ಯೋಗದಿಂದ ಆರೋಗ್ಯ ವೃದ್ಧಿ: ಶಶಿಕಾಂತ ಚುನಮರಿ

Pratibha Boi
ಯೋಗದಿಂದ ಆರೋಗ್ಯ ವೃದ್ಧಿ: ಶಶಿಕಾಂತ ಚುನಮರಿ
WhatsApp Group Join Now
Telegram Group Join Now

ಬೆಳಗಾವಿ: ಬೈಲಹೊಂಗಲದ ವ್ಯಾಪ್ತಿಯ ಸಂಗ್ರೇಶಕೊಪ್ಪದ ಸರಕಾರಿ ಕನ್ನಡ ಮಾಧ್ಯಮ ಹಿರಿಯ ಶಾಲೆಯಲ್ಲಿ ೮, ೯ ಮತ್ತು ೧೦ನೇ ತರಗತಿಯ ಮಕ್ಕಳಿಗಾಗಿ ಯೋಗದ ಸತ್ಸಂಗ ಸಂಸ್ಥೆಯ ಶಾಖೆಗಳಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಒಂದು ವಿಶೇಷ ಯೋಗ ದಿನಾಚರಣೆಯ ರ‍್ಯಕ್ರಮ ಚಾಲನೆ ನೀಡಿದರು.
ಈ ವೇಳೆ ಬೆಳಗಾವಿಯ ಯೋಗಾ ಹಿರಿಯ ಸಾಧಕರಾದ ಶಶಿಕಾಂತ ಚುನಮರಿ ಅವರು ಮಾತನಾಡಿ, ಆರೋಗ್ಯವಾಗಿ ಇರಬೇಕಾದರೆ ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವ ಒಂದು ಅತ್ಯುತ್ತಮ ಅಭ್ಯಾಸವಾಗಿದೆ. ನಿಯಮಿತ ಯೋಗಾಭ್ಯಾಸದಿಂದ, ಹೃದಯರಕ್ತನಾಳದ ಆರೋಗ್ಯ ಸುಧಾರಿಸುತ್ತದೆ, ನೋವು ಕಡಿಮೆಯಾಗುತ್ತದೆ, ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಮತ್ತು ಉಸಿರಾಟದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಶಾಲಾ ವಿದ್ರ‍್ಥಿಗಳಿಗೆ ಯೋಗ-ಧ್ಯಾನದ ಪರಿಚಯ ಮತ್ತು ಅದರ ಮಹತ್ವವನ್ನು ತಿಳಿಸಿದರು.
ಮಕ್ಕಳಿಗಾಗಿ ಯೋಗದಾ ಸತ್ಸಂಗ ಧ್ಯಾನ ಮಂಡಳಿಯಿAದ ಯೋಗಾ ರ‍್ಯ ಆಯೋಜಿಸಲಾಗಿದೆ. ಮಕ್ಕಳು ಆಟ- ಪಾಠದೊಂದಿಗೆ ಯೋಗವನ್ನು ಮಾಡಬೇಕು.
ನಮ್ಮ ಅಂಗೈಯಲ್ಲೇ ಆರೋಗ್ಯವಿದ್ದು, ಯೋಗದಿಂದ ಆರೋಗ್ಯವು ವೃದ್ಧಿಯಾಗುತ್ತದೆ. ನಮ್ಮ ನಿತ್ಯ ರ‍್ಯವು ಯೋಗಾಸನ ಮತ್ತು ಪ್ರಾಣಾಯಾಮದ ಆಚರಣೆಯಿಂದಲೇ ಆರಂಭಗೊಳ್ಳಬೇಕು ಎಂದು ಹೇಳಿದರು.
ಶಾಲೆಯ ಒಟ್ಟು ೩೩೦ ಶಾಲಾ ವಿದ್ಯಾರ್ಥಿಗಳು, ೧೫ ಬೋಧಕ ಸಿಬ್ಬಂದಿ ಹಾಗೂ ಪ್ರಾಂಶುಪಾಲರು ಈ ರ‍್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ತಮ್ಮ ಮೆಚ್ಚುಗೆಯನ್ನು ಸೂಚಿಸಿದರು.
ಈ ವೇಳೆ ಮಂಜುಳಾ ಚುನಮರಿ, ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ಬೈಲಹೊಂಗಲದ ಸಾಧಕರಾದ ಎಮ್ ಎಸ್ ಕುಂಬಾರ, ಪಟ್ಟಿಹಾಳ ಹಾಗೂ ಸುನೀಲ್ ಮೆಟಗುಡ್ ಹಾಗೂ ಇತರರು ಇದ್ದರು.

WhatsApp Group Join Now
Telegram Group Join Now
Share This Article