತಾನೆ ಮತ್ತು ತನ್ನ ವೃತ್ತಿಯಲ್ಲಿ ಯಶಸ್ಸು ಪಡೆಯುತ್ತಾನೆ ಎಂದರು.
 ಮೆಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿದೆ ಶಾಸಕಾಂಗ ಕಾನೂನುಗಳನ್ನು ರೂಪಿಸಿದರೆ ಕಾರ್ಯಾಂಗ ಅದನ್ನು ಜಾರಿಗೊಳಿಸುತ್ತದೆ , ನ್ಯಾಯಾಂಗ ಅದನ್ನು ಸಮರ್ಪಕ ರೀತಿಯಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ, ಆದರೆ ಪತ್ರಿಕ ರಂಗ ಈ ಮೂರು ಕಂಬಗಳ ಮೇಲೆ ನಿಗಾ ಇಟ್ಟು ಅವರ ತಪ್ಪುಗಳನ್ನು ತಮ್ಮ ಮಾಧ್ಯಮದಲ್ಲಿ ಪ್ರಸ್ತುತ ಪಡಿಸುತ್ತಾ ಸರಿದಾರಿಗೆ ತರುವಲ್ಲಿ ಕೆಲಸ ಮಾಡುತ್ತಾ ಸಂವಿಧಾನದ ನಾಲ್ಕನೇ ಅಂಗವೆಂದೆ ಮಾಧ್ಯಮ ರಂಗ  ಹೆಸರು ಪಡೆದುಕೊಂಡಿದೆ ಎಂದರು.
 ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿ, ಪತ್ರಕರ್ತರು ಇಂದಿನ ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇದ್ದದ್ದನ್ನು ನೇರವಾಗಿ ಬರೆಯುವುದು ಸಹ ಅವರಿಗೆ ತೊಂದರೆ ಆಗಿ ಪರಿಣಮಿಸುತ್ತದೆ ಇಂಥ ಎಲ್ಲಾ ಸವಾಲುಗಳನ್ನು ಮೆಟ್ಟಿ ಅವರು ಸಮಾಜವನ್ನು ಸರಿದಾರಿಗೆ ತರುವಲ್ಲಿ ಹಗಲಿರಲು ಶ್ರಮಿಸುತ್ತಿದ್ದಾರೆ ಅವರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು ತಿಳಿಸಿದರು.
 ಕಾರ್ಯಕ್ರಮದಲ್ಲಿ ಎಡಿಸಿ ಮಹಮ್ಮದ್ ಜುಬೇರ್, ಸಹಾಯಕ ವಾರ್ಥಾಧಿಕಾರಿ ಗುರುರಾಜ್, ಮಹಾನಗರ  ಪಾಲಿಕೆಯ ಉಪಮೇಯರ್ ಡಿ ಸುಕುಮ್, ಪ್ರಬಂಜನ್ ಕುಮಾರ್, ರೈತ ಸಂಘದ ಸಂಗನಕಲ್ಲು ಕೃಷ್ಣ, ದರೂರು ಪುರುಷೋತ್ತಮ್ ಗೌಡ, ಕರೂರ್ ಮಾಧವ ರೆಡ್ಡಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
 ಕಾರ್ಯಕ್ರಮವನ್ನು ವಿನೋದ್ ಚೌಹಾಣ್ ನಿರೂಪಿಸಿದರೆ, ಪತ್ರಕರ್ತ ವೆಂಕಟೇಶ್ ದೇಸಾಯಿ ಸ್ವಾಗತಿಸಿದರು ಗಣಿನಾಡು ಸಂಪಾದಕ  ವಲಿ ಭಾಷಾ ಪ್ರಾಸ್ತಾವಿಕ ಮಾತುಗಳ ನಾಡಿದರು. ಈ ಕಾರ್ಯಕ್ರಮದಲ್ಲಿ ಹಿರಿಯ  ಪತ್ರಕರ್ತರಾದ ಮಹಮ್ಮದ್ ಸಾಬ್ ಮತ್ತು ಪ್ರವೀಣ್ ರಾಜ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ವಿ ರವಿಕುಮಾರ್  ಹಸಿರು ಕ್ರಾಂತಿಯ ರಘುರಾಮ್,ಪಂಪನಗೌಡ, ಜಂಬುನಾಥ್, ಬಜಾರಪ್ಪ, ಮಲ್ಲಿಕಾರ್ಜುನ, ಪ್ರವೀಣ್ ರಾಜ್, ಗಿರೀಶ್ ಗೌಡ, ಅಬುಬಕರ್ ಸಿದ್ಧಿ, ಕಲಂದರ್ ಹೇಮಂತ್ ರಾಜ್, ಮಹೇಶ್, ಪ್ರಸಾದ್ ಸೇರಿದಂತೆ ಮತ್ತಿತರೆ ಪತ್ರಕರ್ತರು ಭಾಗಿಯಾಗಿದ್ದರು.
WhatsApp Group Join Now
Telegram Group Join Now
Share This Article