ನೇಸರಗಿ: ಸಮೀಪದ ವನ್ನೂರ ಗ್ರಾಮಕ್ಕೆ ಬೈಲಹೊಂಗಲ ಉಪವಿಭಾಗಧಿಕಾರಿಗಳಾದ ಪ್ರಭಾವತಿ ಫಕೀರಪೂರ ಅವರು ಗ್ರಾಮದ ಪರಿಶಿಷ್ಟ ಜಾತಿ ಕಾಲನಿ ಗೆ ಭೇಟಿ ನೀಡಿ ಎಸ್ ಸಿ ಜನಾಂಗದವರ ಕುಂದು ಕೋರತೆಗಳನ್ನು ಆಲಿಸಿದರು ಹಾಗೂ ಎಸ್ ಸಿ ಕಾಲನಿಯ ಅಂಗನವಾಡಿ, ಕಾಲನಿ ಜನರ ನೀರಿನ ಸೌಕರ್ಯ, ಮೂಲಭೂತ ಸೌಕರ್ಯಗಳ ಕುರಿತು ಕಾಲನಿ ಜನರೊಂದಿಗೆ ಮುಕ್ತವಾಗಿ ಚರ್ಚೆ ಮಾಡಿ ಕುಂದು ಕೊರತೆಗಳನ್ನು ಅಳಿಸಿದರು.
ಗ್ರಾಮಕ್ಕೆ ಬೇಟಿ ನೀಡಿ ಮಾತನಾಡಿ ಇಲ್ಲಿನ ಜನರಿಗೆ ಸರ್ಕಾರದಿಂದ ಅನೇಕ ಸವಲತ್ತು ದೊರಕುತಿದ್ದು ಅದರ ಪ್ರಯೋಜನ ಪಡೆಯಲು ಜನಾಂಗದ ಜನರಿಗೆ ತಿಳಿಸಿದರು. ದಲಿತ ಮುಖಂಡ ಮನೋಜ ಕೆಳಗೇರಿ ಎ ಸಿ ಅವರಿಗೆ ಇಲ್ಲಿನ ಮಹಿಳೆಯರಿಗೆ ಶೌಚಾಲಯ ಸಮಸ್ಯ ಇದ್ದು ಅದರ ಅನುಕೂಲ ಕಲ್ಪಿಸಲು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಾನಂದ ಕಲ್ಲೂರ, ಗ್ರಾಮ ಲೆಕ್ಕಧಿಕಾರಿ ಬಸವರಾಜ ಕೆರಕನವರ, ಗ್ರಾಮ ಪಂಚಾಯತಿ ಸದಸ್ಯರಾದ ಅಶೋಕ ಕೆಳಗೇರಿ, ಶ್ರೀಮತಿ ಮಧುಮತಿ ಕೆಳಗೇರಿ ಹಾಗೂ ಊರಿನ ಪ್ರಮುಖರು ಹಾಜರಿದ್ದರು.