ಪತ್ರಕರ್ತರು ಸಮಾಜ ಕಾಪಾಡುವ ನಿಟ್ಟಿನಲ್ಲಿ ವರದಿಗಳನ್ನು ಮಾಡಬೇಕು: ಡಾ ಬಾಳಾಸಾಬ ಲೋಕಾಪುರ

Ravi Talawar
ಪತ್ರಕರ್ತರು ಸಮಾಜ ಕಾಪಾಡುವ ನಿಟ್ಟಿನಲ್ಲಿ ವರದಿಗಳನ್ನು ಮಾಡಬೇಕು: ಡಾ ಬಾಳಾಸಾಬ ಲೋಕಾಪುರ
WhatsApp Group Join Now
Telegram Group Join Now
ಅಥಣಿ : ಪತ್ರಕರ್ತರು ಸಮಾಜದ ಸ್ವಾಸ್ತ ಕಾಪಾಡುವ ನಿಟ್ಟಿನಲ್ಲಿ ವರದಿಗಳನ್ನು ಮಾಡಬೇಕು, ಜನಪರವಾದ ವರದಿಗಳ ಮೂಲಕ ಸಮಾಜಕ್ಕೆ ಉತ್ತಮವಾದ ಸಂದೇಶಗಳನ್ನು ನೀಡಬೇಕು ಎಂದು ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ ಬಾಳಾಸಾಬ ಲೋಕಾಪುರ ಅವರು ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘ ಅಥಣಿ ವತಿಯಿಂದ ಪತ್ರಕರ್ತರ ದಿನಾಚರಣೆ ನಿಮಿತ್ತ  ಸಸಿ ನೆಡುವ ಮೂಲಕ ಪತ್ರಿಕಾ ದಿನಾಚರಣೆ ಆಚರಣೆ ಮಾಡಿ ಮಾತನಾಡಿ ಸಮಾಜದಲ್ಲಿ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾದ ಪತ್ರಿಕೋದ್ಯಮ ಸಮಾಜವನ್ನ ಸರಿಯಾದ ದಾರಿಯತ್ತ ಕೊಂಡೊಯ್ಯಲು ಪ್ರಮಾಣಿಕವಾಗಿ ಪ್ರಯತ್ನಿಸಬೇಕು‌, ಸಮಾಜದ ಅಂಕು ಡೊಂಕು ತಿದ್ದುತ್ತಾ ಸಾಮನ್ಯ ಜನರಿಗೆ ನ್ಯಾಯ ದೊರಕಿಸಿ ಕೊಡುವ ಒಂದು ಪ್ರಯತ್ನ ಈ ಪತ್ರಿಕೆಗಳ ಮೂಲಕ ಪತ್ರಕರ್ತರು ಮಾಡುವ ಒಂದು ಅದ್ಭುತ ಕೆಲಸವಾಗಿದೆ ಎಂದು ಹೇಳಿದರು.
ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಪರಶುರಾಮ ನಂದೇಶ್ವರ, ಉಪಾಧ್ಯಕ್ಷ ರಮೇಶ ಬಾದವಾಡಗಿ, ಕಾರ್ಯದರ್ಶಿ ಶಿವಕುಮಾರ ಅಪರಾಜ ಖಜಾಂಚಿ ಅಜೀತ ಕಾಂಬಳೆ, ಹಿರಿಯ ಪತ್ರಕರ್ತ ಅಣ್ಣಾಸಾಬ ತೆಲಸಂಗ, ರಾಜು ಗಾಲಿ, ವಿಜಯ ಅಡ್ಡಹಳ್ಳಿ, ಡಾ.ರಾಮಣ್ಣಾ ದೊಡ್ಡನಿಂಗಪ್ಪಗೊಳ, ರಾಕೇಶ ಮೈಗೂರ, ಸಂತೋಷ ಬಡಕಂಬಿ,ವಿಲಾಸ್ ಕಾಂಬಳೆ,ಜಬ್ಬಾರ ಚಿಚಲಿ,ಸಂದೀಪ ಘಟಕಾಂಬಳೆ,ಶೇಖರ ತೆವರಟ್ಟಿ,ಕ್ಲಪ್ಪಾ ಕನ್ನಾಳ,ಶಿವಾನಂದ ಪುಜಾರಿ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು.
WhatsApp Group Join Now
Telegram Group Join Now
Share This Article