ಬೀಜಿಂಗ್: ಚೀನಾದಲ್ಲಿ ಬುಧವಾರ ಮುಂಜಾನೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎಸ್ಸಿಎಸ್) ತಿಳಿಸಿದೆ.
ಎನ್ಸಿಎಸ್ ಪ್ರಕಾರ, ಈ ಭೂಕಂಪವು ಭೂಮಿಯ 10 ಕಿಲೋ ಮೀಟರ್ ಆಳದಲ್ಲಿ ಸಂಭವಿಸಿದ್ದು, ಬಳಿಕ ಭೂಕಂಪಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಎಸ್ಸಿಎಸ್, ಜೂನ್ 4ರ ಮುಂಜಾನೆ 4.43ಕ್ಕೆ ಭೂಮಿ ಕಂಪಿಸಿದೆ ಎಂದು ತಿಳಿಸಿದೆ.
ಈ ರೀತಿಯ ತೀವ್ರವಲ್ಲದ ಭೂಕಂಪ ಭೂಮಿಯ ಮೇಲ್ಮೈಗೆ ಹತ್ತಿರದಲ್ಲಿ ಹೆಚ್ಚಿನ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇದು ಆಳವಾದ ಭೂಕಂಪಗಳಿಗಿಂತ ಹೆಚ್ಚು ಅಪಾಯಕಾರಿ. ಇದು ಬಲವಾದ ಭೂ ಕಂಪನಕ್ಕೆ ಕಾರಣವಾಗುತ್ತದೆ. ತೀವ್ರ ಭೂಕಂಪಗಳು ಮೇಲ್ಮೈಗೆ ಬರುವಾಗ ಅವು ಶಕ್ತಿಯನ್ನು ಕಳೆದುಕೊಳ್ಳುತ್ತವೆ.