ಅಥಣಿ: ಕಾಂಗ್ರೆಸ್ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯ ಮಾಹಿತಿ ಸ್ಥಳೀಯ ಶಾಸಕರಾದ ಲಕ್ಷ್ಮಣ ಸವದಿಯವರಿಗೆ ಕೊಟ್ಟಿಲ್ಲ ಎಂದು ಆರೋಪಿಸಿ ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಯುವ ಕಾರ್ಯಕರ್ತರು ವಾಗ್ವಾದಕ್ಕೀಳಿದು ಪದಾಧಿಕಾರಿಗಳ ಸಭೆಗೆ ಅಡತಡೆ ಮಾಡಿದ ಘಟನೆ ನಡೆಯಿತು.
ಕಾಂಗ್ರೆಸ್ ಪಕ್ಷದ ಯಾವುದೇ ಸಭೆ, ಸಮಾರಂಭಗಳು ಅಥಣಿ ಮತಕ್ಷೇತ್ರದಲ್ಲಿ ನಡೆಸುವುದಕ್ಕಿಂತ ಮೊದಲು ಸ್ಥಳೀಯ ಶಾಸಕರನ್ನು ಆವ್ಹಾನಿಸಬೇಕು ಆದರೆ ಶಾಸಕರ ಗಮನಕ್ಕೆ ತರದೆ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸ್ಥಳೀಯ ನಿರೀಕ್ಷಣಾ ಮಂದಿರದಲ್ಲಿ ಕರೆದಿರುವುದನ್ನು ಯುಥ ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ಕಾಂಬಳೆ ವಿರೋಧಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಾನಂದ ಮರಯಾಯಿ ಮಾತನಾಡಿ, ಅಥಣಿ ಅಸೆಂಬ್ಲಿ ಯುವ ಕಾಂಗ್ರೆಸ್ ಅಧ್ಯಕ್ಷೆ ಆಶಾ ಪಾಟೀಲ ಇಂದಿನ ಪದಾಧಿಕಾರಿಗಳ ಸಭೆಯ ಕುರಿತು ಮಾಹಿತಿ ನೀಡಿದ್ದಾರೆ ಎಂದ ಅವರು ಇಲ್ಲಿ ನಾವು ಪದಾಧಿಕಾರಿಗಳ ಸಭೆ ನಡೆಸುತ್ತಿರುವುದು ಜಿಲ್ಲಾ ಉಸ್ತೂವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮಣ ಸವದಿ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಮಾಡುತ್ತಿದ್ದೇವೆ ಎಂದರು.
ಯುವ ಕಾಂಗ್ರೆಸ್ ಅಥಣಿ ಅಸೆಂಬ್ಲಿ ಅಧ್ಯಕ್ಷೆ ಆಶಾ ಪಾಟೀಲ, ಅಥಣಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ತೌಸಿಫ್ ಸಾಂಗ್ಲಿಕರ, ಯುಥ ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಮಹಾಂತೇಶ ಕಾಂಬಳೆ, ರವಿ ಬಡಕಂಬಿ, ಮಂಜು ನೂಲಿ, ಮಹಾಂತೇಶ ಬಾಡಗಿ, ಆಶೀಪ್ ತಾಬೋಳಿ, ಶಿವಪುತ್ರ ದಾಬೋಳಿ, ರಹೀದ್ ಮಾಸ್ಟರ್, ಮುರುಗೇಶ ಪಟ್ಟಣ, ಸುರೇಶ್ ಚಲವಾದಿ, ಅಕ್ಷಯ್ ಆಲಬಾಳ, ಮಹೇಶ್ ಸತ್ತಿ, ರವಿ ದೊಡಮನಿ, ಆದರ್ಶ ಗಸ್ತಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು