ಬಳ್ಳಾರಿ ಮೇ 27 : ಬಳ್ಳಾರಿ ನಗರದಲ್ಲಿ, ವಿದ್ಯುತ್, ಚರಂಡಿ, ಕುಡಿಯುವ ನೀರು ರಸ್ತೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳು ಹದಗೆಟ್ಟು ಹೋಗಿದ್ದಾವೆ, ಮತ್ತೆ ನಗರದ ಅತ್ಯಂತ ಮುಖ್ಯ ಪ್ರದೇಶಗಳಲ್ಲಿ ರಸ್ತೆಗಳನ್ನು ಅಗೆದು ವೃತಗಳನ್ನು ನಿರ್ಮಿಸುವುದು ಅಲಂಕಾರ ಮಾಡುವುದು ಸೇರಿದಂತೆ ಇತರೆ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದಾರೆ, ಇಂಥ ಸೌಂದರೀಕರಣವನ್ನು ಕೆಲಸವನ್ನು ಬಿಟ್ಟು ನಾಗರಿಕರಿಗೆ ಉತ್ತಮವಾದ ಮೂಲಭೂತ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ಒದಗಿಸಬೇಕೆಂದು ಸಮಿತಿಯ ಅಧ್ಯಕ್ಷ ಸೋಮಶೇಖರ್ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಅವರು ಇಂದು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಬಳ್ಳಾರಿ ನಾಗರೀಕ ಹೋರಾಟ ಸಮಿತಿ ವತಿಯಿಂದ ಹಮ್ಮಿ ಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ನಡೆಸಿ ಮಾತನಾಡಿ, ನಗರದ ಜನತೆ ಈಗಾಗಲೇ ಅವ್ಯವಸ್ಥೆಯ ಮೂಲಭೂತ ಸೌಕರ್ಯಗಳಿಂದ ರೋಸಿ ಹೋಗಿದ್ದಾರೆ, ಅಲಂಕಾರಿಕ ಮತ್ತು ವೃತ ನಿರ್ಮಾಣದಂತ ಅನಾವಶ್ಯಕ ಖರ್ಚುಗಳ ಕಾಮಗಾರಿಗಳನ್ನು ನಿಲ್ಲಿಸಿ ಸಾರ್ವಜನಿಕರ ಹಣ ಪೋಲು ಮಾಡುವುದನ್ನು ಪಡೆಯಬೇಕು ಎಂದು ಅವರು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದರು.