ಬಳ್ಳಾರಿ ಜೂ01. : ತಾಲೂಕಿನ ಸಂಗನಕಲ್ಲು, ಚಾಗನೂರು, ಕಾಲುವೆ ಹಾಗೂ ಡಿ.ಪಿ.ನಂ.16, ಕುರುಗೋಡು ತಾಲೂಕಿನ ಸಿಂಧಿಗೇರಿ
ಬೈಲೂರು ಕಾಲುವೆಗಳ ದುರಸ್ತಿಯನ್ನು ಕೂಡಲೇ ಮಾಡಿ ಮುಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗನಕಲ್ಲು ಕೃಷ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನೀರಾವರಿ ಇಲಾಖೆಯ ಅಭಿಯಂತರರಿಗೆ ಮನವಿಪತ್ರವನ್ನು ನೀಡಿ ಮಾತನಾಡಿದ ಕೃಷ್ಣ, ತುಂಗಭದ್ರಾ ಜಲಾಶಯದಲ್ಲಿ ನಿರೀಕ್ಷೆಯಂತೆ ನೀರು ಸಂಗ್ರಹ ಗೊಂಡಿದ್ದು ಈ ತಿಂಗಳಾಂತ್ಯದಲ್ಲಿ ಕಾಲುವೆಗಳಿಗೆ ನೀರು ಹರಿಸುವ ಸಂದರ್ಭ ಇರುವುದರಿಂದ ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ನಗರದ ಸುತ್ತಮುತ್ತ ರಿಂಗ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಕಾಲುವೆಗೆ ಮಣ್ಣು ಹಾಕಿದ್ದು, ಅದನ್ನು ಕಾಲುವೆಗೆ ನೀರು ಬರುವುದರೊಳಗೆತೆಗೆದು ಹಾಕಬೇಕು ಮತ್ತು ಪೈಪ್ ನ್ನು ಸ್ವಚ್ಚತೆಗೊಳಿಸಬೇಕು.ಹಾಗೂ ಡಿ.ಪಿ.ನಂ. 1, ಕುರುಗೋಡು ತಾಲೂಕಿನ ಸಿಂಧಿಗೇರಿ, ಬೈಲೂರು ಮಧ್ಯದಲ್ಲಿ ಮಲ್ಲೇಶ್ವರ ಕ್ಯಾಂಪ್ ಕಾಲುವೆಯು ಕಲ್ಲಿನಕಟ್ಟಡ ಬಿದ್ದು, ಅದು ಸಂಪೂರ್ಣ ಹೂಳು ತುಂಬಿರುತ್ತದೆ, ಮಳೆಯ ನೀರು ಮತ್ತು ಕಾಲುವೆ ನೀರುಬಂದಾಗ ಆ ನೀರು ಮನೆಯ ಕಾಂಪೌಂಡ್ಗಳಿಗೆ ನುಗ್ಗುತ್ತಿದ್ದು, ಕಾಲುವೆಯನ್ನು ಒತ್ತುವರಿ ಮಾಡಿರುವುದನ್ನುತೆರವುಗೊಳಿಸಿ, ಅದನ್ನು ಹೂಳು ತೆಗೆದು, ಈ ಕೂಡಲೇ ಸ್ವಚ್ಛತೆಗೊಳಿಸಿ, ಅಭಿವೃದ್ಧಿಗೊಳಿಸ ಬೇಕೆಂದು ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬೈಲೂರು ವೀರೇಶ್, ಕೊಳಗಲ್ಲು ಎರಿಸ್ವಾಮಿ ಮಾರಣ್ಣ ಸೇರಿದಂತೆ ಇತರರಿದ್ದರು.