ಸೆವೆಂತ್‌ ಡೇ ಅಡ್ವೆಂಟಿಸ್ಟ್‌ ಸ್ಕೂಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ

Ravi Talawar
ಸೆವೆಂತ್‌ ಡೇ ಅಡ್ವೆಂಟಿಸ್ಟ್‌ ಸ್ಕೂಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆ
WhatsApp Group Join Now
Telegram Group Join Now

ಬೆಳಗಾವಿ: ವಡಗಾವಿಯಲ್ಲಿರುವ ಸೆವೆಂತ್‌ ಡೇ ಅಡ್ವೆಂಟಿಸ್ಟ್‌ ಇಂಗ್ಲಿಷ್‌ ಮೀಡಿಯಮ್‌ ಸ್ಕೂಲ್‌ನಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. 28ನೇ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಸಿಗಳನ್ನು ನೆಟ್ಟು ಮಕ್ಕಳಿಗೆ ಪರಿಸರ ಕುರಿತಾಗಿ ಜಾಗೃತಿ ಮೂಡಿಸಲಾಯಿತು.

ಹಸಿರು, ಕಾಡು, ಗಿಡಮರಗಳ ಉಪಯೋಗ ಮತ್ತು ನಾಗರಿಕರು ಪರಿಸರದ ಜೊತೆಗೆ ಯಾವ ರೀತಿಯ ಸಂಬಂಧ ಹೊಂದಿರಬೇಕು, ಯಾವ ರೀತಿಯ ಜವಾಬ್ದಾರಿ ನಿರ್ವಹಿಸಬೇಕು ಎಂದು ಮಕ್ಕಳಿಗೆ ಅರಿವು ಮೂಡಿಸಲಾಯಿತು.ಈ ವೇಳೆಯಲ್ಲಿ ಶಾಲೆಯ ಪ್ರಾಂಶುಪಾಲರು, ಸಹಶಿಕ್ಷಕರು, ಇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article