ಕ್ಷಯ ಮುಕ್ತ ದೇಶಕ್ಕಾಗಿ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆಗೆ ಒಳಗಾಗಿ : ಸುರೇಶ್ ಬಾಬು 

Ravi Talawar
ಕ್ಷಯ ಮುಕ್ತ ದೇಶಕ್ಕಾಗಿ ಪ್ರತಿಯೊಬ್ಬರೂ ಆರೋಗ್ಯ ತಪಾಸಣೆಗೆ ಒಳಗಾಗಿ : ಸುರೇಶ್ ಬಾಬು 
WhatsApp Group Join Now
Telegram Group Join Now
ಬಳ್ಳಾರಿ, ಜೂ01: ಕ್ಷಯ ಮುಕ್ತ ದೇಶಕ್ಕಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಜನರು ಉಚಿತ ಆರೋಗ್ಯ ತಪಾಸಣೆಗೆ ಒಳಗಾಗಿ ರೋಗ ಪತ್ತೆ ಮತ್ತು ಚಿಕಿತ್ಸೆಗೆ ನೆರವಾಗಬೇಕು ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವಕಾರ್ಯದರ್ಶಿ ಕೆ.ಸಿ. ಸುರೇಶ್‌ಬಾಬು ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಚೇಂಬರ್ ಉಚಿತ ಆಸ್ಪತ್ರೆಯ ಆವರಣದಲ್ಲಿ ಸೋಮವಾರದಿಂದ ಏಳು ದಿನಗಳ ಕಾಲ ನಡೆಯುವ ಉಚಿತ ಟಿ.ಬಿ. (ಕ್ಷಯರೋಗ) ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ,
ದೇಶದ ಮತ್ತು ಕುಟುಂಬದ ಉತ್ತಮ ಆರೋಗ್ಯವು ಸಮಾಜದಲ್ಲಿಯ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯದ ವಾಸ್ತವಾಂಶವನ್ನು ಪ್ರತಿನಿಧಿಸುತ್ತದೆ. ಕಾರಣ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಇರಲು ಆದ್ಯತೆ ನೀಡಬೇಕು ಎಂದರು.
ತಜ್ಞ ವೈದ್ಯೆ ಶೆಗುಫ್ತ್, ಲ್ಯಾಬ್ ಟೆಕ್ನಿಷಿಯನ್ ಶೇಕ್ಷಾವಲಿ, ಬಳ್ಳಾರಿ ಡಿಸ್ಟಿçಕ್ ಇಂಡಸ್ಟ್ರಿಯಲ್ ಅಸೋಸಿಯೇಷನ್ ಅಧ್ಯಕ್ಷರಾದ ವಿ. ರಾಮಚಂದ್ರ, ಚೇಂಬರ್ ಆಫ್ ಕಾಮರ್ಸ್ ಉಚಿತ ಆಸ್ಪತ್ರೆಯ ಚೇರ್ಮನ್ ಸುರೇಂದ್ರ ಕುಮಾರ್ ಬಾಫ್ನಾ, ದಲ್ಲಾಲಿ ವರ್ತಕರ ಸಂಘದ ಕಾರ್ಯದರ್ಶಿ ಎಂ. ಗುರುಸ್ವಾಮಿ, ಉಪಾಧ್ಯಕ್ಷ ಕೆ. ನಾಗರಾಜ್, ವೈದ್ಯಾಧಿಕಾರಿ ಡಾ. ಕಟ್ಟಾ ಸತ್ಯನಾರಾಯಣ, ಬಿಡಿಸಿಸಿಐ ಹಾಗೂ  ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೂಲಿ ಕಾರ್ಮಿಕರು, ಹಮಾಲಿಗಳು, ರೈತರು ಮತ್ತು ಕಾಯಿಪಲ್ಲೆ ಮಾರಾಟಗಾರರು, ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣೆಗೆ ಒಳಗಾದರು. ವೈದ್ಯರು, ಆರೋಗ್ಯ ತಪಾಸಣೆಗೆ ಒಳಗಾದವರಿಗೆ ಟಿಬಿಯ ಲಕ್ಷಗಳು, ಉಚಿತ ಚಿಕಿತ್ಸೆ – ಔಷಧಿ, ಆರೋಗ್ಯಯುಕ್ತ – ಪೌಷ್ಟಿಕಾಂಶದ ಆಹಾರಗಳ ಕುರಿತು ಮಾಹಿತಿ ನೀಡಿದರು.
WhatsApp Group Join Now
Telegram Group Join Now
Share This Article