ನಾವು ಕೃಷ್ಣಾ ನೀರಿನಿಂದ ವಂಚಿತರಾಗುತ್ತಿದ್ದೇವೆ : ಯಶವಂತರಾಯಗೌಡ ಪಾಟೀಲ

Abushama Hawaldar
ನಾವು ಕೃಷ್ಣಾ ನೀರಿನಿಂದ ವಂಚಿತರಾಗುತ್ತಿದ್ದೇವೆ  : ಯಶವಂತರಾಯಗೌಡ ಪಾಟೀಲ
WhatsApp Group Join Now
Telegram Group Join Now

ಇಂಡಿ : ಕಳೆದ ೬೧ ವರ್ಷಗಳಿಂದ ನಮ್ಮನ್ನು ಆಳಿದ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಮ್ಮ ಪಾಲಿಗೆ ಬರಬೇಕಾದ ಹಕ್ಕು ನಮಗೆ ನೀಡುತ್ತಿಲ್ಲ. ನಾವು ಕೃಷ್ಣಾ ನೀರಿನಿಂದ ವಂಚಿತರಾಗುತ್ತಿದ್ದು ಕಾವೇರಿ ನೀರಿಗಾಗಿ ಕೇಂದ್ರ ಮತ್ತು ವಿಧಾನಸಭೆಯಲ್ಲಿ ಕಾವೇರಿದ ವಾತಾವರಣ ವಾಗುತ್ತಿತ್ತು. ಕೃಷ್ಣೆಗಾಗಿ ಒಗ್ಗಟ್ಟಿನ ಮತ್ತು ನಮ್ಮ ಹಕ್ಕಿನ ಕೂಗು ನಡೆದಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಜು.೯ ರಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಇಂಡಿಗೆ ಬಂದು ಸುಮಾರು ೪೨೦೦ ಕೋಟಿ ರೂ ಉದ್ಗಾಟನೆ, ಶಂಕುಸ್ಥಾಪನೆ, ಭೂಮಿಪೂಜೆ ಕಾಮಗಾರಿಗೆ ಕುರಿತು ಬರುವ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿಗೆ ರೂ ೩೦೦೦ ಕೋಟಿ ರೂ, ೧೯ ಕೆರೆ ತುಂಬುವ ಯೋಜನೆಗೆ ರೂ ೨೩೨ ಕೋಟಿ ರೂ ತಿಡಗುಂದಿ ಕಾಲುವೆಗೆ ೫೩೪ ಕೋಟಿ ರೂ, ಪಂಡರಪೂರ ಗಾಣಗಾಪುರ ಹೆದ್ದಾರೆಗೆ ಚಡಚಣದಿಂದ ಗಾಣಗಾಪುರ ವರೆಗೆ ೫೪೦ ಕೋಟಿ ಸೇರಿದಂತೆ ಒಟ್ಟು ೪೨೦೦ ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಬರುತ್ತಿದ್ದಾರೆ ಎಂದರು.
ಅದಲ್ಲದೆ ರೋಡಗಿ ಬ್ರೀಡ್ಜ ೫ ಕೋಟಿ, ೮ ಗ್ರಾಮಗಳಿಗೆ ಸಮುದಾಯ ಭವನ, ಮೌಲಾನಾ ಅಬ್ದುಲ್ ವಸತಿ ಶಾಲೆ,ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ, ತಾಲೂಕಿನ ೯ ಪಶು ಆಸ್ಪತ್ರೆ, ಉಡಚಾಣ ಮತ್ತು ಪಡನೂರ ಬ್ರೀಡ್ಜ,ಭೀಮಾ ಬ್ಯಾರೇಜು, ಭ್ಯೂಯಾರ ಬ್ಯಾರೇಜು, ಕಾರ್ಮಿಕರ ಮಕ್ಕಳ ವಸತಿ ಶಾಲೆ, ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಭೂಮಿಪೂಜೆ ಮತ್ತು ಉದ್ಘಾಟನೆ ನಡೆಯಲಿದೆ ಎಂದರು.
ಇAಡಿಯ ಪೋಲಿಸ ಮೈದಾನದಲ್ಲಿ ಸಭೆ ನಡೆಯಲಿದ್ದು ಕಾರ್ಯಕರ್ತರು ಹೆಚ್ಚು ಜನ ಸೇರಿಸಬೇಕು. ನಮ್ಮ ತಾಲೂಕಿನಲ್ಲಿ ೭೨೦೦೦ ಮಹಿಳೆಯರು ರೂ ೨೦೦೦ ಗ್ಯಾರಂಟಿ ಯೋಜನೆಯಲ್ಲಿ ಪಡೆಯುತ್ತಿದ್ದು ಹೆಚ್ಚು ಮಹಿಳೆಯರಿಗೆ ತಿಳಿ ಹೇಳಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೇಳಿಕೊಂಡರು.
ಗ್ಯಾರAಟಿ ಯೋಜನೆಯ ಜಿಲ್ಲಾಧ್ಯಕ್ಷ ಇಲಿಯಾಸ ಬೋರಾಮಣಿ, ತಾಲೂಕಾ ಅಧ್ಯಕ್ಷ ಪ್ರಶಾಂತ ಕಾಳೆ, ಎಂ.ಆರ್.ಪಾಟೀಲ, ಬಾಬು ಸಾವಕಾರ ಮೇತ್ರಿ, ಗುರನಗೌಡ ಪಾಟೀಲ, ತಮ್ಮಣ್ಣ ಪೂಜಾರಿ, ದುಂಡು ಮುಜಗೊಂಡ, ಅಪ್ಪು ಕಲ್ಲೂರ, ನಿವೃತ್ತ ಪ್ರಾಚಾರ್ಯ ಎ.ಪಿ.ಕಾಗವಾಡಕರ, ಜಟ್ಟೆಪ್ಪ ರವಳಿ, ಜಾವೇದ ಮೋಮಿನ, ನಿರ್ಮಲಾ ತಳಕೇರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭೀಮಣ್ಣ ಕವಲಗಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ಸತೀಶ ಕುಂಬಾರ, ರೈಸ ಅಷ್ಟೆಕರ, ಕಲ್ಲನಗೌಡ ಪಾಟೀಲ,ಭೀಮಾಶಂಕರ ಮೂರಮನ, ಮಲ್ಲನಗೌಡ ಬಿರಾದಾರ, ಸತ್ತಾರ ಬಾಗವಾನ,ಅಣ್ಣಪ್ಪ ಬಿದರಕೋಟಿ,ಶೈಲಜಾ ಜಾಧವ, ಸುನಂದಾ ಬಿರಾದಾರ ಮತ್ತಿತರಿದ್ದರು.

WhatsApp Group Join Now
Telegram Group Join Now
Share This Article