ಬೆಳಗಾವಿ: ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ, ಸಮಸ್ಯೆಗಳನ್ನು ಪರಿಹರಿಸಿ ಮೂಲಕ ಅಮೋದ್ರಾಜ್ ರಾಜ್ ಸ್ಪೋರ್ಟ್ ಅಕಾಡೆಮಿ ಅವರು ಈ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಅಮೋದ್ರಾಜ್ ಸ್ಪೋರ್ಟ್ಸ್ ಮತ್ತು “ಕ್ಯಾಂಪ್ ಪುರೋಹಿತ್ ಸ್ವೀಟ್’ ಮ್ಯಾನೇಜಿಂಗ್ ನಿರ್ದೇಶಕ ಜಿತೇಂದ್ರ ಪುರೋಹಿತ್ ಅವರು ಹೇಳಿದರು.
ನಗರದ ಸೇಂಟ್ ಪಾಲ್ಸ್ ಪ್ರೌಢಶಾಲಾ ಆಟದ ಮೈದಾನದಲ್ಲಿ ಅಮೋದ್ ರಾಜ್ ಸ್ಪೋರ್ಟ್ ಅಕಾಡೆಮಿ ವತಿಯಿಂದ ಆಯೋಜಿಸಲಾದ ಎರಡು ದಿನಗಳ ಅಂಡರ್ 15 ಲೀಗ್ ಕಮ್ -ನಾಕಔಟ್ ಫುಟ್ಬಾಲ್ ಪಂದ್ಯಾವಳಿಯ ಟ್ರೋಪಿ ಗೆದ್ದ ತಂಡಕ್ಕೆ ಪ್ರಶಸ್ತಿಯನ್ನು ವಿತರಿಸಿ ಅವರು ಮಾತನಾಡಿದರು.
ದೈಹಿಕ ಶಿಕ್ಷಣ ಎಲ್ಲರಿಗೂ ಅವಶ್ಯವಾಗಿದ್ದು, ಕ್ರೀಡೆಯಿಂದ ಉತ್ತಮ ಆರೋಗ್ಯ ಹಾಗೂ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರು ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಆರೋಗ್ಯ ಹೊಂದಬೇಕು. ಉತ್ತಮ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಿ ಅವರನ್ನು ರಾಷ್ಟ್ರಮಟ್ಟದ ಕ್ರೀಡಾ ಪಟುಗಳನ್ನಾಗಿ ಮಾಡಲು ಸಂಪೂರ್ಣ ಸಹಾಯ ಸಹಕಾರ ನೀಡುತ್ತಿದ್ದಾರೆ. ಈ ಅವಕಾಶವನ್ನು ಮಕ್ಕಳು ಸದ್ಬಳಿಕೆ ಮಾಡಿಕೊಂಡು ಪೋಷಕರು ಹೆಸರು ತರಬೇಕು ಎಂದು ಹೇಳಿದರು.
ಅಮೋದ್ರಾಜ್ ರಾಜ್ ಸ್ಪೋರ್ಟ್ ಅಕಾಡೆಮಿ, ಟೆಲ್ಕೋ ಸಂಸ್ಥೆ U.A.E ಸಹೋದರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಈ ಸಂಸ್ಥೆ ಉದ್ದೇಶವಾಗಿದೆ. ಯುವ ಕ್ರೀಡಾಪಟುಗಳು ಸ್ಪರ್ಧಿಸಲು, ಉನ್ನತ ಮಟ್ಟಕ್ಕೆ ಬೆಳೆಸಲು ಅವರಿಗೆ ವೇದಿಕೆ ಕಲ್ಪಿಸುತ್ತಿರುವುದು ಹೆಮ್ಮಯ ವಿಷಯ ಎಂದು ಹೇಳಿದರು.
ಅಮೋದ್ರಾಜ್ ಭಿಂಗೆ ಅವರು ಕ್ರೀಡೆ ಬಗ್ಗೆ ಅಪಾರ ಗೌರವ, ಅಭಿಮಾನ ಇಟ್ಟುಕೊಂಡಿದ್ದಾರೆ. ಅವರ ಬಾಲ್ಯದಲ್ಲಿ ಕ್ರೀಡಾ ಕನಸುಗಳು ಕುಟುಂಬದ ಜವಾಬ್ದಾರಿಗಳಿಗಾಗಿ ತಾತ್ಕಾಲಿಕವಾಗಿ ನಿಲ್ಲಿಸಿದರು. ಆದರೆ, ಉದ್ಯಮಿಯಾಗಿ ಯಶಸ್ಸು ಗಳಿಸಿದ ನಂತರ ತಾವು ಕಂಡ ಕನಸುಗಳನ್ನು ಯುವಕರಿಗಾಗಿ ಜೀವಂತಗೊಳಿಸಲು ನಿರ್ಧರಿಸಿದ್ದಾರೆ. ತಮ್ಮ ವೈಯಕ್ತಿಕ ಮಹಿಮೆಗಾಗಿ ಅಲ್ಲ, ಮುಂದಿನ ಯುವ ಪೀಳಿಗೆಗಳ ಏಳಿಗೆಗಾಗಿ ಅವರ ಕನಸುಗಳನ್ನು ಬೆಳೆಸಲು ಬೆಂಬಲವಾಗಿ ನಿಂತಿದ್ದಾರೆ ಎಂದರು.
ಸಂಸ್ಥಾಪಕ ಅಮೋದ್ರಾಜ್ ಭಿಂಗೆ , ವ್ಯವಸ್ಥಾಪನಾ ನಿರ್ದೇಶಕರಾದ ಜಿತೇಂದ್ರ ಪುರೋಹಿತ್ , ಕಾರ್ಯಾಚರಣಾ ಮುಖ್ಯಸ್ಥರಾದ ಮುಕುಂದ್ ಪುರೋಹಿತ್ , ಸೃಜನಾತ್ಮಕ ನಿರ್ದೇಶಕಿ ಮಂಷಾ ಪುರೋಹಿತ್ ಅವರು ಈ ಸಂಸ್ಥೆಗೆ ಬೆನ್ನುಲುಬಾಗಿ ನಿಂತಿದ್ದಾರೆ.
ಭಾರತ ದೇಶದಲ್ಲಿ ಗಟ್ಟಿಯಾಗಿ ಬೆಳೆದು ನಿಂತಿರುವ ಅಮೋದ್ರಾಜ್ ರಾಜ್ ಸ್ಪೋರ್ಟ್ ಅಕಾಡೆಮಿ ಅವರು, ಕ್ರೀಡೆಗಳ ಅಭಿವೃದ್ಧಿಗೆ ಹೊಸ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ. ಮೌಲ್ಯಗಳು, ಸಮುದಾಯದ ಬೆಳವಣಿಗೆ ಮತ್ತು ಸುವ್ಯವಸ್ಥಿತ ಬೆಂಬಲದ ಮೇಲೆ ಗಮನವಿಟ್ಟು “ಅಮೋದ್ರಾಜ್ ಸ್ಪೋರ್ಟ್ಸ್ ಅಕಾಡೆಮಿ” ಯುವ ಕ್ರೀಡೆಗಳಲ್ಲಿ ಪ್ರಾಯೋಜನೆಗೆ ಹೊಸ ಮಟ್ಟದ ಮಾದರಿಯನ್ನು ಸ್ಥಾಪಿಸುತ್ತಿದೆ ಎಂದರು.
“ಅಮೋದ್ರಾಜ್ ಸ್ಪೋರ್ಟ್ಸ್ ಅಕಾಡೆಮಿ” ವತಿಯಿಂದ U15 ಫುಟ್ಬಾಲ್ ಟೂರ್ನಿ ಬೆಳಗಾವಿಯಲ್ಲಿ ಯಶಸ್ವಿಯಾಗಿ ನಡೆದಿದೆ. DUFC ತಂಡ ಸೆಟಸಾಟ ನಡೆಸಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡಕ್ಕೆ ಅಭಿನಂದನೆ ಎಂದು ಶುಭಹಾರೈಸಿದರು. ಫೈನಲ್ ಪಂದ್ಯದಲ್ಲಿ DUFC ಪಕ್ಕದ ಗೋಲ್: ಅರ್ಪಿತ್ ಪರಮಶೆಟ್ಟಿ ಹಾಗೂ ರೆಗ್ FC ಪಕ್ಕದ ಗೋಲ್: ಶ್ರೇಯಾಶ್ ಅವರು ಕೊನೆಯಲ್ಲಿ ಸೆಟಸಾಟ ನಡೆಸಿದರು, ಪೈನಲ್ ನಲ್ಲಿ DUFC 5-4ರಿಂದ ಅಂಕದಿಂದ ಗೆದ್ದು ಚಾಂಪಿಯನ್ ಹೊರಹೊಮ್ಮಿತ್ತು.
ಶ್ರೇಷ್ಠ ಆಟಗಾರರು: ಅತ್ಯುತ್ತಮ ಸ್ಟೈಕರ್ – ಶ್ರೇಯಾಶ್ (ಕರುನಾಡು FC), ಅತ್ಯುತ್ತಮ ಗೋಲ್ಕೀಪರ್ – ಪ್ಯಾಸ್ಕಲ್ (ರೆಗ್ FC), ಟೂರ್ನಿಯ ಅತ್ಯುತ್ತಮ ಆಟಗಾರ – ಪ್ರಣೀತ್ ಸಪ್ಲೆ (DUFC), ಅವರು ಶ್ರೇಷ್ಠ ಆಟಗಾರರಾಗಿ ಪ್ರಶಸ್ತಿ ಸ್ವೀಕರಿಸಿದರು.
ಈ ವೇಳೆ ಟಿ.ಎಸ್. ಸತ್ಯನಾರಾಯಣ, ಹೆಡ್ ಆಫ್ ಆಫೀಸ್, ಟೆಲ್ಕೊ ಗ್ರೂಪ್ U.A.E
ಸಹ ಸಂಸ್ಥಾಪಕರಾದ ಮುಕುಂದ್ ಪುರೋಹಿತ್, ಹೃಷಿಕೇಶ್ ಬ್ಯಾಂಗ್ ಹಾಗೂ ಇತರರು ಇದ್ದರು.