ಬಳ್ಳಾರಿ ಜುಲೈ 01. ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಲೀಡ್ಕರ್ ರಾಜ್ಯಾಧ್ಯಕ್ಷರು ಮುಂಡ್ರಿಗಿ ನಾಗರಾಜ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಾಗರಾಜ್ ರವರು ಪತ್ರಿಕಾಂಗ ಕ್ಕೆ ದೊಡ್ಡ ಸ್ಥಾನಮಾನ ಇದೇ ಎಂದು ಪ್ರಸ್ತುತ ವಿದ್ಯಮಾನಗಳಲ್ಲಿ ಪತ್ರಕರ್ತರು ಸ್ವೆಚ್ಚದಿಂದ ವರದಿ ಮಾಡಲು ಸಾಧ್ಯವಾಗದೇ ವಾತಾವರಣ ಸೃಷ್ಟಿಯಾಗಿದ್ದು,
ಇದು ನೋವಿನ ವಿಚಾರ ಎಂದು ನಾವೆಲ್ಲರೂ ಕೂಡ ಮಾಧ್ಯಮಗಳ ಪರವಾಗಿ ನಿಂತು ಅವರಿಗೆ ಬೆಂಬಲ ನೀಡುವುದು ನಮ್ಮ ಅಧಿ ಕರ್ತವ್ಯ,ಅಂಕುಡೊಂಕು ಗಳನ್ನು ಸರಿಪಡಿಸುವ, ಪತ್ರಿಕಾ ರಂಗವನ್ನು ನಾವೆಲ್ಲರೂ ರಕ್ಷಣೆ ಮಾಡಬೇಕಾಗಿದೆ. ತುಂಬಾ ಒತ್ತಡದಿಂದ ಕೆಲಸ ನಿಭಾಯಿಸುವ ವಾತಾವರಣ ಸೃಷ್ಟಿಯಾಗಿದೆ.
ಇದರ ಮಧ್ಯದಲ್ಲಿ ನಕಲಿ ಪತ್ರಿಕೆಗಳ ಹಾವಳಿಯನ್ನು ಕೂಡ ಇವರೇ ಸರಿಪಡಿಸಿಕೊಂಡು ವ್ಯವಸ್ಥಿತವಾಗಿ ನಡೆದುಕೊಳ್ಳುವ ವಾತಾವರಣ ಕೂಡ ಇವರ ಜವಾಬ್ದಾರಿ ಆಗಿರುತ್ತದೆ. ಹೀಗಾಗಿ ಪತ್ರಕರ್ತರ ರಕ್ಷಣೆಗೆ ನಿಲ್ಲಬೇಕಾಗಿದೆ ಎಂದು ನೋಡಿದರು.
ಸರ್ಕಾರ ಕೂಡ ತುಂಬಾ ಯೋಜನೆಗಳನ್ನು ಜನರಿಗೆ ಕೊಡುತ್ತಾ ಇದೆ ಇದರಲ್ಲಿ ಆಸಂಘಟಿತ ಕಾರ್ಮಿಕರಗೆ ಸರಕಾರ ಸವಲತ್ತುಗಳನ್ನು ಒದಗಿಸಲಿದೆ.ಪತ್ರಿಕಾ ವಿತರಕರು ವರದಿಗಾರರು ಕೂಡ ಅಸಂಘಟಿತ ಕಾರ್ಮಿಕರ ಅಡಿ ಯಲ್ಲಿ ಬರುತಾರೆ,ಸೌಲಭ್ಯಗಳನ್ನು ಪಡೆಯಬೇಕು ಎಂದರು. ಪತ್ರಿಕಾ ಮಾಧ್ಯಮಗಳಿಗೆ ಪ್ರಶ್ನೆ ಮಾಡುವ ಹಕ್ಕು ಇದೆ ಅದನ್ನು ನಿಯಂತ್ರಣ ಮಾಡಬಾರದು ಎಂದು ಅದರಿಂದ ಅಂಕು ಡೊಂಕುಗಳು ಸರಿ ಹೋಗುತ್ತದೆ ಎಂದು ಮಾತನಾಡಿದರು.