ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ರಾಜ್ಯ ಸರ್ಕಾರ

Ravi Talawar
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ರಾಜ್ಯ ಸರ್ಕಾರ
WhatsApp Group Join Now
Telegram Group Join Now

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮೀಣ್ಯಂ ಪ್ರದೇಶದಲ್ಲಿ ರಸ್ತೆ ಪಕ್ಕದಲ್ಲೇ 100 ಮೀಟರ್ ದೂರದಲ್ಲಿ ಐದು ಹುಲಿಗಳಿಗೆ ವಿಷಹಾಕಿ ಕೊಲ್ಲಲಾಗಿತ್ತು. ವ್ಯಾಘ್ರ ಹಂತಕರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಆದರೆ ಈ ಘಟನೆಯಂದಾಗಿ, ಡಿಸಿಎಫ್ ಚಕ್ರಪಾಣಿಯ ಆಟಾಟೋಪ, ಅಸಡ್ಡೆಯಿಂದ ಮಾಡಿಕೊಂಡ ಎಡವಟ್ಟು ಒಂದೊಂದಾಗಿ ಬೆಳಕಿಗೆ ಬಂದಿದೆ. ಚಿರತೆ, ಆನೆ ದಾಳಿ ನಡೆಸಿದರೆ ಸ್ಥಳಕ್ಕೆ ಬರುವುದಿಲ್ಲ, ಎಸಿ ರೂಮ್ ಬಿಟ್ಟು ಆಚೆ ಕಾಲಿಡಲ್ಲ ಎಂಬ ಆರೋಪಗಳು ಅವರ ವಿರುದ್ಧ ಕೇಳಿಬಂದಿದ್ದವು. ರೈತರು ಕರೆ ಮಾಡಿದರೂ ಪ್ರತಿಕ್ರಿಯಿಸುವುದಿಲ್ಲ ಎಂದು ಆರೋಪಿಸಲಾಗಿತ್ತು.

ಖುದ್ದು ಸಂಸದರೇ ಕರೆ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ ಎಂಬ ಆರೋಪವೂ ಅವರ ವಿರುದ್ಧ ಕೇಳಿಬಂದಿದೆ. ಭರಚುಕ್ಕಿ ಪವರ್ ಪ್ರಾಜೆಕ್ಟ್​​ಗೆ ಭಾರೀ ವಿರೋಧವಿದ್ದರೂ ಅದಕ್ಕೆ ಚಕ್ರಪಾಣಿ ಗ್ರೀನ್ ಸಿಗ್ನಲ್ ನೀಡಿದ್ದರು. ಈ ಎಲ್ಲ ನೌಟಂಕಿಯಾಟದ ಕುರಿತು ‘ಟಿವಿ9’ ಸಮಗ್ರ ವರದಿ ಮಾಡಿತ್ತು. ಈಗ ವರದಿ ಪರಿಣಾಮ ಬೀರಿದ್ದು, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಚಕ್ರಪಾಣಿ, ಎಸಿಎಫ್ ಗಜಾನನ ಹೆಗಡೆ, ಆರ್​​ಎಫ್​​ಒ ಮಾದೇಶರಿಗೆ ಸಿಸಿಎಫ್ ಕಡ್ಡಾಯ ರಜೆಗೆ ತೆರಳುವಂತೆ ಸೂಚಿಸಿದ್ದಾರೆ.

WhatsApp Group Join Now
Telegram Group Join Now
Share This Article