ಪ್ರಾದೇಶಿಕ ಅಸಮತೋಲನ ‌ನಿವಾರಣೆಗೆ ಅಗತ್ಯ ಕ್ರಮ ಅವಶ್ಯಕ: ಪ್ರೊ.ಬಸವಪ್ರಭು ಜಿರಲಿ

Ravi Talawar
ಪ್ರಾದೇಶಿಕ ಅಸಮತೋಲನ ‌ನಿವಾರಣೆಗೆ ಅಗತ್ಯ ಕ್ರಮ ಅವಶ್ಯಕ: ಪ್ರೊ.ಬಸವಪ್ರಭು ಜಿರಲಿ
WhatsApp Group Join Now
Telegram Group Join Now
ಧಾರವಾಡ: ಪ್ರಾದೇಶಿಕ ಅಸಮತೋಲನ ‌ನಿವಾರಣೆಗೆ ಸರಕಾರವು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ಬಹಳ ಅವಶ್ಯಕವಾಗಿದೆ ಎಂದು ಧಾರವಾಡದ ಬಹುಶಿಸ್ತಿಯ  ಸಂಶೋಧನಾ ಅಭಿವೃದ್ಧಿ ಕೇಂದ್ರದ (ಸಿ.ಎಮ್.ಡಿ.ಆರ್) ನಿರ್ದೇಶಕ  ಪ್ರೊ.ಬಸವಪ್ರಭು ಜಿರಲಿ ಅಭಿಪ್ರಾಯಪಟ್ಟರು. ಅವರು
ಅವರು ನಗರದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಅರ್ಥಶಾಸ್ತ್ರ ವಿಭಾಗ, ಡಾ. ಡಿ.ಎಂ ನಂಜುಂಡಪ್ಪ ಸೆಂಟರ್ ಫಾರ್ ಅಪ್ಲೈಡ್ ರಿಸರ್ಚ್ ಇನ್ ಎಕನಾಮಿಕ್ಸ್ ಮತ್ತು ಬಹುಶಿಸ್ತೀಯ ಸಂಶೋಧನಾ  ಅಭಿವೃದ್ಧಿ ಕೇಂದ್ರ (CMDR) ಸಹಯೋಗದಲ್ಲಿ  ಕವಿವಿಯ ಅರ್ಥಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ‘ಕರ್ನಾಟಕದಲ್ಲಿ ಪ್ರಾದೇಶಿಕ ಅಸಮತೋಲನವನ್ನು ಪುನರ್ ವಿಮರ್ಶೆ,’ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಂದು ರಾಜ್ಯವು ಪ್ರಾದೇಶಿಕ ಅಸಮತೋಲನ ಹೊಂದಿವೆ. ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕ ವಿಭಾಗವು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆ ಆಗಬೇಕಾದರೆ ಹಿಂದುಳಿದ ಪ್ರದೇಶಕ್ಕೆ ಗುಣಮಟ್ಟದ ಶಿಕ್ಷಣವು ಒದಗಿಸುವದು ಅವಶ್ಯಕ. ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕು ಎಂದರು.
ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯರಾದ ಪ್ರೊ.ಎಸ್.ಟಿ.  ಬಾಗಲಕೋಟಿ ಮಾತನಾಡಿ… ಪ್ರಾದೇಶಿಕ ಅಸಮತೋಲನವು ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಾಗಿದೆ. ಪ್ರಾದೇಶಿಕ ಅಸಮತೋಲನಕ್ಕೆ ಅನೇಕ‌ ಕಾರಣಗಳಿವೆ. ಆರ್ಥಿಕ ಸಾಮಾಜಿಕ ಮತ್ತು ಭೌಗೋಳಿಕವಾಗಿ
ಹೆಚ್ಚು ಅಸಮತೋಲನ ದಿಂದ ಕೂಡಿದೆ ಎಂದ ಅವರು ಸಕಾಲದಲ್ಲಿ ಸರಕಾರಗಳು ಸೂಕ್ತ ಯೋಜನೆ ಕ್ರಮಗಳನ್ನು ಕೈಗೊಳ್ಳಬೇಕು ಇಲ್ಲವಾದರೆ ಜನರಲ್ಲಿ ಸರಕಾರಗಳ ಕಾರ್ಯವೈಖರಿ ಕುರಿತು ಹತಾಶೆ ಭಾವನೆ ಉಂಟಾಗಬಹುದು ಎಂದರು.
