ಹಿಂದಿ ಭಾರತದ ಭಾಷೆಗಳಿಗೆ ಶತ್ರುವಲ್ಲ : ಅಮಿತ್ ಶಾ

Ravi Talawar
ಹಿಂದಿ ಭಾರತದ ಭಾಷೆಗಳಿಗೆ ಶತ್ರುವಲ್ಲ : ಅಮಿತ್ ಶಾ
WhatsApp Group Join Now
Telegram Group Join Now

ಹೊಸದಿಲ್ಲಿ : ಗುರುವಾರ (ಜೂ. 26) ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಮಿತ್ ಶಾ, ಹಿಂದಿ ಭಾರತದ ಭಾಷೆಗಳಿಗೆ ಶತ್ರುವಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಆ ಮೂಲಕ, ಬ್ಯಾಲನ್ಸಿಂಗ್ ಆದ ಹೆಜ್ಜೆಯನ್ನು ಇಡುತ್ತಿದ್ದಾರೆ.

“ಯಾವುದೇ ವಿದೇಶಿ ಭಾಷೆಗೆ ವಿರೋಧ ಇರಬಾರದು. ಹಿಂದಿಯು ಯಾವುದೇ ಭಾರತೀಯ ಭಾಷೆಗೆ ಶತ್ರುವಾಗಲು ಸಾಧ್ಯವಿಲ್ಲ” ಎಂದು ಅಮಿತ್ ಶಾ ಹೇಳಿದ್ದಾರೆ. ಗೃಹ ಸಚಿವಾಲಯದ ಅಧಿಕೃತ ಭಾಷಾ ಇಲಾಖೆಯ ಸುವರ್ಣ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತಾನಾಡುತ್ತಿದ್ದರು.

ಹಿಂದಿ ಹೊರತಾದ ಇತರ ಭಾರತೀಯ ಭಾಷೆಗಳ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡುತ್ತಿರುವ ಇತ್ತೀಚಿನ ಹೇಳಿಕೆಗಳು ಚರ್ಚೆಗೆ ಗ್ರಾಸವಾಗುತ್ತಿದೆ. ಮೋದಿ ಸರ್ಕಾರದ ಮೇಲೆ, ಅದರಲ್ಲೂ ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಮಾಡುತ್ತಿದ್ದಾರೆ ಎನ್ನುವ ಅಪವಾದ ಇದೆ. ಅದನ್ನು ಹೋಗಲಾಡಿಸಲು, ಸಾಧ್ಯವಾದ ಪ್ರಯತ್ನ ಪ್ರಧಾನಿ ಮೋದಿ ಮತ್ತು ಗೃಹ ಸಚಿವರಾದ ಅಮಿತ್ ಶಾ ಅವರಿಂದ ಆಗುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

WhatsApp Group Join Now
Telegram Group Join Now
Share This Article