ಟೆಹ್ರಾನ್ ತೊರೆಯುವಂತೆ ಇರಾನ್‌ ಮಂದಿಗೆ ಟ್ರಂಪ್‌ ಎಚ್ಚರಿಕೆ

Ravi Talawar
ಟೆಹ್ರಾನ್ ತೊರೆಯುವಂತೆ ಇರಾನ್‌ ಮಂದಿಗೆ ಟ್ರಂಪ್‌ ಎಚ್ಚರಿಕೆ
WhatsApp Group Join Now
Telegram Group Join Now

ಇಸ್ರೇಲ್ ಮತ್ತು ಇರಾನ್ ಪರಸ್ಪರ ಐದನೇ ದಿನವೂ ದಾಳಿ ನಡೆಸಿವೆ.ಇರಾನ್​​ನ ರಾಜಧಾನಿ ಟೆಹ್ರಾನ್ ತೊರೆಯುವಂತೆ ಅಲ್ಲಿನ ಜನರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಯಿಂದಾಗಿ ಇರಾನ್ ಜನ ತಮ್ಮ ಮೇಲೆ ದೊಡ್ಡ ದಾಳಿ ನಡೆಯುವ ಸಾಧ್ಯತೆ ಇರಬಹುದು ಎಂದು ಆತಂಕಗೊಂಡಿದ್ದಾರೆ. ಇರಾನ್-ಇಸ್ರೇಲ್ ಸಂಘರ್ಷದ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರೂ ತಕ್ಷಣ ಟೆಹ್ರಾನ್ ತೊರೆಯಬೇಕೆಂದು ಪೋಸ್ಟ್ ಮಾಡಿದ್ದಾರೆ.

, ನಾನು ಸಹಿ ಹಾಕಲು ಹೇಳಿದ ಒಪ್ಪಂದಕ್ಕೆ ಇರಾನ್ ಸಹಿ ಹಾಕಬೇಕಿತ್ತು. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ, ಎಲ್ಲರೂ ತಕ್ಷಣ ಟೆಹ್ರಾನ್‌ನಿಂದ ಸ್ಥಳಾಂತರಗೊಳ್ಳಬೇಕು ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಹೊತ್ತಲ್ಲಿ ಈ ಪೋಸ್ಟ್​ ಮಾಡಿದ್ದಾರೆ.

ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸುಮಾರು 9.5 ಮಿಲಿಯನ್ ಜನರು ವಾಸಿಸುತ್ತಿದ್ದಾರೆ. ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಮೊದಲು, ಇಸ್ರೇಲ್ ಮಿಲಿಟರಿ ಕೂಡ ಮಧ್ಯ ಟೆಹ್ರಾನ್‌ನ ಒಂದು ಭಾಗವನ್ನು ಸ್ಥಳಾಂತರಿಸುವಂತೆ ಎಚ್ಚರಿಕೆ ನೀಡಿತ್ತು. ಇದು 330,000 ಜನರ ಮೇಲೆ ಪರಿಣಾಮ ಬೀರುತ್ತದೆ.

 

WhatsApp Group Join Now
Telegram Group Join Now
Share This Article