ಪ್ರಾದೇಶಿಕ ಅಸಮತೋಲನದಿಂದ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡುವಲ್ಲಿ ಡಾ.ಡಿ.ಎಂ.ನಂಜುಂಡಪ್ಪ ಅವರ ದೂರದೃಷ್ಟಿ ಮತ್ತು ಪಾತ್ರ ಸ್ಮರಣೀಯ ಎಂದರು. ಅಭಿವೃದ್ಧಿಯ  ಮೂಲಕ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಒದಗಿಸಲು ಪ್ರೊ. ನಂಜುಂಡಪ್ಪನವರ  ಕೊಡುಗೆ ಅಪಾರ ಎಂದರು.
ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಹಲವು ಪ್ರಯತ್ನಗಳು ನಡೆದವು ಅವುಗಳಲ್ಲಿ  1954 ರಲ್ಲಿ ಸತ್ಯ ಸಂಶೋಧನಾ ಸಮಿತಿ ನೇಮಿಸಲಾಯಿತು. 1980-ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಸಮಿತಿ ಮತ್ತು ಡಾ. ನಂಜುಂಡಪ್ಪ ಅವರನ್ನು ಪ್ರಾದೇಶಿಕ ಅಸಮಾತೋಲನ ನಿವಾರಣೆಯ  ಸಮಿತಿ ಅಧ್ಯಕ್ಷರನ್ನಾಗಿ ಅಂದಿನ ಸರಕಾರವು ನೇಮಕ ಮಾಡುವುದರೊಂದಿಗೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ  ಹಲವಾರು ಪ್ರಯತ್ನಗಳು ನಡೆದಿವೆ ಎಂದರು.
ಪ್ರಾದೇಶಿಕ ಸಮತೋಲನ ನಿವಾರಣೆಗೆ ಸರ್ಕಾರಗಳು ಅನೇಕ ಕ್ರಮಗಳಿಂದ ನಿವಾರಿಸಲು ಸಾಧ್ಯ ಅವುಗಳಲ್ಲಿ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಬಲವರ್ಧನೆ, ಹೈಕೋರ್ಟ್ ಪೀಠ ಸ್ಥಾಪನೆ, ಸಂವಿಧಾನ ತಿದ್ದುಪಡಿ – 371-ಜೆ ಸೇರ್ಪಡೆ,  ಐಟಿ ಪಾರ್ಕ್ ಗಳ ಸ್ಥಾಪನೆ  ಔದ್ಯಮಿಕ ಕ್ಲಸ್ಟರ್ ಪಾರ್ಕಗಳ ನಿರ್ಮಾಣ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ನಿರ್ಮಾಣ, ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವುದು, ಎಪಿಎಂಸಿಗಳ ಸ್ಥಾಪನೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ಡಾ.ಬಿ ಹೆಚ್ ನಾಗೂರ್ ಮಾತನಾಡಿ , ಪ್ರಾದೇಶಿಕ ಅಸಮತೋಲನ ನಿವಾರಿಸುವ ಹೋರಾಟದಲ್ಲಿ ಮತ್ತು ಕರ್ನಾಟಕ ಅಭಿವೃದ್ಧಿಯಲ್ಲಿ ಡಾ. ಡಿ.ಎಂ. ನಂಜುಂಡಪ್ಪನವರ ಪಾತ್ರ ಬಹಳ ಇದೆ. ರಾಜ್ಯದ ಸುಸ್ಥಿರ ಅಭಿವೃದ್ಧಿಗಾಗಿ ಡಾ. ನಂಜುಂಡಪ್ಪ ಬಹಳಷ್ಟು ಶ್ರಮಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಡಾ.‌ ಡಿ.ಎಂ.ನಂಜುಂಡಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಡಾ. ಮನೋಜ ಡೊಳ್ಳಿ, ಡಾ. ಎಂ ಆರ್ ಕುಲಕರ್ಣಿ, ಡಾ. ಬ್ರಹ್ಮಾನಂದ, ಡಾ. ನಾಗರಾಜ ಮುದೇನೂರ, ಡಾ. ನಾರಾಯಣ ಸೇರಿದಂತೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿದ್ದರು.
WhatsApp Group Join Now
Telegram Group Join Now
Share This Article