ಸ್ಲೇಟಿನಲ್ಲಿ “ ಅ “ ಎಂದು ಬರೆಯಲು ಕಲಿಸಿ
ಸಾವಿರ ಆನೆಗಳ ಬಲ ತುಂಬಿದ
ಆಕಾಶದಷ್ಟು ವಿಶಾಲ ಹೃದಯದ
ಅಪ್ಪನೆಂದರೆ ಅದೇನೋ ಆನಂದ
ಹಬ್ಬಗಳು ಬಂದರೆ ಸಾಕು
ಪೇಟೆಯಲ್ಲಿನ ಹೂವಿನ ರಾಶಿ ಮನೆಗೆ ತಂದು
ಹೂ ಮಾಲೆ ಕಟ್ಟುವಂತೆ ಹೇಳಿದ
ಅಪ್ಪನೆಂದರೆ ಅದೇನೋ ಆನಂದ
ಕಾರುಗಳು ಅಪರೂಪವಾದ ಆ ದಿನಗಳಲ್ಲಿ
ಸೈಕಲ್‌ನಲ್ಲಿಯೇ ಊರು ತಿರುಗಿಸಿದರೂ
ದಣಿಯದೇ ಮಕ್ಕಳನ್ನು ಸಲುಹಿದ
ಅಪ್ಪನೆಂದರೆ ಅದೇನೋ ಆನಂದ
ಮಗಳಿಗೆ ಬಣ್ಣಬಣ್ಣದ ಬಳೆಗಳು
ಬಿಂದಿಗಳನ್ನು ತಂದುಕೊಟ್ಟು
ಅವಳ ನಗುವ ನೋಡಿ ಸಂಭ್ರಮಿಸುವ
ಅಪ್ಪನೆAದರೆ ಅದೇನೋ ಆನಂದ
ಪ್ರೀತಿಯಿAದ ಸಾಕಿ ಸಲುಹಿ
ತೋರು ಬೆರಳು ಹಿಡಿದು ನಡೆಸಿ
ಮುದದಿ ಮಗಳ ಧಾರೆಯೆರೆದು ಕೊಟ್ಟ
ಅಪ್ಪನೆಂದರೆ ಅದೇನೋ ಆನಂದ
ಭಾರತಾAಬೆಯನ್ನು ನಮಿಸಿ
ದೇಶಭಕ್ತಿಗೀತೆಗಳನು ಪಠಿಸಿ
ಗುರು ಸ್ಥಾನದಿ ನಿಂತು ವಿದ್ಯೆ ಕಲಿಸಿದ
ಅಪ್ಪನೆಂದರೆ ಅದೇನೋ ಆನಂದ
ಒAದು ಕ್ಷಣ ಸಿಡಿಮಿಡಿಗೊಂಡರೂ
ಮರುಕ್ಷಣ ಶಾಂತನಾಗಿ
ಮಕ್ಕಳAತೆ ನಗೆಯ ಬೀರುವ
ಅಪ್ಪನೆಂದರೆ ಅದೇನೋ ಆನಂದ
ಯಾರ ಗೊಡವೆಗೆ ಹೋಗದೇ
ಯಾವ ಒಡವೆ ಧರಿಸದೇ
ಶ್ರದ್ಧೆಯಿಂದ ದುಡಿದು ಗಳಿಸಿ
ಬದುಕೇ ಬಂಗಾರವಾಗಿಸಿಕೊAಡ
ಅಪ್ಪನೆಂದರೆ ಅದೇನೋ ಆನಂದ
ಸAಸಾರ ಕಡಲಿನಲ್ಲಿ ಮುಳುಗಿ
ಈಜಬೇಕು ಇದ್ದು ಜಯಿಸಬೇಕು
ಎಂದು ದಿಟ್ಟತನವ ಕಲಿಸಿದಂತಹ
ಅಪ್ಪನೆಂದರೆ ಅದೇನೋ ಆನಂದ
ಅಂಜನಾ ರಾಘವೇಂದ್ರ ಕುಬೇರ, ಗದಗ