ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು ಡಿಎಡ್ ತರಬೇತಿಗೆ ಅರ್ಜಿ ಆಹ್ವಾನ

Ravi Talawar
ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು ಡಿಎಡ್ ತರಬೇತಿಗೆ ಅರ್ಜಿ ಆಹ್ವಾನ
WhatsApp Group Join Now
Telegram Group Join Now

ವಿಜಯನಗರ(ಹೊಸಪೇಟೆ), : ರ‍್ನಾಟಕ ರ‍್ಕಾರದ ವತಿಯಿಂದ ನಡೆಯುತ್ತಿರುವ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ತರಬೇತಿ ಕೇಂದ್ರ, ಮೈಸೂರುನಲ್ಲಿ ಅಂಧ ಮಕ್ಕಳಿಗೆ ಹಾಗೂ ಶ್ರವಣದೋಷವುಳ್ಳ ಮಕ್ಕಳಿಗೆ ಶಿಕ್ಷಕರಾಗಲು 2 ರ‍್ಷಗಳ ವಿಶೇಷ ಡಿಎಡ್ ತರಬೇತಿಗೆ ರ‍್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿಗಳಾದ ರಾಮಾಂಜನೇಯ ತಿಳಿಸಿದ್ದಾರೆ.

ಈ ವಿಶೇಷ ಡಿಎಡ್, ಸಾಮಾನ್ಯ ಡಿಎಡ್ ಗೆ ಸಮಾನಾಂತರವಾಗಿದೆ. ರ‍್ಜಿ ಸಲ್ಲಿಸುವ ಅಭ್ರ‍್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.50 ರಷ್ಟು ಅಂಕ ಪಡೆದಿರಬೇಕು. ಎಸ್ಸಿ, ಎಸ್ಟಿ ಮತ್ತು ವಿಕಲಚೇತನ ವಿದ್ಯರ‍್ಥಿಗಳಿಗೆ ಶೇ.45 ಅಂಕಗಳೊಂದಿಗೆ ತರ‍್ಗಡೆಯಾಗಿರುವ ವಿದ್ಯರ‍್ಥಿಗಳು ಜು.12 ರೊಳಗಾಗಿ ವೆಬ್‌ಸೈಟ್ https://nber-rehabcounil.gov.in/  ನಲ್ಲಿ ರ‍್ಜಿ ಸಲ್ಲಿಸಬಹುದು. ಈ ತರಬೇತಿ ಕರ‍್ಯಕ್ರಮಗಳು ದಿನನಿತ್ಯ ನಡೆಯುತ್ತಿದ್ದು, ವಿಕಲಚೇತನರು ಸೇರಿದಂತೆ ಸಾಮಾನ್ಯ ವಿದ್ಯರ‍್ಥಿಗಳು ಸಹ ರ‍್ಜಿ ಸಲ್ಲಿಸಬಹುದು. ತರಬೇತಿಗಳು ಸಂಪರ‍್ಣವಾಗಿ ಉಚಿತವಾಗಿದ್ದು, ಯಾವುದೇ ಬೋಧನಾ ಶುಲ್ಕವಿರುವುದಿಲ್ಲ.
ಹೆಲೆನ್ ಕೆಲ್ಲರ್ ರ‍್ಕಾರಿ ದೃಷ್ಟಿ ವಿಕಲಚೇತನ ಶಿಕ್ಷಕರ ತರಬೇತಿ ಕೇಂದ್ರ ಹಾಗೂ ರ‍್ಕಾರಿ ಶಿಕ್ಷಕರ ಶ್ರವಣದೋಷ ತರಬೇತಿ ಕೇಂದ್ರಗಳಲ್ಲಿ ತರಬೇತಿ ಕರ‍್ಯಕ್ರಮಗಳಿವೆ.

ಹೆಚ್ಚಿನ ಮಾಹಿತಿಗಾಗಿ ಉಪ ನರ‍್ದೇಶಕರು (ತರಬೇತಿ) ರವರ ಕಚೇರಿ, ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ತರಬೇತಿ ಕೇಂದ್ರ, ಪುಲಿಕೇಶಿ ರಸ್ತೆ, ತಿಲಕ್‌ನಗರ, ಮೈಸೂರು-570001. ದೂ.08212491600  ಮತ್ತು ತರಬೇತಿ ಸಂಯೋಜಕರು : ಆಶಾ. ವಿ. ಹಿರೇಮಠ್ ಮೊ.ನಂ. 9113561620 ಹಾಗೂ ಟಿ.ಡಿ ಮಂಜುನಾಥ ಮೊ.ನಂ.9686762378 ಇವರನ್ನು ಕಚೇರಿ ವೇಳೆಯಲ್ಲಿ ಸಂರ‍್ಕಿಸಲು ವಿಜಯನಗರ ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article